ಹಾರ್ದಿಕ್ ಪಾಂಡ್ಯ: ಕ್ರಿಕೆಟ್ ಮೈದಾನದಲ್ಲಿ ಸಾಟಿಯಿಲ್ಲದ ಸವ್ಯಸಾಚಿ ಆಟಗಾರ, ಮೈದಾನದಾಚೆ ಯೂಥ್ ಐಕಾನ್!

ಹಾರ್ದಿಕ್ ಪಾಂಡ್ಯ: ಕ್ರಿಕೆಟ್ ಮೈದಾನದಲ್ಲಿ ಸಾಟಿಯಿಲ್ಲದ ಸವ್ಯಸಾಚಿ ಆಟಗಾರ, ಮೈದಾನದಾಚೆ ಯೂಥ್ ಐಕಾನ್!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 02, 2021 | 9:34 PM

ಕ್ರಿಕೆಟ್ ಮೈದಾನದಲ್ಲಿ ಅವರು ನಿರ್ಭೀತಿಯ ಆಟಗಾರನೆನ್ನುವುದು ನಿರ್ವಿವಾದಿತ. ಮೈದಾನದ ಹೊರಗೂ ಅವರು ಹರ್ ಫನ್ ಮೌಲ ಅಂದರೆ ಜಾಲಿ ಸ್ವಭಾವದ ವ್ಯಕ್ತಿ. 27-ವರ್ಷ ವಯಸ್ಸಿನ ಹಾರ್ದಿಕ ಯೂಥ್ ಐಕಾನ್ ಅಂತ ಗುರುತಿಸಿಕೊಂಡಿದ್ದಾರೆ.

ಲೆಜೆಂಡರಿ ಆಲ್-ರೌಂಡರ್ ಕಪಿಲ್ ದೇವ್ ಅವರ ನಿವೃತ್ತಿಯ ನಂತರ ಅವರ ಕ್ಯಾಲಿಬರ್ ಮತ್ತೊಬ್ಬ ಸವ್ಯಸಾಚಿ ಆಟಗಾರನನ್ನು ಭಾರತ ತಲಾಷ್ ಮಾಡುತ್ತಲೇ ಇದೆಯಾದರೂ ಯೋಗ್ಯ ರಿಪ್ಲೇಸ್ ಮೆಂಟ್ ಇದುವರೆಗೆ ಸಿಕ್ಕಿಲ್ಲ. ಯುವರಾಜ ಸಿಂಗ್ ನಿಸ್ಸಂದೇಹವಾಗಿ ಅತ್ಯುತ್ತಮ ಅಲ್-ರೌಂಡರ್, ಆದರೆ ಅವರೊಬ್ಬ ಸ್ಪಿನ್ನರ್ ಆಗಿದ್ದರು. ದೇಶೀಯ ಕ್ರಿಕೆಟ್ನಲ್ಲಿ ಬರೋಡ ಮತ್ತು ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ಹಾರ್ದಿಕ್ ಪಾಂಡ್ಯ ಭಾರಿ ಭರವಸೆ ಮೂಡಿಸಿದ್ದ ಆಲ್-ರೌಂಡರ್ ಅನ್ನೋದೇನೋ ನಿಜ ಆದರೆ 2016ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರೂ ಟೆಸ್ಟ್ ತಂಡದಲ್ಲಿ ಇದುವರೆಗೆ ಖಾಯಂ ಸ್ಥಾನ ಗಿಟ್ಟಿಸಿಕೊಂಡಿಲ್ಲ. ಈ 5 ವರ್ಷಗಳ ಅವಧಿಯಲ್ಲಿ ಕೇವಲ 11 ಟೆಸ್ಟ್ಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ.

ಕ್ರಿಕೆಟ್ ಮೈದಾನದಲ್ಲಿ ಅವರು ನಿರ್ಭೀತಿಯ ಆಟಗಾರನೆನ್ನುವುದು ನಿರ್ವಿವಾದಿತ.
ಮೈದಾನದ ಹೊರಗೂ ಅವರು ಹರ್ ಫನ್ ಮೌಲ ಅಂದರೆ ಜಾಲಿ ಸ್ವಭಾವದ ವ್ಯಕ್ತಿ. 27-ವರ್ಷ ವಯಸ್ಸಿನ ಹಾರ್ದಿಕ ಯೂಥ್ ಐಕಾನ್ ಅಂತ ಗುರುತಿಸಿಕೊಂಡಿದ್ದಾರೆ.

ಅವರ ಉಡುಗೆ-ತೊಡುಗೆ, ಬಗೆಬಗೆಯ ಕೇಶ ವಿನ್ಯಾಸ ಇಂಗ್ಲಿಷ್ ಪ್ರಿಮೀಯರ್ ಲೀಗ್ ನಲ್ಲಿ ಬೇರೆ ಬೇರೆ ಕ್ಲಬ್ಗಳಿಗೆ ಆಡುವ ಸಾಕರ್ ಆಟಗಾರರ ಹೇರ್ ಸ್ಟೈಲ್​ಗಳಿಗೆ ಮೀರಿಸುವಂಥವು! ಅವರ ಉಡುಗೆಯಲ್ಲಿ ಕೆರೀಬಿಯನ್ ಝಲಕ್ ನಿಚ್ಚಳವಾಗಿ ಕಾಣುತ್ತದೆ.

ತಮ್ಮ ಬಹುಕಾಲದ ಗೆಳತಿ ನತಾಶಾ ಸ್ಟ್ಯಾಂಕೊವಿಚ್ ಅವರನ್ನು ಮದುವೆಯಾಗಿ ಒಂದು ಮಗುವಿನ ತಂದೆಯೂ ಆಗಿರುವ ಹಾರ್ದಿಕ್ ಫಿಟ್ನೆಸ್ ಸಮಸ್ಯೆಯನ್ನು ಪದೇಪದೆ ಎದುರಿಸುತ್ತಿದ್ದಾರೆ. ಹಾಗಾಗೇ ಅವರ ಕರೀಯರ್ ಟೇಕಾಫ್ ಆಗುತ್ತಿಲ್ಲ. ಒಂದು ಸರಣಿ ಆಡಿದ ಬಳಿಕ ಮತ್ತೊಂದು ಸರಣಿಗೆ ಗಾಯಗೊಂಡು ಅಲಭ್ಯರಾಗುತ್ತಾರೆ.

ಸೀಮಿತ ಓವರ್​ಗಳ ಕ್ರಿಕೆಟ್ ನಲ್ಲಿ ಹಾರ್ದಿಕ್ ಚಾಂಪಿಯನ್ ಆಟಗಾರ. ಈ ವರ್ಷ ಮತ್ತು ಮುಂದಿನ ವರ್ಷವೂ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಇವುಗಳಲ್ಲಿ ಅವರು ಭಾರತದ ಟ್ರಂಪ್ ಕಾರ್ಡ್ ಆಗುವ ಸಾಧ್ಯತೆಯಿದೆ.

ಇದನ್ನೂ ಓದಿ:  IPL 2021: ಹಾರ್ದಿಕ್ ಪಾಂಡ್ಯ ಮೈದಾನಕ್ಕಿಳಿಯುವುದು ಯಾವಾಗ? ಮುಂಬೈ ಮೆಂಟರ್ ಜಹೀರ್ ಖಾನ್ ಕೊಟ್ರು ಬಿಗ್ ಅಪ್ಡೇಟ್!