Temple Tour: ಕುಕ್ಕೇ ಸುಬ್ರಹ್ಮಣ್ಯ ದೇಗುಲದಷ್ಟೇ ಪ್ರಸಿದ್ಧಿ ಪಡೆದಿದೆ ಹಾಸನದ ಪ್ರಸನ್ನ ಸುಬ್ರಹ್ಮಣ್ಯ ದೇವಾಲಯ
ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಅದೀನದಲ್ಲೇ ಇರುವ ಈ ದೇಗಲದಲ್ಲಿರುವ ಸುಬ್ರಹ್ಮಣ್ಯನ ವಿಗ್ರಹವೇ ಮೂಲ ವಿಗ್ರಹ ಎಂದೂ ಹೇಳಲಾಗುತ್ತಿದೆ.
ಹಾಸನ ಜಿಲ್ಲೆ ಹಲವು ಐತಿಹಾಸಿಕ ದೇಗುಲಗಳನ್ನು ಹೊಂದಿರುವ, ಇತಿಹಾಸ ಪ್ರಸಿದ್ದ, ಸುಂದರ ವಾಸ್ತುಶಿಲ್ಪಗಳ ನೆಲೆಬೀಡು. ಜೊತೆಗೆ ಇಲ್ಲಿನ ಧಾರ್ಮಿಕ ಶ್ರದ್ದಾಕೇಂದ್ರಗಳು ಕೂಡ ಭಕ್ತರನ್ನ ಸೆಳೆಯುತ್ತವೆ. ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಶ್ರೀ ಪ್ರಸನ್ನ ಸುಬ್ರಹ್ಮಣ್ಯ ದೇಗುಲ ದಕ್ಷಿಣ ಕರ್ನಾಟಕದ ಜನರ ಪಾಲಿಗೆ ಕುಕ್ಕೇ ಸುಬ್ರಹ್ಮಣ್ಯ ದೇಗುಲದಷ್ಟೇ ಪ್ರಸಿದ್ಧಿ ಪಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಅಧೀನದಲ್ಲಿ ಇರುವ ಈ ದೇಗಲದಲ್ಲಿರುವ ಸುಬ್ರಹ್ಮಣ್ಯನ ವಿಗ್ರಹವೇ ಮೂಲ ವಿಗ್ರಹ ಎಂದೂ ಹೇಳಲಾಗುತ್ತಿದೆ. ಪ್ರಸನ್ನ ಸುಬ್ರಹ್ಮಣ್ಯ ಸೇರಿದಂತೆ ಹಲವು ದೇಗುಲಗಳು ಭಕ್ತರನ್ನ ಹರಸಿ ಹಾರೈಸುತ್ತಿವೆ. ಎಲ್ಲಾ ದೇವಾಲಯಗಳಿಗೂ ಮದ್ಯದಲ್ಲಿರುವ ಪ್ರಸನ್ನ ಸುಬ್ರಹ್ಮಣ್ಯ ದೇಗುಲ ಸುತ್ತಮುತ್ತಲ ಜಿಲ್ಲೆಗಳ ಲಕ್ಷ ಲಕ್ಷ ಭಕ್ತರ ಆರಾದ್ಯ ದೈವವಾಗಿದೆ.