Temple Tour: ಕೋಲಾರದಲ್ಲಿದೆ ದಿನಕರನ ಏಕೈಕ ದಿವ್ಯ ಮಂದಿರ

Edited By:

Updated on: Sep 26, 2021 | 8:34 AM

ಪುರಾಣ ಕಾಲದಲ್ಲಿ ಈಗ ದೇವಾಲಯವಿರುವ ಸ್ಥಳದಲ್ಲೇ ಋಷಿ ಯಜ್ಞಾಮಲ್ಕರ ಆಶ್ರಮ ಇತ್ತಂತೆ. ಅಷ್ಟ ಗ್ರಹಕೂಟ ಒಂದಾದ ಸಮಯದಲ್ಲಿ ಈ ಸ್ಥಳದಲ್ಲಿ ಸೂರ್ಯ ದೇವಾಲಯವನ್ನ ಸ್ಥಾಪನೆ ಮಾಡಲಾಯಿತು ಅನ್ನುತ್ತೆ ಇಲ್ಲಿನ ಸ್ಥಳ ಪುರಾಣ.

ಪ್ರತಿ ನಿತ್ಯ ಜಗತ್ತಿಗೆಲ್ಲಾ ಬೆಳಕು ಕೊಡುವ ಸೂರ್ಯ ದೇವನಿಗಾಗಿಯೇ ಚಿನ್ನದ ನಾಡಿನಲ್ಲಿ ಒಂದು ದಿವ್ಯ ಮಂದಿರವಿದೆ. ಸೂರ್ಯ ಜಗತ್ತಿನ ಅಂಧಕಾರವನ್ನು ಓಡಿಸಿ ಲೋಕವನ್ನು ಬೆಳಗುವವನು. ನವ ಗ್ರಹಗಳ ಅಧಿದೇವತೆಯಾಗಿರುವ ಆದಿತ್ಯನಿಗೆ ನಮ್ಮ ರಾಜ್ಯದಲ್ಲಿ ಒಂದೇ ಒಂದು ದೇವಾಲಯ ಇದೆ ಅಂದರೆ ನಿಮಗೆ ಅಚ್ಚರಿಯಾಗುತ್ತದೆ. ವಿಜಯ ನಗರ ಸಾಮ್ರಾಜ್ಯ ಕಾಲದಲ್ಲಿ ಭಾಸ್ಕರ ಕ್ಷೇತ್ರ ಎಂದೇ ಹೆಸರುವಾಸಿಯಾಗಿದ್ದ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಮೂಡಣಾಧಿಪತಿ ಭಾಸ್ಕರನ ಐತಿಹಾಸಿಕ ಮಂದಿರವಿದೆ. ರಾಜ್ಯದ ಏಕೈಕ ಸೂರ್ಯ ದೇವಾಲಯವಾಗಿರುವ ಈ ಮಂದಿರಕ್ಕೆ ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆ ಇದೆ. ಪುರಾಣ ಕಾಲದಲ್ಲಿ ಈಗ ದೇವಾಲಯವಿರುವ ಸ್ಥಳದಲ್ಲೇ ಋಷಿ ಯಜ್ಞಾಮಲ್ಕರ ಆಶ್ರಮ ಇತ್ತಂತೆ. ಅಷ್ಟ ಗ್ರಹಕೂಟ ಒಂದಾದ ಸಮಯದಲ್ಲಿ ಈ ಸ್ಥಳದಲ್ಲಿ ಸೂರ್ಯ ದೇವಾಲಯವನ್ನ ಸ್ಥಾಪನೆ ಮಾಡಲಾಯಿತು ಅನ್ನುತ್ತೆ ಇಲ್ಲಿನ ಸ್ಥಳ ಪುರಾಣ.