Temple Tour: ಶ್ರೀರಾಮ, ಸೀತೆ ವನವಾಸಕ್ಕೆ ಬಂದಿದ್ದ ಕಾಲದಲ್ಲಿ ನಿರ್ಮಾಣವಾಯ್ತು ಈ ಮಂದಿರ
ಕೆಲವೊಂದು ಧಾರ್ಮಿಕ ಕ್ಷೇತ್ರಗಳು ಮನುಷ್ಯನ ಊಹೆಗೂ ಮೀರಿದ ವಿಚಿತ್ರಗಳನ್ನ ಹೊತ್ತು ನಿಂತಿರುತ್ತವೆ. ಅಂತಾ ಒಂದು ಮಹಿಮಾ ಸ್ಥಳವಾಗಿದೆ ದಾವಣಗೆರೆಯ ತೀರ್ಥ ರಾಮೇಶ್ವರ ಕ್ಷೇತ್ರ. ಕಾಶಿಯಿಂದ ಹರಿಯುವ ಗಂಗೆ ಇಲ್ಲಿನ ಕೊಳ ಸೇರುವ ಐತಿಹ್ಯ ಈ ಮಂದಿರದಲ್ಲಿದೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಬೆಳಗುಪ್ಪ ಗ್ರಾಮದಲ್ಲಿರುವ ತೀರ್ಥ ರಾಮೇಶ್ವರ ಕ್ಷೇತ್ರ ಅಂದ್ರೆ ಸುತ್ತಮುತ್ತಲಿನ ಜನರಿಗೆ ಅಪಾರ ಭಕ್ತಿ ಭಾವ. ಶ್ರೀರಾಮ ಮತ್ತು ಸೀತೆ ವನವಾಸಕ್ಕೆ ಬಂದಿದ್ದ ಕಾಲದಲ್ಲಿ ಈ ಮಂದಿರ ನಿರ್ಮಾಣವಾಯ್ತು ಅನ್ನುತ್ತೆ ಇಲ್ಲಿನ ಸ್ಥಳ ಪುರಾಣ. ಸೀತಾ […]
ಕೆಲವೊಂದು ಧಾರ್ಮಿಕ ಕ್ಷೇತ್ರಗಳು ಮನುಷ್ಯನ ಊಹೆಗೂ ಮೀರಿದ ವಿಚಿತ್ರಗಳನ್ನ ಹೊತ್ತು ನಿಂತಿರುತ್ತವೆ. ಅಂತಾ ಒಂದು ಮಹಿಮಾ ಸ್ಥಳವಾಗಿದೆ ದಾವಣಗೆರೆಯ ತೀರ್ಥ ರಾಮೇಶ್ವರ ಕ್ಷೇತ್ರ. ಕಾಶಿಯಿಂದ ಹರಿಯುವ ಗಂಗೆ ಇಲ್ಲಿನ ಕೊಳ ಸೇರುವ ಐತಿಹ್ಯ ಈ ಮಂದಿರದಲ್ಲಿದೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಬೆಳಗುಪ್ಪ ಗ್ರಾಮದಲ್ಲಿರುವ ತೀರ್ಥ ರಾಮೇಶ್ವರ ಕ್ಷೇತ್ರ ಅಂದ್ರೆ ಸುತ್ತಮುತ್ತಲಿನ ಜನರಿಗೆ ಅಪಾರ ಭಕ್ತಿ ಭಾವ. ಶ್ರೀರಾಮ ಮತ್ತು ಸೀತೆ ವನವಾಸಕ್ಕೆ ಬಂದಿದ್ದ ಕಾಲದಲ್ಲಿ ಈ ಮಂದಿರ ನಿರ್ಮಾಣವಾಯ್ತು ಅನ್ನುತ್ತೆ ಇಲ್ಲಿನ ಸ್ಥಳ ಪುರಾಣ. ಸೀತಾ ಮಾತೆಯ ದಾಹವನ್ನು ತಣಿಸೋಕೆ ಪ್ರಭು ಶ್ರೀರಾಮ ತನ್ನ ಬಾಣದ ಮೂಲಕ ಇಲ್ಲಿ ಕಾಶಿಯಿಂದ ಗಂಗೆ ಹರಿಯುವಂತೆ ಮಾಡಿದನಂತೆ. ದಾಹ ತೀರಿದ ಬಳಿಕ ಸೀತಾಮಾತೆ ಇಲ್ಲಿ ದೇವರ ಮೂರ್ತಿಯೊಂದು ಬೇಕು ಅಂದಾಗ ಉದ್ಭವ ಮೂರ್ತಿಯೊಂದು ರಾಮನಿಂದ ಪ್ರತಿಷ್ಠಾಪನೆ ಆಯ್ತಂತೆ. ಹೀಗೆ ರಾಮನಿಂದ ಪ್ರತಿಷ್ಠಾಪನೆಯಾದ ಕ್ಷೇತ್ರಕ್ಕೆ ತೀರ್ಥ ರಾಮೇಶ್ವರ ಕ್ಷೇತ್ರ ಅನ್ನೋ ಹೆಸರು ಬಂದಿದೆ ಅನ್ನುತ್ತೆ ಐತಿಹ್ಯ.