ದೇವನಹಳ್ಳಿ: ವೇಗವಾಗಿ ಬಂದು ಟೋಲ್ ಬೂತ್‌ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ
ಶುಕ್ರವಾರ ಮುಂಜಾನೆ ಸ್ಲೀಪರ್ ಕೋಚ್ ಬಸ್ ದೇವನಹಳ್ಳಿ ಟೋಲ್ ಬೂತ್‌ಗೆ ಡಿಕ್ಕಯಾಗಿ, ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ. ದೇವನಹಳ್ಳಿ ಟೋಲ್ ಪ್ಲಾಜಾ ಬಳಿ ನಡೆದ ಈ ಅಪಘಾತದ ಸಂಪೂರ್ಣ ಚಿತ್ರಣ ಇದೀಗ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸಿಸಿಟಿವಿ ವಿಡಿಯೋ ಇಲ್ಲಿದೆ.
ದೇವನಹಳ್ಳಿ, ಜನವರಿ 2: ದೇವನಹಳ್ಳಿ ಟೋಲ್ ಪ್ಲಾಜಾ ಬಳಿ ಶುಕ್ರವಾರ ಮುಂಜಾನೆ ಸ್ಲೀಪರ್ ಕೋಚ್ ಬಸ್ ಅಪಘಾತ ಸಂಭವಿಸಿದ್ದು, ಅದರ ಭೀಕರ ದೃಶ್ಯಗಳು ಟೋಲ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಟೋಲ್ ಬೂತ್‌ಗೆ ಗುದ್ದಿದ ನಂತರ ಬಸ್ ಸುಮಾರು ನೂರು ಮೀಟರ್ ದೂರ ಮುಂದಕ್ಕೆ ಚಲಿಸಿದ್ದು, ನಂತರ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಮತ್ತೆ ಹಿಂದಕ್ಕೆ ಚಲಿಸಿದೆ. ಹಿಂದಕ್ಕೆ ಚಲಿಸಿ ನೇರವಾಗಿ ಟೋಲ್ ಬೂತ್‌ಗೆ ಮತ್ತೆ ಡಿಕ್ಕಿ ಹೊಡೆದು ನಿಂತಿದೆ. ಈ ವೇಳೆ ಪಲ್ಟಿಯಾಗುವುದರಲ್ಲಿದ್ದ ಬಸ್ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಇದರಿಂದಾಗಿ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಅಪಘಾತವಾಗುತ್ತಿದ್ದಂತೆ ಕೆಲ ಪ್ರಯಾಣಿಕರು ಬಸ್‌ನಿಂದ ಕೆಳಕ್ಕೆ ಜಿಗಿದು, ಬಸ್ ನಿಲ್ಲಿಸಲು ಯತ್ನಿಸಿದ ದೃಶ್ಯಗಳೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.