ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಕರ್ನಾಟಕದ ಅನೇಕ ಕಡೆಗಳಲ್ಲಿ ಸುರಿದ ಭಾರಿ ಮಳೆ ಅನೇಕ ಅವಾಂತರಗಳನ್ನು ಸೃಷ್ಟಿಸಿದೆ. ಬೆಂಗಳೂರಿನಲ್ಲಂತೂ ರಸ್ತೆಗಳೇ ನದಿಗಳಂತಾಗಿದ್ದವು. ಇದೀಗ ದೇವನಹಳ್ಳಿ ತಾಲೂಕಿನ ನಾಗರ್ಜುನಾ ಕಾಲೇಜು ಬಳಿ ಕಾಲುವೆಯೊಂದರ ನೀರಿನಲ್ಲಿ ಕಾರುಗಳು ಕೊಚ್ಚಿಕೊಂಡು ಬಂದಿವೆ.
ದೇವನಹಳ್ಳಿ, ಅಕ್ಟೋಬರ್ 22: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ಚಿಕ್ಕಬಳ್ಳಾಪುರ ಸುತ್ತಮುತ್ತ ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ದೇವನಹಳ್ಳಿ ತಾಲೂಕಿನ ನಾಗರ್ಜುನಾ ಕಾಲೇಜು ಬಳಿ ಮಳೆ ನೀರಿನ ರಭಸಕ್ಕೆ ಎರಡು ಕಾರುಗಳು ಕಾಲುವೆಯಲ್ಲಿ ಕೊಚ್ಚಿಕೊಂಡು ಬಂದಿವೆ. ಸೋಮವಾರ ರಾತ್ರಿ ಕಾಲುವೆ ನೀರಿನಲ್ಲಿ 2 ಕಾರುಗಳು ಕೊಚ್ಚಿಕೊಂಡು ಬಂದಿವೆ. ಕಾಲುವೆಯಲ್ಲಿ ಮಾರುತಿ ಆಸ್ಟರ್ ಕಾರು ಸಂಪೂರ್ಣ ಮುಳುಗಡೆಯಾಗಿದ್ದರೆ, ಮತ್ತೊಂದು ಕಾರು ಕಾಲುವೆ ದಡದಲ್ಲಿ ಕಂಡುಬಂದಿದಿದೆ.
ಹುರಳಗುರ್ಕಿ ಗ್ರಾಮದ 6 ಜನರು ಕಾರಿನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದದಾಗ ಮಳೆ ನೀರಿನ ರಭಸಕ್ಕೆ ಕಾರು ಏಕಾಏಕಿ ಕೊಚ್ಚಿಹೋಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ 6 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಧಾರಾಕಾರ ಮಳೆಯಿಂದ ರಸ್ತೆ ತುಂಬಾ ಮಳೆ ನೀರು ಹರಿಯುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಕಾರಿನಲ್ಲಿದ್ದವರು, ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು ಎಂಬುದೂ ವಿಡಿಯೋದಲ್ಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ