ಎಸ್ಐಟಿ ಅಧಿಕಾರಿಗಳು ದೇವರಾಜೇಗೌಡನನ್ನು ಎಳೆದೊಯ್ದು ಬಾಯಿ ಬಿಡಿಸಿದರೆ ಪ್ರಕರಣ ಇತ್ಯರ್ಥಗೊಳ್ಳುತ್ತದೆ: ಶಿವರಾಮೇಗೌಡ

|

Updated on: May 08, 2024 | 4:54 PM

ದೇವರಾಜೇಗೌಡರನ್ನು ಡಿಕೆ ಶಿವಕುಮಾರ್ ಜೊತೆ ಭೇಟಿ ಮಾಡಿಸಿದ್ದೆ ಎಂದು ಹೇಳುವ ಶಿವರಾಮೇಗೌಡ ಅದೇ ದಿನ ದೆವರಾಜೇಗೌಡ ತಾವೀಗ ನಡೆಸುತ್ತಿರುವ ಹೋಟೆಲ್ ನಲ್ಲಿ ಬಂದು ಭೇಟಿಯಾಗಿದ್ದರು ಎಂದು ಹೇಳುತ್ತಾರೆ. ಯಾಕೆ ಭೇಟಿಯಾಗಿರಬಹುದೆಂದು ಅವರು ಊಹಿಸುತ್ತಾರೆಯೇ ಹೊತು ಖಚಿತವಾಗಿ ಹೇಳಲ್ಲ. ಶಿವಕುಮಾರ್ ಅವರಿಂದ ದುಡ್ಡು ಪಡೆಯಲು ಅವರು ಬಯಸಿದ್ದರು ಅನಿಸುತ್ತೆ ಎಂದು ಮಾಜಿ ಸಂಸದ ಹೇಳುತ್ತಾರೆ.

ಬೆಂಗಳೂರು: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳು (SIT officials) ತನಿಖೆ ಮಾಡುತ್ತಿರಬೇಕಾದರೆ, ಮಾಜಿ ಸಂಸದ ಎಲ್ ಅರ್ ಶಿವರಾಮೇಗೌಡ (LR Shivaramegowda) ಮತ್ತು ಪ್ರಕರಣದಲ್ಲಿ ಒಬ್ಬ ಪಾತ್ರಧಾರಿಯಾಗಿರುವ ದೇವರಾಜೇಗೌಡ (Devarajegowda) ಮೊದಲಾದವರ ಮಾತುಗಳಿಗೆ ಬೆಲೆ ನೀಡಬೇಕೇ? ಯಾಕೆಂದರೆ ಮಾಧ್ಯಮಗಳ ಮುಂದೆ ಇವರು ನೀಡುವ ಹೇಳಿಕೆಗಳಲ್ಲಿ ಸ್ಥಿರತೆ ಇರಲ್ಲ. ಇವತ್ತು ನಗರದ ಖಾಸಗಿ ಹೋಟೆಲೊಂದರಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಶಿವರಾಮೇಗೌಡ ಎಸ್ಐಟಿ ಅಧಿಕಾರಿಗಳು ದೆವರಾಜೇಗೌಡರನ್ನು ಎಳೆದೊಯ್ದು ಬಾಯಿಬಿಡಿಸಿದರೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳು ಬಯಲಿಗೆ ಬರುತ್ತವೆ ಎನ್ನುತ್ತಾರೆ. ದೇವರಾಜೇಗೌಡರನ್ನು ಡಿಕೆ ಶಿವಕುಮಾರ್ ಜೊತೆ ಭೇಟಿ ಮಾಡಿಸಿದ್ದೆ ಎಂದು ಹೇಳುವ ಶಿವರಾಮೇಗೌಡ ಅದೇ ದಿನ ದೆವರಾಜೇಗೌಡ ತಾವೀಗ ನಡೆಸುತ್ತಿರುವ ಹೋಟೆಲ್ ನಲ್ಲಿ ಬಂದು ಭೇಟಿಯಾಗಿದ್ದರು ಎಂದು ಹೇಳುತ್ತಾರೆ. ಯಾಕೆ ಭೇಟಿಯಾಗಿರಬಹುದೆಂದು ಅವರು ಊಹಿಸುತ್ತಾರೆಯೇ ಹೊತು ಖಚಿತವಾಗಿ ಹೇಳಲ್ಲ. ಶಿವಕುಮಾರ್ ಅವರಿಂದ ದುಡ್ಡು ಪಡೆಯಲು ಅವರು ಬಯಸಿದ್ದರು ಅನಿಸುತ್ತೆ ಎಂದು ಮಾಜಿ ಸಂಸದ ಹೇಳುತ್ತಾರೆ. ಈ ವಿಡಿಯೋ ಕ್ಲಿಪ್ ನಲ್ಲಿ ಅವರು ಹೇಳುತ್ತಿರುವುದು ಒಂದೇ: ತನಿಖಾಧಿಕಾರಿಗಳು ದೇವರಾಜೇಗೌಡನನ್ನ ವಶಕ್ಕೆ ಪಡೆದು ಬಾಯಿ ಬಿಡಿಸಬೇಕು. ಯಾವುದನ್ನೂ ಖಚಿತವಾಗಿ ಹೇಳದ ಇವರು ಪತ್ರಿಕಾ ಗೋಷ್ಟಿ ಯಾಕೆ ನಡೆಸುತ್ತಾರೋ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Prajwal Revanna; ಹಾಸನಕ್ಕೆ ಹೋಗೋದು ಅಪರೂಪ, ಪ್ರಜ್ವಲ್ ಜೊತೆ ಹೆಚ್ಚಿನ ಒಡನಾಟವಿಲ್ಲ: ನಿಖಿಲ್ ಕುಮಾರಸ್ವಾಮಿ

Published on: May 08, 2024 04:13 PM