ನಿಮ್ಮನ್ನೂ ದೇವೇಗೌಡ್ರು ಉಚ್ಛಾಟಿಸಿದ್ರು: ಸಿದ್ದರಾಮಯ್ಯಗೆ ಯತ್ನಾಳ್ ಚಮಕ್

Updated on: Aug 22, 2025 | 5:27 PM

ಗುತ್ತಿಗೆದಾರರ ಬಿಲ್​ ಪಾವತಿಗೆ ಸಂಬಂಧಿಸಿದಂತೆ ಚರ್ಚೆ ವೇಳೆ ಸಿಎಂ ಹಾಗೂ ಬಿಜೆಪಿ ಶಾಸಕರ ನಡುವೆ ಆರೋಪ ಪ್ರತ್ಯಾರೋಪ ನಡೆದಿದ್ದು, ಈ ವೇಳೆ ಬೊಮ್ಮಾಯಿ ಸಿಎಂ ಆಗಿದ್ದಾಗ ಎಲ್ಲರಿಗೂ ಬರೆದು ಕೊಡುವುದೇ ಇದನ್ನು ಅರ್ಥಮಾಡ್ಕೊ ಎಂದು ಸಿಎಂ ಸಿದ್ದರಾಮಯ್ಯನವರು, ಬಿಜೆಪಿ ಶಾಸಕ ಸುರೇಶ್ ಗೌಡಗೆ ಹೇಳಿದರು. ಈ ವೇಳೆ ಎದ್ದು ಬಾದಾಮಿಗೆ ಕೊಟ್ರಲ್ಲ ನಮ್ಮ ಇಬ್ಬರು ಎಂದು ಯತ್ನಾಳ್ ಛೇಡಿಸಿದರು. ಈ ವೇಳೆ ಕುತ್ಕೊಳ್ಳ್ರಿ ನಿಮ್ಮನ್ನು ಉಚ್ಚಾಟನೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಟಾಂಗ್ ಕೊಟ್ಟರು. ಇದಕ್ಕೆ ಪ್ರತಿಯಾಗಿ ಯತ್ನಾಳ್ ಸಹ ನಿಮ್ಮನ್ನು ಕೂಡ ದೇವೇಗೌಡ್ರು ಜೆಡಿಎಸ್​​ ನಿಂದ ಉಚ್ಚಾಟನೆ ಮಾಡಿದ್ರಲ್ಲ ಎಂದ ತಿರುಗೇಟು ನೀಡಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ.

ಬೆಂಗಳೂರು, (ಆಗಸ್ಟ್ 22): ಗುತ್ತಿಗೆದಾರರ ಬಿಲ್​ ಪಾವತಿಗೆ ಸಂಬಂಧಿಸಿದಂತೆ ಚರ್ಚೆ ವೇಳೆ ಸಿಎಂ ಹಾಗೂ ಬಿಜೆಪಿ ಶಾಸಕರ ನಡುವೆ ಆರೋಪ ಪ್ರತ್ಯಾರೋಪ ನಡೆದಿದ್ದು, ಈ ವೇಳೆ ಬೊಮ್ಮಾಯಿ ಸಿಎಂ ಆಗಿದ್ದಾಗ ಎಲ್ಲರಿಗೂ ಬರೆದು ಕೊಡುವುದೇ ಇದನ್ನು ಅರ್ಥಮಾಡ್ಕೊ ಎಂದು ಸಿಎಂ ಸಿದ್ದರಾಮಯ್ಯನವರು, ಬಿಜೆಪಿ ಶಾಸಕ ಸುರೇಶ್ ಗೌಡಗೆ ಹೇಳಿದರು. ಈ ವೇಳೆ ಎದ್ದು ಬಾದಾಮಿಗೆ ಕೊಟ್ರಲ್ಲ ನಮ್ಮ ಇಬ್ಬರು ಎಂದು ಯತ್ನಾಳ್ ಛೇಡಿಸಿದರು. ಈ ವೇಳೆ ಕುತ್ಕೊಳ್ಳ್ರಿ ನಿಮ್ಮನ್ನು ಉಚ್ಚಾಟನೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಟಾಂಗ್ ಕೊಟ್ಟರು. ಇದಕ್ಕೆ ಪ್ರತಿಯಾಗಿ ಯತ್ನಾಳ್ ಸಹ ನಿಮ್ಮನ್ನು ಕೂಡ ದೇವೇಗೌಡ್ರು ಜೆಡಿಎಸ್​​ ನಿಂದ ಉಚ್ಚಾಟನೆ ಮಾಡಿದ್ರಲ್ಲ ಎಂದ ತಿರುಗೇಟು ನೀಡಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ.

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More