ಬಿಜೆಪಿ ಕೋಮುವಾದಿ ಪಕ್ಷ ಅಲ್ಲವೆಂದು ದೇವೇಗೌಡರಿಗೆ ತಡವಾಗಿ ಗೊತ್ತಾಯಿತು: ಆರ್ ಅಶೋಕ, ವಿಪಕ್ಷ ನಾಯಕ

|

Updated on: Jul 08, 2024 | 10:38 AM

ವಿರೋಧ ಪಕ್ಷದ ನಾಯಕರಾಗಿರುವ ಅಶೋಕ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಯಾವಾಗ ಮಾತಾಡಲಾರಂಬಿಸುತ್ತಾರೋ ಎಂದು ಜನ ನೋಡುತ್ತಿದ್ದಾರೆ. ಆದರೆ ಅವರಿನ್ನೂ ಲೋಕಸಭಾ ಚುನಾವಣೆಯ ಗುಂಗಿನಲ್ಲಿದ್ದಾರೆ. ಇಷ್ಟರಲ್ಲೇ ವಿಧಾನಸಭಾ ಅಧಿವೇಶನ ಶುರುವಾಗಲಿದೆ, ಆಡಳಿತ ಪಕ್ಷದ ವೈಫಲ್ಯಗಳನ್ನು ಪಟ್ಟಿ ಮಾಡಿಕೊಂಡು ಅದನ್ನು ಇಕ್ಕಟ್ಟಿಗೆ ಸಿಕ್ಕಿಸುವ ಕಡೆ ಅಶೋಕ ಗಮನಹರಿಸಿದರೆ ಒಳ್ಳೇದು ಅಂತ ಜನ ಅಂದುಕೊಳ್ಳುತ್ತಿದ್ದಾರೆ.

ನೆಲಮಂಗಲ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿರುವ ಡಾ ಕೆ ಸುಧಾಕರ್ ಅವರನ್ನು ಅಭಿನಂದಿಸುವ ಪ್ರಯುಕ್ತ ನೆಲಮಂಗಲದಲ್ಲಿ ಆಯೋಜಿಸಲಾಗಿದ್ದ ಔತಣ ಕೂಟದಲ್ಲಿ ಭಾಗಿಯಾಗಿದ್ದ ವಿರೋಧ ಪಕ್ಷದ ನಾಯಕ ಆರ್ ಅಶೋಕ, ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡುತ್ತ; ಕಾಂಗ್ರೆಸ್ ಪಕ್ಷದ ಶ್ರೀಮಂತ ಅಭ್ಯರ್ಥಿಯ ಎದುರು ಡಾ ಸುಧಾಕರ್ ಗೆಲ್ತಾರೋ ಇಲ್ಲವೋ ಇಲ್ಲವೋ ಎಂಬ ಅನುಮಾನ ವ್ಯಕ್ತಪಡಿಸಲಾಗಿತ್ತು ಎಂದರು. ತಾನು ದೆಹಲಿ ನಾಯಕರಿಗೆ ಸುಧಾಕರ್ ಕನಿಷ್ಟ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಅಂತ ಆಶ್ವಾಸನೆ ನೀಡಿದ್ದೆ, ಆದರೆ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಕ್ಷೇತ್ರದಲ್ಲಿ ಅಣ್ಣ ತಮ್ಮಂದಿರಂತೆ ಕೆಲಸ ಮಾಡಿ ತಾನು ಹೇಳಿದ್ದಕ್ಕಿಂತ ಡಬಲ್ ಮತಗಳ ಅಂತರದಿಂದ ಅವರನ್ನು ಗೆಲ್ಲಿಸಿದರು ಎಂದು ಅಶೋಕ ಹೇಳಿದರು. ಫಲಿತಾಂಶ ಹೊರಬಿದ್ದಾಗ ಎರಡೂ ಪಕ್ಷಗಳ ಕಾರ್ಯಕರ್ತರು ಒಂದು ವರ್ಷ ಮೊದಲೇ ಮೈತ್ರಿ ಮಾಡಿಕೊಂಡಿದ್ದರೆ ರಾಜ್ಯದಲ್ಲೂ ಅಧಿಕಾರದಲ್ಲಿ ನಾವೇ ಇರುತ್ತಿದ್ದೆವು ಅಂತ ಹೇಳಿದ್ದರು. ಆದರೆ ಆಗ ದೇವೇಗೌಡರಿಗೆ ಬಿಜೆಪಿ ಕೋಮುವಾದಿ ಪಕ್ಷ ಅಲ್ಲ ಮತ್ತು ಕುಮಾರಸ್ವಾಮಿಯವರಿಗೆ ಕಾಂಗ್ರೆಸ್ ತಮ್ಮ ಬೆನ್ನಿಗೆ ಚೂರಿ ಹಾಕಿದ್ದು ಮನವರಿಕೆಯಾಗಿರಲಿಲ್ಲ ಎಂದು ಅಶೋಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿಮುಡಾ ಹಗರಣ: ಗೋಲ್ಮಾಲ್ ಸಿಎಂ 4000 ಕೋಟಿ ಗುಳುಂ, ಆರ್ ಅಶೋಕ ವಾಗ್ದಾಳಿ

 

Follow us on