ಬಳ್ಳಾರಿ: ಉತ್ಸವ ಮೂರ್ತಿಗಾಗಿ ಪರಸ್ಪರ ಬಡಿದಾಟ, ಹರಿದ ನೆತ್ತರು

| Updated By: ವಿವೇಕ ಬಿರಾದಾರ

Updated on: Oct 13, 2024 | 11:22 AM

ಆಂಧ್ರಪ್ರದೇಶ ಮತ್ತು ಕರ್ನಾಟಕ ಗಡಿಯಲ್ಲಿರುವ ಕರ್ನೂಲ್ ಜಿಲ್ಲೆಯ ಆಲೂರು ತಾಲೂಕಿನ‌ ನೆರಣಕ್ಕಿ ಗ್ರಾಮದ ದೇವರಗಟ್ಟದಲ್ಲಿ ನಡೆದ ಜಾತ್ರೆಯಲ್ಲಿ ನೆತ್ತರು ಹರಿದಿದೆ. ಜಾತ್ರೆಗೆ ಬಂದ 10 ಊರಿನವರು ಪರಸ್ಪರ ದೊಣ್ಣೆಯಿಂದ ಬಡಿದಾಡಿಕೊಂಡಿದ್ದಾರೆ. ಈ ಬಡಿದಾಟಕ್ಕೆ ಕಾರಣವೇನು? ಈ ಸ್ಟೋರಿ ಓದಿ.

ಆಂಧ್ರಪ್ರದೇಶ (Andhra Pradesh) ಮತ್ತು ಕರ್ನಾಟಕ (Karnataka) ಗಡಿಯಲ್ಲಿರುವ ಕರ್ನೂಲ್ ಜಿಲ್ಲೆಯ ಆಲೂರು ತಾಲೂಕಿನ‌ ನೆರಣಕ್ಕಿ ಗ್ರಾಮದ ದೇವರಗಟ್ಟದಲ್ಲಿ ನಡೆದ ಜಾತ್ರೆ ಹೆಸರಲ್ಲಿ ನೆತ್ತರು ಹರಿದಿದೆ. ದುರ್ಗಾಷ್ಟಮಿಯಂದು ನಡೆಯುವ ಮಾಳ ಮಲ್ಲೇಶ್ವರ ಕಲ್ಯಾಣೋತ್ಸವ ಜಾತ್ರೆಯಲ್ಲಿ 10 ಊರು ಜನರು ಸೇರುತ್ತಾರೆ. ಈ ಜಾತ್ರೆಯಲ್ಲಿನ ಉತ್ಸವ ಮೂರ್ತಿಯನ್ನು ತಮ್ಮೂರಿಗೆ ಒಯ್ಯಲು 10 ಊರು ಜನರು ದೊಣ್ಣೆ ಹಿಡಿದು ಪರಸ್ಪರ ಹೊಡೆದಾಡುತ್ತಾರೆ.

ದುರ್ಗಾಷ್ಟಮಿ ದಿನದಂದು ಮಧ್ಯರಾತ್ರಿ 01 ಗಂಟೆಯಿಂದ ಬೆಳಗ್ಗೆ 07 ಗಂಟೆವರೆಗು ದೊಣ್ಣೆಯಿಂದ ಹೊಡೆದಾಡುತ್ತಾರೆ. ಹೀಗೆ ಹೊಡೆದಾಡಿ ದೇವರನ್ನು ತಮ್ಮ ಗ್ರಾಮಕ್ಕೆ ಒಯ್ಯದರೆ ಒಳ್ಳೆದಾಗುತ್ತೆ ಎಂಬುವುದು ಭಕ್ತರ ನಂಬಿಕೆ.

ಹೊಡೆದಾಡಿ ಗ್ರಾಮಕ್ಕೆ ಉತ್ಸವ ಮೂರ್ತಿ ತೆಗೆದುಕೊಂಡು ಹೋಗುವುದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದ ಸಾಂಪ್ರದಾಯಿಕ ಆಚರಣೆಯಾಗಿದೆ ಎಂದು ಜಾತ್ರೆಯಲ್ಲಿ ಸೇರಿದ್ದ ಭಕ್ತರು ಹೇಳಿದ್ದಾರೆ. ದೊಣ್ಣೆಗಳಿಂದ ಪರಸ್ಪರ ಹೊಡೆದಾಟದಿಂದ ಹಲವರಿಗೆ ಗಂಭೀರ ಗಾಯವಾಗಿದೆ. ದುರ್ಗಾಷ್ಟಮಿಯಂದು ಇಲ್ಲಿ ರಕ್ತದೋಕಳಿಯೇ ಹರಿದಿರುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow us on