Loading video

ಸೂಲಿಬೆಲೆ ವಿಷಯದಲ್ಲಿ ಬೇರೊಂದು ಕಾರಣಕ್ಕೆ ಡಿಜಿಯವರು ಎಸ್​​ಪಿ ಜೊತೆ ಮಾತಾಡಿದ್ದಾರೆ, ಗಡೀಪಾರಲ್ಲ: ಪರಮೇಶ್ವರ್

Updated on: Jun 12, 2025 | 1:07 PM

ನಿನ್ನೆ ಬಳ್ಳಾರಿಯಲ್ಲಿ ಶಾಸಕರು ಮತ್ತು ಸಂಸದರ ಮನೆಗಳ ಈಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದನ್ನು ಗೃಹ ಸಚಿವ ಅದೊಂದು ಮಾಮೂಲೀ ವಿಷಯವೆಂಬಂತೆ ಮಾತಾಡಿದರು. ರಾಜ್ಯ ಸರ್ಕಾರ ಎಸ್​ಐಟಿಯನ್ನು ರಚಿಸಿ ತನಿಖೆ ಮಾಡಿಸಿದೆ, ಚಾರ್ಜ್​ಶೀಟ್ ಸಲ್ಲಿಕೆಯ ಜೊತೆ ಹಣವನ್ನು ಸಹ ಸಂಪೂರ್ಣವಾಗಿ ರಿಕವರಿ ಮಾಡಲಾಗಿದೆ, ಈಡಿ ಅಧಿಕಾರಿಗಳಿಗೆ ಮತ್ಯಾವ ಮಾಹಿತಿ ಇದೆಯೋ ಗೊತ್ತಿಲ್ಲ ಎಂದು ಅವರು ಹೇಳಿದರು.

ಬೆಂಗಳೂರು, ಜೂನ್ 12: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗೃಹ ಸಚಿವ ಜಿ ಪರಮೇಶ್ವರ್, ಚಿಂತಕ, ಬರಹಗಾರ ಚಕ್ರವರ್ತಿ ಸೂಲಿಬೆಲೆಯವರನ್ನು (Chakravarthy Sulibele) ಗಡೀಪಾರು ಮಾಡುವ ಸಂಭವನೀಯತೆ ಇಲ್ಲ, ಅಲ್ಪಸಂಖ್ಯಾತ ಆಯೋಗದವರು ಸೂಲಿಬೆಲೆ ವಿರುದ್ಧ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಡಿಜಿಯವರನ್ನು ಕೇಳಿದ್ದಾರೆ, ಅದೇ ಹಿನ್ನೆಲೆಯಲ್ಲಿ ಡಿಜಿಯವರು ಸಂಬಂಧಪಟ್ಟ ಎಸ್​ಪಿಗೆ ಫೋನ್ ಮಾಡಿ ಮಾಹಿತಿ ಕೇಳಿದ್ದಾರೆ ಎಂದು ಹೇಳಿದರು. ಗಡೀಪಾರು ಮಾಡಲು ಬೇರೆ ಕಾರಣಗಳಿರುತ್ತವೆ, ತನಗೆ ಗೊತ್ತಿರುವ ಮಟ್ಟಿಗೆ ಅದಕ್ಕಾಗಿ ಡಿಜಿಯವರು ಎಸ್​ಪಿಗೆ ಫೋನ್ ಮಾಡಿರಲ್ಲ ಎಂದು ಗೃಹ ಸಚಿವ ಹೇಳಿದರು.

ಇದನ್ನೂ ಓದಿ:  ಸರ್ಕಾರದ ಸೂಚನೆ ಮೇರೆಗೆ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಶುರುವಾಗಿತ್ತು: ಜಿ ಪರಮೇಶ್ವರ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ