ಹುಬ್ಬಳ್ಳಿಯಲ್ಲಿ ರಾತ್ರಿಯಿಡೀ ಮಳೆಯಿಂದ ಮನೆಯೊಳಗೆ ನುಗ್ಗಿದ ಕೊಳಚೆ ನೀರು; ಊಟವಿಲ್ಲ, ನಿದ್ರೆಯಿಲ್ಲ
ಮನೆಯೊಳಗೆ ನುಗ್ಗಿರೋದು ಚರಂಡಿಗಳಲ್ಲಿ ಹರಿಯುವ ಕೊಳಚೆ ನೀರು ಎಂದು ನಿವಾಸಿಗಳು ಹೇಳುತ್ತಾರೆ. ದಿನವಿಡೀ ದುಡಿದು ಮನೆಗೆ ಬರುವ ತಮಗೆ ರಾತ್ರಿ ಊಟ ಮತ್ತು ಒಂದಷ್ಟು ನಿದ್ದೆ ಸಿಗದಂಥ ಸ್ಥಿತಿ ನಿರ್ಮಣವಾಗುತ್ತದೆ. ಮನೆಯನ್ನು ನೋಡಿದರೆ ಈ ಜನ ಅನುಭವಿಸಿರುವ ಕಷ್ಟ ಗೊತ್ತಾಗುತ್ತದೆ. ಮಳೆ ನಿಂತು ಬೆಳಗು ಮೂಡಿದರೂ ಮನೆ ಆರಿಲ್ಲ, ಹೊಸ್ತಿಲ ಬಳಿಯಿರುವ ನೀರನ್ನು ಹಿರಿಯ ಮಹಿಳೆ ಹೊರಹಾಕುತ್ತಿದ್ದಾರೆ.
ಹುಬ್ಬಳ್ಳಿ, ಜೂನ್ 12: ಹುಬ್ಬಳ್ಳಿಯಲ್ಲಿ (Hubballi city) ನಿನ್ನೆ ಸಾಯಂಕಾಲ ಶುರುವಾದ ಮಳೆ ತಡರಾತ್ರಿವರೆಗೆ ಸುರಿದಿದೆ. ನಗರದಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ ಅಂತ ಹೇಳಿದರೆ ಅಂಡರ್ಸ್ಟೇಟ್ಮೆಂಟ್ ಅನಿಸಿಕೊಳ್ಳುತ್ತದೆ. ನಮ್ಮ ಹುಬ್ಬಳ್ಳಿ ವರದಿಗಾರ ಮಳೆಯಿಂದ ಪ್ರಭಾವಿತ ಪ್ರದೇಶಗಳಿಗೆ ಭೇಟಿ ನೀಡಿ ವರದಿ ಮಾಡಿದ್ದಾರೆ. ತಗ್ಗು ಪ್ರದೇಶಗಳಲ್ಲಿ ಮನೆಗಳನ್ನು ಮಾಡಿಕೊಂಡವರು ಹೆಚ್ಚಿನ ಸಮಸ್ಯೆಗಳಿಗೆ ಒಳಗಾಗಿದ್ದಾರೆ. ದೃಶ್ಯಗಳಲ್ಲಿ ಕಾಣುತ್ತಿರುವ ಮನೆಯ ನಿವಾಸಿಗಳು ರಾತ್ರಿಯಿಡೀ ಮನೆಯೊಳಗೆ ನುಗ್ಗಿದ ನೀರಿನೊಂದಿಗೆ ಏಗಿದ್ದಾರೆ. ಇವರಲ್ಲಿ ಯಾರೂ ಊಟ ಮಾಡಿಲ್ಲ, ನಿದ್ರಿಸುವುದಂತೂ ದೂರದ ಮಾತು. ಪ್ರತಿಮಳೆಗಾಲದಲ್ಲಿ ಇಂಥ ಪರಿಸ್ಥಿತಿ ಎದುರಾಗುತ್ತದೆ, ಜನಪ್ರತಿನಿಧಿಗಳಿಂದ ಭರವಸೆ ಬಿಟ್ಟರೆ ಮತ್ತೇನೂ ಸಿಗುತ್ತಿಲ್ಲ ಎಂದು ಮನೆಯಲ್ಲಿ ವಾಸಮಾಡುವ ಜನ ಹೇಳುತ್ತಾರೆ.
ಇದನ್ನೂ ಓದಿ: Karnataka Rains: ಕರ್ನಾಟಕದಲ್ಲಿ ಜೂನ್ 13ರಿಂದ ಮಳೆ ಜೋರು, ಈ 9 ಜಿಲ್ಲೆಗಳಿಗೆ ರೆಡ್ ಅಲರ್ಟ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ

ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ

ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ

ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
