ರಶ್ಮಿಕಾ ಜತೆ ತೆರೆಹಂಚಿಕೊಳ್ಳುವ ಬಗ್ಗೆ ಪ್ರತಿಕ್ರಿಯಿಸಿದ ಧನಂಜಯ
ಈ ವಾರ (ಡಿಸೆಂಬರ್ 24) ಅವರ ನಟನೆಯ ‘ಬಡವ ರಾಸ್ಕಲ್’ ಸಿನಿಮಾ ತೆರೆಗೆ ಬರುತ್ತಿದೆ. ಅದಕ್ಕೂ ಮೊದಲು ಅವರು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ.
ಡಾಲಿ ಧನಂಜಯ ಅವರು ಸ್ಯಾಂಡಲ್ವುಡ್ ಹಾಗೂ ಟಾಲಿವುಡ್ನಲ್ಲಿ ಬ್ಯುಸಿ ಆಗಿದ್ದಾರೆ. ಅವರಿಗೆ ತುಂಬಾನೇ ಬೇಡಿಕೆ ಇದೆ. ಇತ್ತೀಚೆಗೆ ತೆರೆಗೆಬಂದ ‘ಪುಷ್ಪ’ ಸಿನಿಮಾದಲ್ಲಿ ಜಾಲಿ ರೆಡ್ಡಿ ಆಗಿ ಧನಂಜಯ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರಕ್ಕೆ ಎಲ್ಲ ಕಡೆಗಳಲ್ಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ವಾರ (ಡಿಸೆಂಬರ್ 24) ಅವರ ನಟನೆಯ ‘ಬಡವ ರಾಸ್ಕಲ್’ ಸಿನಿಮಾ ತೆರೆಗೆ ಬರುತ್ತಿದೆ. ಅದಕ್ಕೂ ಮೊದಲು ಅವರು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ. ಇತ್ತೀಚೆಗೆ ಅಭಿಮಾನಿಯೊಬ್ಬರು ರಶ್ಮಿಕಾ ಮಂದಣ್ಣ ಮತ್ತು ಧನಂಜಯ ಒಟ್ಟಾಗಿ ನಟಿಸಬೇಕು ಎಂದು ಕೋರಿದ್ದರು. ಈ ಪೋಸ್ಟ್ಅನ್ನು ಡಾಲಿ ರೀ ಟ್ವೀಟ್ ಮಾಡಿದ್ದರು. ಈಗ ಈ ವಿಚಾರದ ಬಗ್ಗೆ ಧನಂಜಯ ಮಾತನಾಡಿದ್ದಾರೆ. ‘ಹಾಗೊಂದು ಅವಕಾಶ ಸಿಕ್ಕರೆ ನಿಜಕ್ಕೂ ಅದ್ಭುತವಾಗಿರುತ್ತದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ನ್ಯಾಷನಲ್ ಕ್ರಶ್ ಅಂದಿದ್ದು ಯಾರು? ಬರೀ ಓವರ್ ಆ್ಯಕ್ಟಿಂಗ್’; ರಶ್ಮಿಕಾ ವಿಡಿಯೋಗೆ ನೆಗೆಟಿವ್ ಕಮೆಂಟ್ಗಳ ಸುರಿಮಳೆ
Loading...
Unable to load recommendations.
Follow Us
