ಹಂಸಾ, ಜಗದೀಶ್ ಬಗ್ಗೆ ನೇರವಾಗಿ ಮಾತಾಡಿದ ಧನರಾಜ್; ಕಿಚ್ಚ ಸುದೀಪ್ಗೂ ಶಾಕ್
ಹಂಸಾ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮದಲ್ಲಿ ಮೊದಲ ಕ್ಯಾಪ್ಟನ್ ಆಗಿದ್ದರು. ಅವರ ಬಗ್ಗೆ ಕಿಚ್ಚ ಸುದೀಪ್ ಎದುರು ಧನರಾಜ್ ಮಾತನಾಡಿದ್ದಾರೆ. ಅಲ್ಲದೇ ಜಗದೀಶ್ ಬಗ್ಗೆಯೂ ಧನರಾಜ್ ಕೆಲವು ವಿಚಾರ ಪ್ರಸ್ತಾಪಿಸಿದ್ದಾರೆ. ಕಾಮಿಡಿ ಮೂಲಕವೇ ಎಲ್ಲರನ್ನೂ ಸೆಳೆದುಕೊಳ್ಳುವ ಧನರಾಜ್ ಅವರ ಮಾತು ಕೇಳಿ ಸುದೀಪ್ ಬಿದ್ದುಬಿದ್ದು ನಕ್ಕಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಹಂಸಾ ಅವರ ಕ್ಯಾಪ್ಟೆನ್ಸಿ ಹೇಗಿತ್ತು ಮತ್ತು ಅದರಿಂದ ಏನೆಲ್ಲ ಕಲಿಯಬೇಕು ಎಂಬುದನ್ನು ಧನರಾಜ್ ಹೇಳಿದ್ದಾರೆ. ‘ಹಂಸಾ ಅವರು ಸ್ಟ್ರಾಂಗ್ ಆಗಿ ಇರಬೇಕು. ಹೆದರಬಾರದು’ ಎಂದು ಧನರಾಜ್ ಸಲಹೆ ನೀಡಿದ್ದಾರೆ. ‘ಒಂದು ವೇಳೆ ಜಗದೀಶ್ ಕ್ಯಾಪ್ಟನ್ ಆದರೆ ಮನೆ ಹೇಗಿರುತ್ತದೆ’ ಎಂದು ಸುದೀಪ್ ಪ್ರಶ್ನಿಸಿದ್ದಾರೆ. ‘ರೂಲ್ಸ್ ಬ್ರೇಕ್ ಮಾಡುವವರೇ ಕ್ಯಾಪ್ಟನ್ ಆದರೆ ಎಲ್ಲರೂ ಮಲಗಿಸ್ತಾರೆ’ ಎಂದಿದ್ದಾರೆ ಧನರಾಜ್. ಈ ಮಾತಿನಿಂದ ನಿರೂಪಕ ಸುದೀಪ್ ಹಾಗೂ ಬಿಗ್ ಬಾಸ್ ಮನೆಯ ಎಲ್ಲ ಸದಸ್ಯರಿಗೆ ನಗು ಬಂದಿದೆ. ಅ.13ರ ರಾತ್ರಿ 9 ಗಂಟೆಗೆ ‘ಕಲರ್ಸ್ ಕನ್ನಡ’ ಮತ್ತು ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಈ ಸಂಚಿಕೆ ಪ್ರಸಾರ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.