ತನ್ನ ಅಚ್ಚುಮೆಚ್ಚಿನ ನಟ ಮತ್ತು ವ್ಯಕ್ತಿ ಸುದೀಪ್ ಮಿಮಿಕ್ರಿ ಮಾಡಲು ಒಪ್ಪದ ಧನರಾಜ್

Updated on: Jan 20, 2025 | 7:03 PM

ಸುದೀಪ್ ಅಷ್ಟು ದೊಡ್ಡ ನಟನಾದರೂ ಬಿಗ್ ಬಾಸ್ ಕಾಂಟೆಸ್ಟೆಂಟ್ ಗಳೊಂದಿಗೆ ಪ್ರೀತಿಯಿಂದ ಮಾತಾಡಿ ಎಲ್ಲರ ಮನಸ್ಸು ಗೆದ್ದುಬಿಡುತ್ತಾರೆ. ಕಾಂಟೆಸ್ಟೆಂಟ್ ಗಳ ನಡುವೆ ನಡೆಯುವ ಜೋಕ್​ಗಳು ಹೆಚ್ಚು ಮೋಜುದಾಯಕವಾಗಿರದಿದ್ದರೂ ವೀಕೆಂಡ್ ಕಾರ್ಯಕ್ರಮದಲ್ಲಿ ಸುದೀಪ್ ಜೋರಾಗಿ ನಗುತ್ತಾರೆ. ಅವರು ಕಾಂಟೆಸ್ಟೆಂಟ್ ಗಳನ್ನು ಹುರಿದುಂಬಿಸುವ ಮತ್ತೊಂದು ವಿಧಾನ ಅದು ಎಂದು ಧನರಾಜ್ ಹೇಳುತ್ತಾರೆ.

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರಿಯಾಲಿಟಿ ಶೋನಲ್ಲಿ ನಿನ್ನೆ ಫಿನಾಲೆ ತಲುಪದೆ ಕೊನೆಯವರಾಗಿ ಹೊರಬಿದ್ದ ಧನರಾಜ್ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡುವಾಗ ಕಾರ್ಯಕ್ರಮದ ಹೋಸ್ಟ್ ಮತ್ತು ನಟ ಸುದೀಪ್ ಅವರ ಬಗ್ಗೆ ಅಪಾರವಾದ ಪ್ರೀತಿ ಮತ್ತು ಅಭಿಮಾನವನ್ನು ತೋರಿದ್ದಾರೆ. ಮಿಮಿಕ್ರಿಯಲ್ಲಿ ನೈಪುಣ್ಯತೆ ಸಾಧಿಸಿರುವ ಧನರಾಜ್ ತಮ್ಮ ಅಚ್ಚುಮೆಚ್ಚಿನ ನಟನ ಮಿಮಿಕ್ರಿ ಸುತಾರಾಂ ಮಾಡಲಿಲ್ಲ. ಶೋನಿ.ದ ಹೊರಬರುವಾಗ ಅವರ ಮೇಲಿನ ಅಭಿಮಾನಕ್ಕೆ ಮೂರ್ನಾಲ್ಕು ಸಲ ಅಪ್ಪಿಕೊಂಡೆ ಎಂದು ಧನರಾಜ್ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಪ್ ಗೆಲ್ಲುವ ಭರವಸೆಯಲ್ಲಿ ರಜತ್

Published on: Jan 20, 2025 06:16 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More