ಕಾವ್ಯ ಎದುರಲ್ಲೇ ಗಿಲ್ಲಿ ಹಣೆಬರಹ ತೆರೆದಿಟ್ಟ ಧನುಷ್: ಅಶ್ವಿನಿ ಸೈಲೆಂಟ್ ಆಗಿದ್ದೇಕೆ?
ಬಿಗ್ ಬಾಸ್ ಆಟದಲ್ಲಿ ಗಿಲ್ಲಿ ಹಾಗೂ ಅಶ್ವಿನಿ ಗೌಡ ಮಧ್ಯೆ ಜಗಳ ಆಗಿತ್ತು. ಅದರಿಂದ ಗಿಲ್ಲಿಗೆ ಲಾಭ ಆಗಿದ್ದೇ ಹೆಚ್ಚು. ವುಮನ್ ಕಾರ್ಡ್ ಪ್ಲೇ ಮಾಡಲು ಹೋಗಿ ಅಶ್ವಿನಿ ಗೌಡ ವಿಫಲರಾದರು. ಅದರ ಪರಿಣಾಮವಾಗಿ ಅಶ್ವಿನಿ ಗೌಡ ಸೈಲೆಂಟ್ ಆಗಿದ್ದಾರೆ. ಈ ಬಗ್ಗೆ ಧನುಷ್ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ (Gilli Nata) ಮತ್ತು ಅಶ್ವಿನಿ ಗೌಡ ನಡುವೆ ಜಗಳ ಆಗಿತ್ತು. ಅದರಿಂದ ಗಿಲ್ಲಿಗೆ ಲಾಭ ಆಗಿದ್ದೇ ಹೆಚ್ಚು. ಅಶ್ವಿನಿ ಗೌಡ ಅವರು ವುಮನ್ ಕಾರ್ಡ್ ಪ್ಲೇ ಮಾಡಲು ಹೋಗಿ ವಿಫಲರಾದರು. ವಾರಾಂತ್ಯದಲ್ಲಿ ಅವರಿಗೆ ಕಿಚ್ಚ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡರು. ಅದರ ಪರಿಣಾಮವಾಗಿ ಅಶ್ವಿನಿ ಗೌಡ (Ashwini Gowda) ಅವರು ಈಗ ಸೈಲೆಂಟ್ ಆಗಿದ್ದಾರೆ. ಈಗ ಅವರು ಸೈಲೆಂಟ್ ಆಗಿದ್ದರಿಂದ ಗಿಲ್ಲಿಗೆ ತೊಂದರೆ ಆಗಿದೆ ಎಂದು ಧನುಷ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಕಾವ್ಯ ಜೊತೆ ಕುಳಿತು ಮಾತನಾಡಿದ್ದಾರೆ. ‘ಗಿಲ್ಲಿಗೆ ಈಗ ಕಂಟೆಂಟ್ ಸಿಗುತ್ತಿಲ್ಲ. ಅವನಿಗೆ ಕಡಿಯಲು ಏನಾದರೂ ಬೇಕು. ಅಶ್ವಿನಿ ಮೇಡಂ ಸೈಲೆಂಟ್ ಆಗಿದ್ದರಿಂದ ಗಿಲ್ಲಿಗೆ ಸಮಸ್ಯೆ ಆಗಿದೆ. ಅದು ನನ್ನ ಕಣ್ಣಿಗೆ ಎದ್ದು ಕಾಣುತ್ತಿದೆ. ಅಶ್ವಿನಿ ಮೇಡಂ ಇದ್ದರೆ ಗಿಲ್ಲಿಗೆ ಮೈಲೇಜ್’ ಎಂದು ಧನುಷ್ ಹೇಳಿದ್ದಾರೆ. ಈ ಮಾತಿಗೆ ಕಾವ್ಯ ಅವರು ಯಾವ ರೀತಿ ಪ್ರತಿಕ್ರಿಯೆ ನೀಡಿದ್ದಾರೆ ಎಂಬುದು ತಿಳಿಯಲು ನವೆಂಬರ್ 25ರ ಸಂಚಿಕೆ ನೋಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
