ಧರ್ಮ ಧ್ವಜಾರೋಹಣ ಸಮಾರಂಭಕ್ಕೆ ಅಯೋಧ್ಯೆ ರಾಮಮಂದಿರ ಪಳಪಳ ಹೊಳೆಯುವಂತೆ ಮಾಡಿದ ಕನ್ನಡಿಗ
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕರ್ನಾಟಕ ಗಮನಾರ್ಹ ಕೊಡುಗೆಗಳನ್ನು ನೀಡಿದೆ. ಹೌದು...ಅಯೋಧ್ಯೆಯಲ್ಲಿ ಪ್ರತಿಷ್ಠಾನೆಯಾಗಿರುವ ರಾಮಮೂರ್ತಿಗೆ ಕರ್ನಾಟಕದ ಕಲ್ಲು ಬಳಸಲಾಗಿದೆ. ಶಿಲ್ಪಗಳ ತವರೂರು ಎಂದೇ ಖ್ಯಾತಿ ಪಡೆದಿರುವ ಕಾರ್ಕಳದಿಂದ 2 ಬೃಹತ್ ಶಿಲೆಗಳನ್ನು ಆಯೋಧ್ಯೆಗೆ ರವಾನಿಸಲಾಗಿತ್ತು. ಇನ್ನು ಗರ್ಭಗುಡಿಯ ಮುಂಭಾಗದ ಮಂಟಪ ತಯಾರಿಯಲ್ಲಿ ಕೊಪ್ಪಳದ ಶಿಲ್ಪಿ ಸಹ ಇದ್ದ. ಅದರಲ್ಲೂ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಪ್ರತಿಮೆಯು ಪ್ರಾಣ ಪ್ರತಿಷ್ಠಾಪನೆಗೆ ಆಯ್ಕೆಯಾಗಿರುವುದು ಕರ್ನಾಟಕದ ಹೆಮ್ಮೆ. ಇದೀಗ ಶ್ರೀರಾಮ ಮಂದಿರದ ಶಿಖರದ ಮೇಲೆ ಭಗವಾಧ್ವಜವನ್ನು ಹಾರಿಸುವ ಕಾರ್ಯಕ್ರಮ ಸಂಬಂಧ ಲೈಟಿಂಗ್ಸ್ ಅಲಂಕಾರ ಮಾಡಿದ್ದು ಸಹ ಕನ್ನಡಿಗ ರಾಜೇಶ್ ಶೆಟ್ಟಿ .
ಬೆಂಗಳೂರು, (ನವೆಂಬರ್ 25): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕರ್ನಾಟಕ ಗಮನಾರ್ಹ ಕೊಡುಗೆಗಳನ್ನು ನೀಡಿದೆ. ಹೌದು…ಅಯೋಧ್ಯೆಯಲ್ಲಿ ಪ್ರತಿಷ್ಠಾನೆಯಾಗಿರುವ ರಾಮಮೂರ್ತಿಗೆ ಕರ್ನಾಟಕದ ಕಲ್ಲು ಬಳಸಲಾಗಿದೆ. ಶಿಲ್ಪಗಳ ತವರೂರು ಎಂದೇ ಖ್ಯಾತಿ ಪಡೆದಿರುವ ಕಾರ್ಕಳದಿಂದ 2 ಬೃಹತ್ ಶಿಲೆಗಳನ್ನು ಆಯೋಧ್ಯೆಗೆ ರವಾನಿಸಲಾಗಿತ್ತು. ಇನ್ನು ಗರ್ಭಗುಡಿಯ ಮುಂಭಾಗದ ಮಂಟಪ ತಯಾರಿಯಲ್ಲಿ ಕೊಪ್ಪಳದ ಶಿಲ್ಪಿ ಸಹ ಇದ್ದ. ಅದರಲ್ಲೂ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಪ್ರತಿಮೆಯು ಪ್ರಾಣ ಪ್ರತಿಷ್ಠಾಪನೆಗೆ ಆಯ್ಕೆಯಾಗಿರುವುದು ಕರ್ನಾಟಕದ ಹೆಮ್ಮೆ. ಇದೀಗ ಶ್ರೀರಾಮ ಮಂದಿರದ ಶಿಖರದ ಮೇಲೆ ಭಗವಾಧ್ವಜವನ್ನು ಹಾರಿಸುವ ಕಾರ್ಯಕ್ರಮ ಸಂಬಂಧ ಲೈಟಿಂಗ್ಸ್ ಅಲಂಕಾರ ಮಾಡಿದ್ದು ಸಹ ಕನ್ನಡಿಗ ರಾಜೇಶ್ ಶೆಟ್ಟಿ .
ಅಯೋಧ್ಯೆ ದೇವಸ್ಥಾನದ ವಿದ್ಯುತ್ ಅಲಂಕಾರ ಮಾಡಿರುವ ರಾಜೇಶ್ ಶೆಟ್ಟಿ ಟಿವಿ9ಗೆ ಪ್ರತಿಕ್ರಿಯಿಸಿದ್ದು,
ಇದು ಐತಿಹಾಸಿಕ ದಿನವಾಗಿದೆ. ಆರಂಭದಲ್ಲಿ ಬಂದಾಗ ಅಯೋಧ್ಯೆಯಲ್ಲಿ ಏನು ಇರಲಿಲ್ಲ. ಹಿಂದೆ ಭೌಗೋಳಿಕವಾಗಿ ಹಿಂದೆ ಇತ್ತು . ಆದ್ರೆ, ಮುಂದೆ ಅಯೋಧ್ಯೆ ಆಧುನಿಕ ಬೆಳೆಯಲಿದೆ ಸಂತಸ ವ್ಯಕ್ತಪಡಿಸಿದರು.

