ಧರ್ಮಸ್ಥಳ ಪ್ರಕರಣ: ಅನಾಮಿಕ ದೂರುದಾರನ ಸಮ್ಮುಖದಲ್ಲಿ 7ನೇ ಸ್ಥಳದಲ್ಲಿ ನಡೆಯುತ್ತಿರುವ ಉತ್ಖನನ

Updated on: Aug 01, 2025 | 3:00 PM

ಅನಾಮಿಕ ದೂರುದಾರ ತೋರಿಸುತ್ತಿರುವ ಸ್ಥಳಗಳಲ್ಲಿ ಎರಡು ದಿನಗಳಿಂದ ನೆಲವನ್ನು ಅಗೆದು ಮಾನವ ಅವಶೇಷಗಳನ್ನು ಹುಡುಕುವ ಕಾರ್ಯನಡೆದಿದೆ. ಇದುವರೆಗೆ ಆರು ಸ್ಥಳಗಳಲ್ಲಿ ಉತ್ಖನನ ನಡೆದಿದ್ದು ಒಂದರಲ್ಲಿ ಮಾತ್ರ ಮೂಳೆಗಳು ಸಿಕ್ಕಿವೆ. 2019 ರಲ್ಲಿ ನೇತ್ರಾವತಿ ನದಿಯಲ್ಲಿ ಪ್ರವಾಹ ಬಂದಿತ್ತು ಮತ್ತು ನೀರು ಈಗಿನದಕ್ಕಿಂತ ಸುಮಾರು 6-7 ಅಡಿಗಳಷ್ಟು ಮೇಲ್ಭಾಗದಲ್ಲಿ ನೀರು ಹರಿದಿತ್ತು ಎಂದು ವರದಿಗಾರ ಹೇಳುತ್ತಾರೆ.

ಮಂಗಳೂರು, ಆಗಸ್ಟ್ 1: ಅನಾಮಿಕ ದೂರುದಾರನ ಆಗ್ರಹದ ಮೇರೆಗೆ ಉತ್ಖನನ ಕೆಲಸ (excavation process) ಜಾರಿಯಲ್ಲಿದೆ ಮತ್ತು ಇವತ್ತು 7ನೇ ಸ್ಥಳದಲ್ಲಿ ಅಸ್ಥಿಪಂಜರಗಳನ್ನು ಪತ್ತೆ ಮಾಡುವ ಕೆಲಸವನ್ನು ಪೌರ ಕಾರ್ಮಿಕರು ಮಾಡುತ್ತಿದ್ದಾರೆ ಎಂದು ನಮ್ಮ ಮಂಗಳೂರು ವರದಿಗಾರ ಹೇಳುತ್ತಾರೆ. ನೇತ್ರಾವತಿ ನದಿ ಹರಿಯುತ್ತಿರುವ ತೀರದ ಮತ್ತೊಂದು ಭಾಗದಲ್ಲಿ ಭೂಮಿ ತೋಡುವ ಕೆಲಸ ನಡೆಯುತ್ತಿದೆ ಮತ್ತು ನಮ್ಮ ವರದಿಗಾರ ನದಿ ತೀರದ ಈ ಭಾಗದಲ್ಲಿ ನಿಂತಿದ್ದಾರೆ. ಇದುವರೆಗೆ ಎರಡೂವರೆ ಅಡಿ ತೋಡಿದರೂ ಮಾನವ ದೇಹದ ಮೂಳೆಗಳಾಗಲೀ, ಅಸ್ಥಿಪಂಜರವಾಗಲೀ ಸಿಕ್ಕಿಲ್ಲ. ನಿನ್ನೆ ಮೂಳೆಗಳು ಸಿಕ್ಕಿದ್ದು ಮೂರೂವರೆ ಅಡಿ ಅಗೆತದ ನಂತರ, ಹಾಗಾಗಿ ಮುಂದಿನ ಒಂದು-ಒಂದೂವರೆ ಅಡಿ ಅಗೆತ ಅತ್ಯಂತ ನಿರ್ಣಾಯಕ ಎಂದು ವರದಿಗಾರ ಹೇಳುತ್ತಾರೆ.

ಇದನ್ನೂ ಓದಿ: ನೂರಾರು ಶವ ಹೂತಿಟ್ಟ ಪ್ರಕರಣ: ಧರ್ಮಸ್ಥಳ ಠಾಣೆಯಲ್ಲಿ 1995 ರಿಂದ ಕೆಲಸ ಮಾಡಿದ ಪೊಲೀಸರ ಪಟ್ಟಿ ಕೇಳಿದ ಎಸ್​ಐಟಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ