ಧರ್ಮಸ್ಥಳ ಕೇಸ್: ‘ಸುಜಾತಾ ಭಟ್ ತೋರಿಸಿದ್ದು ಅನನ್ಯಾ ಫೋಟೊ ಅಲ್ಲ’! ಮತ್ಯಾರದ್ದು? ಇಲ್ಲಿದೆ ನೋಡಿ
ಸುಜಾತ ಭಟ್ ತೋರಿಸಿದ್ದು ಅನನ್ಯ ಫೋಟೋ ಅಲ್ಲ, ಅದು ನನ್ನ ಸಹೋದರಿ ವಾಸಂತಿ ಫೋಟೋ ಎಂದು ಎಂ.ವಿಜಯ್ ಅವರು ಹೇಳಿದ್ದಾರೆ. ನನ್ನ ಸಹೋದರಿ ವಾಸಂತಿ 2007ರಲ್ಲೇ ಮೃತಪಟ್ಟಿದ್ದಾಳೆ. ಈ ಪ್ರಕರಣದಲ್ಲಿ ತಮ್ಮ ತಂಗಿಯ ಹೆಸರು ಎಳೆದು ತಂದಿರುವುದಕ್ಕೆ ಎಂ.ವಿಜಯ್ ಬೇಸರ ವ್ಯಕ್ತಪಡಿಸಿದ್ದಾರೆ.
ಕೊಡಗು, ಆಗಸ್ಟ್ 20: ಸುಜಾತ ಭಟ್ ತೋರಿಸಿದ್ದು ಅನನ್ಯ ಫೋಟೋ ಅಲ್ಲ, ಅದು ನನ್ನ ವಾಸಂತಿ ಸಹೋದರಿ ಫೋಟೋ ಎಂದು ಟಿವಿ9ಗೆ ವಾಸಂತಿ ಸಹೋದರ ಎಂ.ವಿಜಯ್ ಹೇಳಿದ್ದಾರೆ. ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪಂಜರ್ಪೇಟೆ ಗ್ರಾಮದಲ್ಲಿ ಪ್ರತಿಕ್ರಿಯಿಸಿದ ಅವರು, ಅದು ಅನನ್ಯ ಭಟ್ (Ananya Bhat) ಅಲ್ಲ, ನನ್ನ ಸಹೋದರಿ ವಾಸಂತಿ ಫೋಟೋ. ನನ್ನ ಸಹೋದರಿ ವಾಸಂತಿ 2007ರಲ್ಲೇ ಮೃತಪಟ್ಟಿದ್ದಾಳೆ. ಅವಳು ಶ್ರೀವತ್ಸ ಭಟ್ ಎಂಬುವರನ್ನು ಪ್ರೀತಿಸಿ ವಿವಾಹವಾಗಿದ್ದರು. ಶ್ರೀವತ್ಸ ಭಟ್ಗೂ ಸುಜಾತಾ ಭಟ್ಗೂ ಏನು ಸಂಬಂಧ ಗೊತ್ತಿಲ್ಲ. ಈ ಪ್ರಕರಣದಲ್ಲಿ ನನ್ನ ತಂಗಿ ಎಳೆದು ತಂದಿದ್ದು ಬೇಸರ ತರಿಸಿದೆ. ತಂಗಿಯ ಶವ 2007ರಲ್ಲಿ ನಿಗೂಢವಾಗಿ ಹೊಳೆಯಲ್ಲಿ ಪತ್ತೆ ಆಗಿತ್ತು. ಆ ಬಗ್ಗೆ ಸಿಐಡಿ ತನಿಖೆ ಆಗಿ ಆತ್ಮಹತ್ಯೆ ಅಂತಾ ವರದಿ ಬಂದಿತ್ತು. ಸುಜಾತಾ ಭಟ್ ಏಕೆ ನನ್ನ ತಂಗಿಯನ್ನು ಎಳೆದು ತಂದಿದ್ದಾರೆ ಗೊತ್ತಿಲ್ಲ ಎಂದು ವಿಜಯ್ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Aug 20, 2025 01:16 PM