ಹಲವು ವರ್ಷಗಳಿಂದ ಕಾಣೆಯಾಗಿದ್ದ ಆದಿಶೇಷನ DL ಧರ್ಮಸ್ಥಳದಲ್ಲಿ ಪತ್ತೆ: ಕುಟುಂಬ ಹೇಳಿದ್ದೇನು?
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ನೂರು ಸಾಮೂಹಿಕ ದಫನ್ ಪ್ರಕರಣಕ್ಕೆ ದಿನಕ್ಕೊಂದು ತಿರುವು ಸಿಕ್ಕಿದೆ. ಮೊನ್ನೆ ಕೊಡಗು ಮೂಲದ ಯು.ಬಿ ಅಯ್ಯಪ್ಪರ ಐಡಿ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ತುಮಕೂರು ಮೂಲದ ಯುವಕನ DL ಸಿಕ್ಕಿದೆ. ಈ ಕುರಿತು ಸಿಕ್ಕಿರುವ ಅಸ್ಥಿಗಳು ಈ ಯುವಕನದ್ದಾಗಿರಬಹುದು ಎಂಬ ಗುಮಾನಿ ಮೂಡಿದೆ. ಬೋಜಯ್ಯ ಮತ್ತು ಚೆನ್ನಮ್ಮ ಎಂಬುವರ ಪುತ್ರ ಆದಿಶೇಷ ನಾರಾಯಣ 12 ರಿಂದ 15 ವರ್ಷದ ಹಿಂದೆ ನಾಪತ್ತೆಯಾಗಿದ್ದ.
ತುಮಕೂರು, (ಸೆಪ್ಟೆಂಬರ್ 28): ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ನೂರು ಸಾಮೂಹಿಕ ದಫನ್ ಪ್ರಕರಣಕ್ಕೆ ದಿನಕ್ಕೊಂದು ತಿರುವು ಸಿಕ್ಕಿದೆ. ಮೊನ್ನೆ ಕೊಡಗು ಮೂಲದ ಯು.ಬಿ ಅಯ್ಯಪ್ಪರ ಐಡಿ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ತುಮಕೂರು ಮೂಲದ ಯುವಕನ DL ಸಿಕ್ಕಿದೆ. ಈ ಕುರಿತು ಸಿಕ್ಕಿರುವ ಅಸ್ಥಿಗಳು ಈ ಯುವಕನದ್ದಾಗಿರಬಹುದು ಎಂಬ ಗುಮಾನಿ ಮೂಡಿದೆ. ಬೋಜಯ್ಯ ಮತ್ತು ಚೆನ್ನಮ್ಮ ಎಂಬುವರ ಪುತ್ರ ಆದಿಶೇಷ ನಾರಾಯಣ 12 ರಿಂದ 15 ವರ್ಷದ ಹಿಂದೆ ನಾಪತ್ತೆಯಾಗಿದ್ದ. ಬೆಂಗಳೂರಿನ ಶೇಖರ್ ಬಾರ್ ನಲ್ಲಿ ಕೆಲಸ ಮಾಡ್ತಿದ್ದ ಆದಿಶೇಷ, 2013 ಅಕ್ಟೋಬರ್ 2 ರಂದು ಸ್ನೇಹಿತರ ಜೊತೆ ಮನೆಗೆ ಬಂದು ಹೋಗಿದ್ದವನು ಮತ್ತೆ ವಾಪಾಸ್ ಬರಲೇ ಇಲ್ಲ. ಆದಿಶೇಷ ತನ್ನ ಫೋನ್ ಅನ್ನು ತಾಯಿ ಚೆನ್ನಮ್ಮಗೆ ಕೊಟ್ಟು ಹೋಗಿದ್ದ. ಮಗನ ಕೊರಗಿನಲ್ಲೇ ತಂದೆ ಬೋಜಯ್ಯ 2016 ರಲ್ಲಿ ಮೃತಪಟ್ಟಿದ್ದರು. ತಂದೆ ಬೋಜಯ್ಯ ಮೃತಪಟ್ಟ ಬಳಿಕ ತಾಯಿ ಚೆನ್ನಮ್ಮ ಮಗಳ ಮನೆ ಸೇರಿದ್ದರು. ಇನ್ನು ಈ ಬಗ್ಗೆ ಆದಿಶೇಷನ ತಾಯಿ ಹಾಗೂ ಸಹೋದರಿ ಏನು ಹೇಳಿದ್ದಾರೆ ಕೇಳಿ.
ನಗರಸಭೆ ಪೌರಾಯುಕ್ತೆಗೆ ನಿಂದನೆ: ರಾಜೀವ್ ಗೌಡ ಪರ ಮುನಿಯಪ್ಪ ಬ್ಯಾಟಿಂಗ್
ನಮ್ಮ ಮೆಟ್ರೋದಲ್ಲಿ ಇಂದಿನಿಂದ ಹೊಸ ಬದಲಾವಣೆ: ಇಲ್ಲಿದೆ ಮಾಹಿತಿ
ಅಶ್ಲೀಲವಾಗಿ ನಿಂದಿಸಿದ ಕಾಂಗ್ರೆಸ್ ಮುಖಂಡನ ಬಗ್ಗೆ ಖರ್ಗೆ ಖಡಕ್ ಮಾತು
ವಿಧಾನಸಭೆ ಚುನಾವಣೆಗೆ ತಾನು ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದ ಪ್ರತಾಪ್

