2 ವರ್ಷದ ಹಿಂದೆಯೇ ಪತ್ನಿ ಜತೆ ತಿಮರೋಡಿ ಭೇಟಿಯಾಗಿದ್ದ ಚಿನ್ನಯ್ಯ: ಸ್ಫೋಟಕ ವಿಡಿಯೋ

Updated By: ರಮೇಶ್ ಬಿ. ಜವಳಗೇರಾ

Updated on: Sep 19, 2025 | 10:01 PM

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ (Dharmasthala Case) ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮಾಸ್ಕ್​ ಮ್ಯಾನ್ ಚಿನ್ನಯ್ಯ ಜೊತೆ ಮಹೇಶ್‌ಶೆಟ್ಟಿ ತಿಮರೋಡಿ (Mahesh Shetty thimarody) ಭೇಟಿಯಾದ ವಿಡಿಯೋ ಬಹಿರಂಗಗೊಂಡಿದೆ. ತಿಮರೋಡಿ ಮನೆಯಲ್ಲಿ ಎರಡು ವರ್ಷದ ಹಿಂದೆ ಭೇಟಿಯಾಗಿದ್ದ ವಿಡಿಯೋ ಇದಾಗಿದೆ.

ಮಂಗಳೂರು, (ಸೆಪ್ಟೆಂಬರ್ 19): ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ (Dharmasthala Case) ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮಾಸ್ಕ್​ ಮ್ಯಾನ್ ಚಿನ್ನಯ್ಯ ಜೊತೆ ಮಹೇಶ್‌ಶೆಟ್ಟಿ ತಿಮರೋಡಿ (Mahesh Shetty thimarody) ಭೇಟಿಯಾದ ವಿಡಿಯೋ ಬಹಿರಂಗಗೊಂಡಿದೆ. ತಿಮರೋಡಿ ಮನೆಯಲ್ಲಿ ಎರಡು ವರ್ಷದ ಹಿಂದೆ ಭೇಟಿಯಾಗಿದ್ದ ವಿಡಿಯೋ ಇದಾಗಿದೆ. ತಿಮರೋಡಿ ಭೇಟಿ ವೇಳೆ ಹೆಣಗಳ ಹೂತ ಬಗ್ಗೆ ಚಿನ್ನಯ್ಯ (Chinnaiah) ಹೇಳಿದ್ದಾನೆ. ಗುಂಡಿ ತೆಗೆದು ಹೆಣ ಹೂಳುತ್ತಿದ್ದೆ. ನೇತ್ರಾವತಿ ಸ್ನಾನಘಟ್ಟ ಸರ್ಕಾರಿ ಜಾಗ ಎಂದವರಿಗೆ ರಕ್ತ ಬರೋ ಹಾಗೆ ನನ್ನ ಹತ್ತಿರ ಹೊಡೆಸುತ್ತಿದ್ದರು. ಒಂದು ಹೆಣವನ್ನು ಹೂಳುವಾಗ ಡಾಕ್ಟರ್ ಬರದೇ ಕಂಪೌಂಡರ್‌ ಪೋಸ್ಟ್ ಮಾರ್ಟಮ್ ಮಾಡಿದ್ದ ಎಂದು ಸ್ಫೋಟಕ ಅಂಶ ಹೇಳಿಕೊಂಡಿದ್ದ ಎನ್ನುವುದು ತಿಳಿದುಬಂದಿದೆ.