ಧರ್ಮಸ್ಥಳ ಪ್ರಕರಣ: ಮತ್ತೊಂದು ಹೊಸ ವಿಡಿಯೋ ಬಿಡುಗಡೆ ಮಾಡಿದ ಯುಟ್ಯೂಬರ್ ಸಮೀರ್ ಎಂಡಿ
ಧರ್ಮಸ್ಥಳ ತಲೆ ಬುರುಡೆ ಕೇಸ್ ಬಗ್ಗೆ ಎಐ ವಿಡಿಯೋ (AI Video) ಮಾಡಿ, ಕಣ್ಣಿಗೆ ಕಟ್ಟಿದಂತೆ ವಿವರಿಸಿದ್ದ ಯೂಟ್ಯೂಬರ್ (YouTuber) ಸಮೀರ್ ಎಂಡಿಯನ್ನೂ (Smeer MD) ಕೂಡ ಬೆಳ್ತಂಗಡಿ ಠಾಣೆ ಪೊಲೀಸರು (Belthangady police) ವಿಚಾರಣೆ ನಡೆಸಿದ್ದಾರೆ. ಇದೀಗ ಇದೇ ಸಮೀರ್ ಎಂಡಿ ಮತ್ತೊಂದು ವಿಡಿಯೋ ಮಾಡಿದ್ದಾನೆ. ಇಂದು ನನಗೆ ವಾಸಿಸಲು ಮನೆ ಇಲ್ಲ. ಪೊಲೀಸ್ ವಿಚಾರಣೆ ಬಳಿಕ ನನಗೆ ಬಾಡಿಗೆ ಮನೆ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾನೆ.
ಬೆಂಗಳೂರು, (ಸೆಪ್ಟೆಂಬರ್ 11): ಧರ್ಮಸ್ಥಳ ತಲೆಬುರುಡೆ ಕೇಸ್ (Dharmasthala Case) ತನಿಖೆ ಮುಂದುವರೆದಿದೆ. ತಲೆ ಬುರುಡೆ ರಹಸ್ಯ ಹುಡುಕುತ್ತಿರುವ ಎಸ್ಐಟಿ (SIT) ತಂಡ, ಈಗಾಗಲೇ ಹಲವಾರು ಜನರ ತನಿಖೆ ಮಾಡಿದೆ. ಬುರುಡೆ ಮ್ಯಾನ್ ಚಿನ್ನಯ್ಯ (Chinnaiah) ಈಗಾಗಲೇ ಎಸ್ಐಟಿ ವಿಚಾರಣೆ ಎದುರಿಸಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ. ಮತ್ತೊಂದೆಡೆ ಧರ್ಮಸ್ಥಳ ತಲೆ ಬುರುಡೆ ಕೇಸ್ ಬಗ್ಗೆ ಎಐ ವಿಡಿಯೋ (AI Video) ಮಾಡಿ, ಕಣ್ಣಿಗೆ ಕಟ್ಟಿದಂತೆ ವಿವರಿಸಿದ್ದ ಯೂಟ್ಯೂಬರ್ (YouTuber) ಸಮೀರ್ ಎಂಡಿಯನ್ನೂ (Smeer MD) ಕೂಡ ಬೆಳ್ತಂಗಡಿ ಠಾಣೆ ಪೊಲೀಸರು (Belthangady police) ವಿಚಾರಣೆ ನಡೆಸಿದ್ದಾರೆ. ಇದೀಗ ಇದೇ ಸಮೀರ್ ಎಂಡಿ ಮತ್ತೊಂದು ಹೊಸ ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದಾನೆ. ಇಂದು ನನಗೆ ವಾಸಿಸಲು ಮನೆ ಇಲ್ಲ. ಪೊಲೀಸ್ ವಿಚಾರಣೆ ಬಳಿಕ ನನಗೆ ಬಾಡಿಗೆ ಮನೆ ಸಿಗುತ್ತಿಲ್ಲ ಎಂದು ವಿಡಿಯೋನಲ್ಲಿ ಅಳಲು ತೋಡಿಕೊಂಡಿದ್ದಾನೆ.

