ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!

Edited By:

Updated on: Sep 28, 2026 | 2:59 PM

ಧಾರವಾಡ ಕೃಷಿ ಮೇಳದಲ್ಲಿ ಜಾನುವಾರು ಪ್ರದರ್ಶನವು ಪ್ರಮುಖ ಆಕರ್ಷಣೆಯಾಗಿತ್ತು. ರೈತರ ಜೀವನಾಡಿಯಾದ ದೇಶಿ ಮತ್ತು ವಿದೇಶಿ ತಳಿಗಳ ವೈವಿಧ್ಯಮಯ ಜಾನುವಾರುಗಳನ್ನು ಇಲ್ಲಿ ಪ್ರದರ್ಶಿಸಲಾಯಿತು. ಯಂತ್ರಗಳ ಬಳಕೆಯಿಂದ ಜಾನುವಾರುಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ, ಸಾವಯವ ಕೃಷಿಗೆ ಮತ್ತು ಆದಾಯದ ಮೂಲವಾಗಿ ಅವುಗಳ ಮಹತ್ವವನ್ನು ಮೇಳ ಎತ್ತಿ ತೋರಿಸುತ್ತದೆ. ರೈತರಿಗೆ ಮಾಹಿತಿ ನೀಡಿ, ಜಾನುವಾರು ಸಾಕಾಣಿಕೆಗೆ ಪ್ರೋತ್ಸಾಹ ನೀಡಲಾಯಿತು.

ಧಾರವಾಡ, ಸೆಪ್ಟೆಂಬರ್ 28: ಪ್ರತಿವರ್ಷ ನಡೆಯುವ ಧಾರವಾಡ ಕೃಷಿ ಮೇಳದಲ್ಲಿ ಈ ಬಾರಿ ಜಾನುವಾರು ಪ್ರದರ್ಶನವು ಪ್ರಮುಖ ಆಕರ್ಷಣೆಯ ಕೇಂದ್ರವಾಗಿತ್ತು. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ರೈತರು ತಾವು ಪೋಷಿಸಿದ ವಿವಿಧ ತಳಿಯ ಜಾನುವಾರುಗಳನ್ನು ತಮ್ಮೊಡನೆ ಕರೆ ತಂದು ಮೆಳದಲ್ಲಿ ಪ್ರದರ್ಶಿಸಿದರು. ರೈತರ ಪಾಲಿಗೆ ಜೀವನಾಡಿಯಾಗಿರುವ ಎತ್ತು, ಕೋಣ, ಎಮ್ಮೆ, ಆಕಳುಗಳಂತಹ ದೇಶಿ ಹಾಗೂ ವಿದೇಶಿ ತಳಿಗಳೂ ಕಾಣಸಿಕ್ಕವು.

ಯಂತ್ರಗಳ ಬಳಕೆಯಿಂದಾಗಿ ಜಾನುವಾರುಗಳ ಸಂಖ್ಯೆ ಕಡಿಮೆಯಾಗುತ್ತಿರುವ ಇಂದಿನ ದಿನಮಾನಗಳಲ್ಲಿ, ಈ ಪ್ರದರ್ಶನವು ಅವುಗಳ ಮಹತ್ವವನ್ನು ಮತ್ತೆ ನೆನಪಿಸಿದೆ. ಜಾನುವಾರುಗಳು ಕೃಷಿ ಚಟುವಟಿಕೆಗಳಿಗೆ ಅನಿವಾರ್ಯವಾಗಿರುವುದು ಮಾತ್ರವಲ್ಲದೆ, ಅವುಗಳ ಸಗಣಿ ಸಾವಯವ ಕೃಷಿಗೆ ಅತ್ಯುತ್ತಮ ಗೊಬ್ಬರವಾಗಿಯೂ ಬಳಕೆಯಾಗುತ್ತವೆ. ರೈತರಿಗೆ ಆದಾಯದ ಮೂಲವಾಗಿರುವ ಈ ಜಾನುವಾರುಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಪ್ರದರ್ಶನದಲ್ಲಿ ನೀಡಲಾಯಿತು. ಕೆಲವು ಬೃಹತ್ ಎತ್ತುಗಳು ಆನೆ ಮರಿಗಳಂತೆ ಕಾಣುತ್ತಿದ್ದವು, ಜನರ ಗಮನ ಸೆಳೆದು ಕುತೂಹಲ ಮೂಡಿಸಿದವು. ಈ ಪ್ರದರ್ಶನವು ಕೃಷಿ ಮೇಳದ ಯಶಸ್ಸಿಗೆ ಮತ್ತಷ್ಟು ಮೆರುಗು ನೀಡಿತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 20 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More