ಧಾರವಾಡ: ಶಾಲಾ ಮಕ್ಕಳ ಮೇಲೆ ಕೋತಿ ದಾಳಿ

| Updated By: ವಿವೇಕ ಬಿರಾದಾರ

Updated on: Dec 03, 2024 | 2:51 PM

ಧಾರವಾಡದ ಮದಾರಮಡ್ಡಿ ಬಡಾವಣೆಯಲ್ಲಿ ಶಾಲೆಗೆ ಹೋಗುತ್ತಿದ್ದ ಮಕ್ಕಳ ಮೇಲೆ ಕೋತಿ ದಾಳಿ ನಡೆದಿದೆ. ಈ ದಾಳಿಯಲ್ಲಿ ಒಬ್ಬ ಬಾಲಕನಿಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋತಿಗಳ ಕಾಟದಿಂದಾಗಿ ಅಂಗನವಾಡಿ ಮತ್ತು ಒಂದನೇ ತರಗತಿಗೆ ರಜೆ ಘೋಷಿಸಲಾಗಿದೆ.ಪೊಲೀಸರು ಘಟನೆ ಸಂಬಂಧ ತನಿಖೆ ನಡೆಸುತ್ತಿದ್ದಾರೆ.

ಶಾಲಾ ಮಕ್ಕಳ ಮೇಲೆ ಕೋತಿ ದಾಳಿ ಮಾಡಿರುವ ಘಟನೆ ಧಾರವಾಡ ನಗರದ ಮದಾರಮಡ್ಡಿ ಬಡಾವಣೆಯಲ್ಲಿ ನಡೆದಿದೆ. ಓರ್ವ ಶಾಲಾ ಬಾಲಕನಿಗೆ ಗಂಭೀರ ಗಾಯವಾಗಿದೆ. ಬೆಳಿಗ್ಗೆ ಶಾಲೆಗೆ ಬಂದಿದ್ದ ಮಕ್ಕಳ ಮೇಲೆ ಕೋತಿ ದಾಳಿ ಮಾಡಿದೆ. ಕೋತಿ ಕಾಟ ಹಿನ್ನೆಲೆಯಲ್ಲಿ ಅಂಗನವಾಡಿ ಹಾಗೂ ಒಂದನೇ ತರಗತಿಗೆ ರಜೆ ನೀಡಲಾಗಿದೆ. ಗಾಯಗೊಂಡ ಬಾಲಕನನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಧಾರವಾಡ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Published on: Dec 03, 2024 02:48 PM