ಜಮೀನಲ್ಲಿ ಎಡೆಹೊಡೆಯುವ ಕೆಲಸವನ್ನು ಹೀಗೂ ಮಾಡಬಹುದು, ಧಾರವಾಡ ರೈತ ಕಲ್ಮೇಶ್ ಹಾಗೆ!
ಹಳೆಯ ಸೈಕಲ್ ಗಳನ್ನು ಸಾಮಾನ್ಯವಾಗಿ ಮಾರಿಬಿಡುತ್ತಾರೆ, ಹಳೆಯದಾಗಿ ತುಕ್ಕು ಹಿಡಿದಿದ್ದರೆ ಸ್ಕ್ರ್ಯಾಪ್ ಗೆ ಹಾಕುತ್ತಾರೆ. ಆದರೆ ಕಲ್ಮೇಶ್ ಹಳೆ ಸೈಕಲನ್ನು ಹೀಗೆ ಬದಲಾಯಿಸಿ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ
ಧಾರವಾಡ: ಸ್ಟಾರ್ಟ್ ಅಪ್ ಯೋಜನೆಯಲ್ಲಿ (Start Up Schemes) ಕೋಟ್ಯಾಂತರ ಹಣ ತೊಡಗಿಸಿ ಉದ್ಯಮಿಗಳೆನಿಸಿಕೊಳ್ಳುವವರು ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ಶಿರಕೋಳ ಗ್ರಾಮದ ರೈತ ಕಲ್ಮೇಶ್ ತಲವಾಯಿ (Kalmesh Talavayi) ಅವರನ್ನೊಮ್ಮೆ ಭೇಟಿಯಾಗಬೇಕು. ಕಲ್ಮೇಶ್ ಅವರ ಇನ್ನೋವೇಶನ್ ಹೇಗಿದೆ ಅಂತ ಒಮ್ಮೆ ನೋಡಿ. ಎಡೆ ಹೊಡೆಯಲೆಂದೇ ಅವರು ಈ ಮಾದರಿಯನ್ನು ಸೃಷ್ಟಿ ಮಾಡಿದ್ದಾರೆ. ಹಳೆಯ ಸೈಕಲ್ ಗಳನ್ನು (old cycles) ಸಾಮಾನ್ಯವಾಗಿ ಮಾರಿಬಿಡುತ್ತಾರೆ, ಹಳೆಯದಾಗಿ ತುಕ್ಕು ಹಿಡಿದಿದ್ದರೆ ಸ್ಕ್ರ್ಯಾಪ್ ಗೆ ಹಾಕುತ್ತಾರೆ. ಆದರೆ ಕಲ್ಮೇಶ್ ಹಳೆ ಸೈಕಲನ್ನು ಹೀಗೆ ಬದಲಾಯಿಸಿ ಅದರ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಗಳೆ (ಎಡೆ) ಹೊಡೆಯೋದು ಕಷ್ಟದ ಕೆಲಸ ಮಾರಾಯ್ರೇ. ಹಾಗಾಗೇ ಆ ಕೆಲಸಕ್ಕೆ ಎತ್ತು-ಹೋರಿಗಳನ್ನು ಬಳಸುತ್ತಾರೆ. ಕಲ್ಮೇಶ್ ತಮ್ಮ ದ್ವಿಚಕ್ರವಾಹನವನ್ನು ಬಳಸಿ ಎಡೆ ಹೊಡೆಯುತ್ತಿದ್ದಾರೆ. ಅವರ ಇನ್ನೋವೇಶನ್ ಗೆ ನಮ್ಮದೊಂದು ಸಲಾಂ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos