120 ಕಿ.ಮೀ.ವರೆಗೆ ಟ್ರ್ಯಾಕ್ಟರ್ ರಿವರ್ಸ್ ಚಲಾಯಿಸಿ ದೇವಸ್ಥಾನಕ್ಕೆ ಹೋದ ಧಾರವಾಡದ ಯುವಕ
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ ಗ್ರಾಮದಿಂದ ಯುವಕನೊಬ್ಬ 120 ಕಿ.ಮೀ. ದೂರದಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಉಳವಿಯಲ್ಲಿರುವ ಚನ್ನಬಸವೇಶ್ವರ ದೇವಸ್ಥಾನಕ್ಕೆ ಟ್ರ್ಯಾಕ್ಟರ್ ಅನ್ನು ರಿವರ್ಸ್ ಓಡಿಸಿದ ಘಟನೆ ನಡೆದಿದೆ. ಗ್ರಾಮದ ಮಲ್ಲಯ್ಯ ಯಮನೂರ್ ಅನ್ನೋ ಯುವಕನಿಂದ ಈ ವಿಶಿಷ್ಟ ಪ್ರಯತ್ನ ನಡೆದಿದೆ.
ಹುಬ್ಬಳ್ಳಿ, ಸೆ.3: ಯುವಕನೊಬ್ಬ 120 ಕಿಲೋ ಮೀಟರ್ ದೂರದವರೆಗೆ ಟ್ರ್ಯಾಕ್ಟರ್ ಅನ್ನು ರಿವರ್ಸ್ ಚಲಾಯಿಸಿ ದೇವಾಲಯಕ್ಕೆ ಹೋದ ಘಟನೆ ನಡೆದಿದೆ. ಧಾರವಾಡ (Dharwad) ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ ಗ್ರಾಮದಿಂದ ಮಲ್ಲಯ್ಯ ಯಮನೂರ್ ಎಂಬಾತ ಟ್ರ್ಯಾಕ್ಟರ್ ಅನ್ನು ರಿವರ್ಸ್ ಚಲಾಯಿಸಿಕೊಂಡು ಉತ್ತರ ಕನ್ನಡ (Uttara Kannada) ಜಿಲ್ಲೆಯ ಜೋಯಿಡಾ ತಾಲೂಕಿನ ಉಳವಿಯಲ್ಲಿರುವ ಸುಪ್ರಸಿದ್ದ ಚನ್ನಬಸವೇಶ್ವರ ದೇವಸ್ಥಾನಕ್ಕೆ ಹೋಗಿದ್ದಾನೆ. 10 ಗಂಟೆಗಳಲ್ಲಿ ರಾಮನಾಳ ಗ್ರಾಮದಿಂದ ಉಳವಿಗೆ ತಲುಪಿದ್ದಾನೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos