Dhruva Sarja: ‘ಮಾರ್ಟಿನ್​’ ಸಿನಿಮಾ ಬಗ್ಗೆ ಬಹುದೊಡ್ಡ ಅಪ್​ಡೇಟ್​; ಸುದ್ದಿಗೋಷ್ಠಿ ಲೈವ್​ ನೋಡಿ..

|

Updated on: May 24, 2024 | 8:19 PM

ಬೆಂಗಳೂರಿನ ಸ್ಟಾರ್ ಹೋಟೆಲ್​ವೊಂದರಲ್ಲಿ ‘ಮಾರ್ಟಿನ್​’ ಸಿನಿಮಾದ ಸುದ್ದಿಗೋಷ್ಠಿ ನಡೆಸಲಾಗುತ್ತಿದೆ. ಧ್ರುವ ಸರ್ಜಾ ನಟನೆಯ ಈ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆ ಸೃಷ್ಟಿ ಆಗಿದೆ. ಇಂದು (ಮೇ 24) ಸುದ್ದಿಗೋಷ್ಠಿಯಲ್ಲಿ ಪ್ರಮುಖ ವಿಚಾರದ ಬಗ್ಗೆ ‘ಮಾರ್ಟಿನ್​’ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ. ಸುದ್ದಿಗೋಷ್ಠಿಯ ಲೈವ್​ ನೋಡಲು ಇಲ್ಲಿ ಕ್ಲಿಕ್​ ಮಾಡಿ..

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ಮಾರ್ಟಿನ್​’ (Martin Movie) ಬಗ್ಗೆ ಇಂದು (ಮೇ 24) ಬಹು ದೊಡ್ಡ ಅಪ್​ಡೇಟ್​ ನೀಡಲಾಗುತ್ತಿದೆ. ಇದನ್ನು ತಿಳಿಸಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿದೆ. ಪ್ರೇಕ್ಷಕರಿಗೆ ಸಖತ್​ ಕುತೂಹಲ ಮೂಡಿದೆ. ಧ್ರುವ ಸರ್ಜಾ (Dhruva Sarja) ಅಭಿನಯದ ಈ ಸಿನಿಮಾ ಕುರಿತು ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ನಿರ್ಮಾಪಕ ಉದಯ್​ ಕೆ. ಮೆಹ್ತಾ ಅವರು ಈ ಸಿನಿಮಾವನ್ನು ಬಹುಕೋಟಿ ರೂಪಾಯಿ ಬಜೆಟ್​ನಲ್ಲಿ ನಿರ್ಮಾಣ ಮಾಡಿದ್ದಾರೆ. ಎ.ಪಿ. ಅರ್ಜುನ್​ ನಿರ್ದೇಶನ ಈ ಸಿನಿಮಾಗಿದೆ. ಹೆಚ್ಚೇನೂ ಸುಳಿವು ನೀಡದೇ ‘ಮಾರ್ಟಿನ್​’ ಚಿತ್ರತಂಡ ಸುದ್ದಿಗೋಷ್ಠಿ (Martin Movie Press Meet) ಕರೆದಿದೆ. ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಪ್ರೆಸ್​ ಮೀಟ್​ ನಡೆಯುತ್ತಿದೆ. ಮಾರ್ಟಿನ್​ ಸುದ್ದಿಗೋಷ್ಠಿಯ ಲೈವ್​ ವಿಡಿಯೋ ಇಲ್ಲಿದೆ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.