Dhruva Sarja: ‘ಮಾರ್ಟಿನ್​’ ರಿಲೀಸ್​ ಹೊಸ್ತಿಲಲ್ಲಿ ಚಿತ್ರತಂಡದ ಸುದ್ದಿಗೋಷ್ಠಿ; ಲೈವ್​ ನೋಡಿ..

|

Updated on: Oct 02, 2024 | 4:58 PM

ಧ್ರುವ ಸರ್ಜಾ ನಟನೆಯ ‘ಮಾರ್ಟಿನ್​’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾಗೆ ಎ.ಪಿ. ಅರ್ಜುನ್​ ನಿರ್ದೇಶನ ಮಾಡಿದ್ದು, ಅಭಿಮಾನಿಗಳಲ್ಲಿ ಕ್ರೇಜ್​ ಹೆಚ್ಚಾಗಿದೆ. ರಿಲೀಸ್​ಗೆ ಕೆಲವೇ ದಿನಗಳು ಬಾಕಿ ಇರುವ ಈ ಸಂದರ್ಭದಲ್ಲಿ ‘ಮಾರ್ಟಿನ್​’ ಚಿತ್ರತಂಡದವರು ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ಪ್ರೆಸ್​ಮೀಟ್​ ಲೈವ್​ ವಿಡಿಯೋ ಇಲ್ಲಿದೆ ನೋಡಿ..

‘ಆ್ಯಕ್ಷನ್​ ಪ್ರಿನ್ರ್ಸ್​’ ಧ್ರುವ ಸರ್ಜಾ ಅವರು ‘ಮಾರ್ಟಿನ್​’ ಸಿನಿಮಾದಲ್ಲಿ ಸಖತ್​ ಮಾಸ್​ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಹಾಡುಗಳು ಮತ್ತು ಟ್ರೇಲರ್​ ಗಮನ ಸೆಳೆದಿದೆ. ಅಕ್ಟೋಬರ್​ 11ರಂದು ವಿಶ್ವಾದ್ಯಂತ ಈ ಸಿನಿಮಾ ತೆರೆಕಾಣಲಿದೆ. ಎ.ಪಿ. ಅರ್ಜುನ್​ ಮತ್ತು ಧ್ರುವ ಸರ್ಜಾ ಕಾಂಬಿನೇಷನ್​ನ ಸಿನಿಮಾ ಆದ್ದರಿಂದ ‘ಮಾರ್ಟಿನ್​’ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಚಿತ್ರತಂಡದವರು ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ್ದು, ಸಿನಿಮಾ ಬಗ್ಗೆ ಇನ್ನಷ್ಟು ಮಾಹಿತಿ ನೀಡಲಾಗುತ್ತಿದೆ. ಅದರ ವಿಡಿಯೋ ಇಲ್ಲಿದೆ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.