‘ದಣಿದ್ದೀನಿ, ಮತ್ತೆ ಮಾತನಾಡುತ್ತೇನೆ’; ಹಲ್ಲೆ ಬಳಿಕ ಧ್ರುವ ಜಿಮ್ ಟ್ರೇನರ್ ಮಾತು

‘ದಣಿದ್ದೀನಿ, ಮತ್ತೆ ಮಾತನಾಡುತ್ತೇನೆ’; ಹಲ್ಲೆ ಬಳಿಕ ಧ್ರುವ ಜಿಮ್ ಟ್ರೇನರ್ ಮಾತು

Malatesh Jaggin
| Updated By: ರಾಜೇಶ್ ದುಗ್ಗುಮನೆ

Updated on: May 28, 2024 | 8:33 AM

ಧ್ರುವ ಸರ್ಜಾ ಅವರ ಮನೆಯಿಂದ ಪ್ರಶಾಂತ್ ರಾತ್ರಿ ಹೊರಟಿದ್ದರು. ಮನೆಯ ಸಮೀಪವೇ ಈ ದಾಳಿ ನಡೆದಿದೆ. ಆ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸದ್ಯ ಪ್ರಶಾಂತ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅವರು ಮಾಧ್ಯಮಗಳ ಜೊತೆ ಮಾತನಾಡಲು ನಿರಾಕರಿಸಿದ್ದಾರೆ.

ಧ್ರುವ ಸರ್ಜಾ (Dhruva Sarja) ಜಿಮ್ ಟ್ರೇನರ್ ಪ್ರಶಾಂತ್ ಮೇಲೆ ಕೆಲ ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ. ಧ್ರುವ ಸರ್ಜಾ ಅವರ ಮನೆಯಿಂದ ಪ್ರಶಾಂತ್ ರಾತ್ರಿ ಹೊರಟಿದ್ದರು. ಮನೆಯ ಸಮೀಪವೇ ಈ ದಾಳಿ ನಡೆದಿದೆ. ಆ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸದ್ಯ ಪ್ರಶಾಂತ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅವರು ಮಾಧ್ಯಮಗಳ ಜೊತೆ ಮಾತನಾಡಲು ನಿರಾಕರಿಸಿದ್ದಾರೆ. ‘ಯಜಮಾನರ ಮನೆಯಿಂದ ರಾತ್ರಿ ಹೊರಟಿದ್ದೆ. ಈ ವೇಳೆ ದಾಳಿ ನಡೆದಿದೆ. ದಾಳಿ ಮಾಡಿದವರು ಯಾರು ಎಂಬುದೂ ಗೊತ್ತಿಲ್ಲ. ಈಗ ದಣಿದಿದ್ದೇನೆ. ಮತ್ತೆ ಮಾತನಾಡುತ್ತೇನೆ. ಪೊಲೀಸರ ಬಳಿ ಎಲ್ಲಾ ದಾಖಲೆಗಳು ಇವೆ’ ಎಂದಿದ್ದಾರೆ ಪ್ರಶಾಂತ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.