AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೂನಿಯರ್​ ಎನ್​ಟಿಆರ್​, ಪ್ರಶಾಂತ್​ ನೀಲ್​ ಜೋಡಿಯ ಸಿನಿಮಾ ಬಗ್ಗೆ ಸಿಕ್ತು ದೊಡ್ಡ ಅಪ್​ಡೇಟ್​

‘ದೇವರ’, ‘ವಾರ್ 2’ ಸಿನಿಮಾದ ಕೆಲಸಗಳಲ್ಲಿ ಜೂನಿಯರ್​ ಎನ್​ಟಿಆರ್​ ಅವರು ಬ್ಯುಸಿ ಆಗಿದ್ದಾರೆ. ಪ್ರಶಾಂತ್​ ನೀಲ್​ ಹಾಗೂ ಜೂನಿಯರ್​ ಎನ್​ಟಿಆರ್​ ಅವರ ಕಾಂಬಿನೇಷನ್​ನಲ್ಲಿ ಮೂಡಿಬರಲಿರುವ ಹೊಸ ಸಿನಿಮಾ ಬಗ್ಗೆ ಸಖತ್​ ನಿರೀಕ್ಷೆ ಇದೆ. ಇಂದು (20) ಜೂ. ಎನ್​ಟಿರ್​ ಹುಟ್ಟುಹಬ್ಬದ ಪ್ರಯುಕ್ತ ಶೂಟಿಂಗ್​ ಬಗ್ಗೆ ಮಾಹಿತಿ ನೀಡಲಾಗಿದೆ.

ಜೂನಿಯರ್​ ಎನ್​ಟಿಆರ್​, ಪ್ರಶಾಂತ್​ ನೀಲ್​ ಜೋಡಿಯ ಸಿನಿಮಾ ಬಗ್ಗೆ ಸಿಕ್ತು ದೊಡ್ಡ ಅಪ್​ಡೇಟ್​
ಪ್ರಶಾಂತ್​ ನೀಲ್​, ಜೂನಿಯರ್​ ಎನ್​ಟಿಆರ್​
ಮದನ್​ ಕುಮಾರ್​
|

Updated on: May 20, 2024 | 10:28 PM

Share

ನಿರ್ದೇಶಕ ಪ್ರಶಾಂತ್​ ನೀಲ್​ (Prashanth Neel) ಅವರು ಪರಭಾಷೆಯಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 2’ ಬಳಿಕ ಅವರು ಟಾಲಿವುಡ್​ ಸ್ಟಾರ್​ ಹೀರೋ ಪ್ರಭಾಸ್​ ಜೊತೆ ‘ಸಲಾರ್​’ ಸಿನಿಮಾ ಮಾಡಿದರು. ಈಗ ಅದರ 2ನೇ ಪಾರ್ಟ್​ಗೆ ತಯಾರಿ ನಡೆದಿದೆ. ಅಲ್ಲದೇ, ಜೂನಿಯರ್​ ಎನ್​ಟಿಆರ್​ (Jr NTR) ಅವರ ಜೊತೆಗೂ ಪ್ರಶಾಂತ್​ ನೀಲ್​ ಅವರು ಒಂದು ಸಿನಿಮಾ ಮಾಡಲಿದ್ದಾರೆ. ಆ ಬಗ್ಗೆ ಇಂದು (ಮೇ 20) ಸೂಪರ್​ ಅಪ್​ಡೇಟ್​ ಸಿಕ್ಕಿದೆ. ಜೂನಿಯರ್​ ಎನ್​ಟಿಆರ್ ಅವರ ಬರ್ತ್​ಡೇ (Jr NTR Birthday) ಪ್ರಯುಕ್ತ ನಿರ್ಮಾಣ ಸಂಸ್ಥೆಯಿಂದ ಗುಡ್​ ನ್ಯೂಸ್​ ನೀಡಲಾಗಿದೆ. ಶೂಟಿಂಗ್​ ಆರಂಭದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.

ಜೂನಿಯರ್​ ಎನ್​ಟಿಆರ್​ ಮತ್ತು ಪ್ರಶಾಂತ್​ ನೀಲ್ ಅವರ ಕಾಂಬಿನೇಷನ್​ನ ಸಿನಿಮಾ ಅನೌನ್ಸ್​ ಆಗಿ ಬಹಳ ತಿಂಗಳು ಕಳೆದಿವೆ. ಆದರೆ ಯಾವಾಗ ಇದರ ಶೂಟಿಂಗ್​ ಆರಂಭ ಆಗಲಿದೆ ಎಂಬುದು ತಿಳಿದಿರಲಿಲ್ಲ. ಈಗ ನಿರ್ಮಾಣ ಸಂಸ್ಥೆಯಾದ ‘ಮೈತ್ರಿ ಮೂವೀ ಮೇಕರ್ಸ್​’ ಕಡೆಯಿಂದ ಅಪ್​ಡೇಟ್​ ನೀಡಲಾಗಿದೆ. ಆಗಸ್ಟ್​ ತಿಂಗಳಿಂದ ಈ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ.

ಟಾಲಿವುಡ್​ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ‘ಮೈತ್ರಿ ಮೂವೀ ಮೇಕರ್ಸ್​’ ಸೋಶಿಯಲ್​ ಮೀಡಿಯಾ ಖಾತೆ ಮೂಲಕ ಜೂನಿಯರ್​ ಎನ್​ಟಿಆರ್​ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲಾಗಿದೆ. ‘ಮ್ಯಾನ್​ ಆಫ್​ ಮಾಸಸ್​ ಜೂನಿಯರ್​ ಎನ್​ಟಿಆರ್​ ಅವರಿಗೆ ಹ್ಯಾಪಿ ಬರ್ತ್​ಡೇ. 2024ರ ಆಗಸ್ಟ್​ನಿಂದ ಶೂಟಿಂಗ್​ ಆರಂಭ ಆಗಲಿದೆ. ಪವರ್​ಹೌಸ್​ ಪ್ರಾಜೆಕ್ಟ್​ಗಾಗಿ ಸಿದ್ಧರಾಗಿ’ ಎಂದು ಪೋಸ್ಟ್​ ಮಾಡಲಾಗಿದೆ.

ಇದನ್ನೂ ಓದಿ: ಪ್ರಶಾಂತ್​ ನೀಲ್​, ಜೂ. ಎನ್​ಟಿಆರ್​ಗೆ ‘ಡ್ರ್ಯಾಗನ್​’ ಟೈಟಲ್​ ಕೊಟ್ಟಿದ್ದು ಕರಣ್​ ಜೋಹರ್​?

ಶೂಟಿಂಗ್​ ಶುರುವಾಗುವ ಸಮಯವನ್ನು ಹೊರತುಪಡಿಸಿ ಬೇರೆ ಯಾವುದೇ ಮಾಹಿತಿ ಸದ್ಯಕ್ಕೆ ಹೊರಬಿದ್ದಿಲ್ಲ. ಮೂಲಗಳ ಪ್ರಕಾರ ಈ ಸಿನಿಮಾಗೆ ‘ಡ್ರ್ಯಾಗನ್​’ ಎಂದು ಶೀರ್ಷಿಕೆ ಇಡಲಾಗಿದೆ. ತೆಲುಗು, ಕನ್ನಡ, ಮಲಯಾಳಂ, ತಮಿಳು, ಹಿಂದಿ ಮುಂತಾದ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ‘ಡ್ರ್ಯಾಗನ್​’ ಶೀರ್ಷಿಕೆಯನ್ನು ಹಿಂದಿಯಲ್ಲಿ ಕರಣ್​ ಜೋಹರ್​ ಅವರು ನೀಡಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!