AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್​​ಗೆ ‘ಕೆಜಿಎಫ್’​​ನಲ್ಲಿ ನಕಲಿ ಗೋಲ್ಡ್​ ಬಿಸ್ಕತ್​, ‘ರಾಮಾಯಣ’ದಲ್ಲಿ ರಿಯಲ್ ಚಿನ್ನ; ಏನಿದು ಕಥೆ?

ಸಿನಿಮಾದಲ್ಲಿ ದೊಡ್ಡ ಮಟ್ಟದಲ್ಲಿ ಚಿನ್ನವನ್ನು ತೋರಿಸಬೇಕಿದ್ದರೆ ಸಾಮಾನ್ಯವಾಗಿ ನಕಲಿ ಚಿನ್ನ ಬಳಕೆ ಮಾಡಲಾಗುತ್ತದೆ. ಅಸಲಿ ಚಿನ್ನ ಬಳಕೆ ಮಾಡಿದರೆ ಸಿನಿಮಾದ ಬಜೆಟ್ ಹೆಚ್ಚಲಿದೆ. ಆದರೆ, ‘ರಾಮಾಯಣ’ ಸಿನಿಮಾ ನಿರ್ಮಾಪಕರು ಬಜೆಟ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತಿಲ್ಲ.

ಯಶ್​​ಗೆ ‘ಕೆಜಿಎಫ್’​​ನಲ್ಲಿ ನಕಲಿ ಗೋಲ್ಡ್​ ಬಿಸ್ಕತ್​, ‘ರಾಮಾಯಣ’ದಲ್ಲಿ ರಿಯಲ್ ಚಿನ್ನ; ಏನಿದು ಕಥೆ?
ಯಶ್
Follow us
ರಾಜೇಶ್ ದುಗ್ಗುಮನೆ
|

Updated on: May 21, 2024 | 7:04 AM

ಯಶ್ (Yash) ನಟನೆಯ ‘ಕೆಜಿಎಫ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಈ ಸಿನಿಮಾದ ಕಥೆ ಇರೋದು ಚಿನ್ನದ ಮೇಲೆ. ಗೋಲ್ಡ್ ಬಿಸ್ಕತ್​ಗಳ ಸ್ಮಗ್ಲಿಂಗ್ ಕಥೆಯನ್ನು ಈ ಚಿತ್ರ ಹೊಂದಿದೆ. ಇದರಲ್ಲಿ ಬಳಕೆ ಆಗಿರೋದು ನಕಲಿ ಚಿನ್ನವಾಗಿತ್ತು. ಈ ಚಿತ್ರಕ್ಕೆ ಪಾರ್ಟ್​ 3 ಬರಬೇಕಿದೆ. ಹೀಗಿರುವಾಗಲೇ ಯಶ್ ಅವರು ಈಗ ನಿಜವಾದ ಚಿನ್ನದ ಜೊತೆ ಡೀಲ್ ಮಾಡಬೇಕಿದೆ. ‘ರಾಮಾಯಣ’ ಸಿನಿಮಾದಲ್ಲಿ ಅಸಲಿ ಗೋಲ್ಡ್ ಬಳಕೆಗೆ ನಿರ್ದೇಶಕ ನಿತೇಶ್ ತಿವಾರಿ ಮುಂದಾಗಿದ್ದಾರೆ.

ಸಿನಿಮಾದಲ್ಲಿ ದೊಡ್ಡ ಮಟ್ಟದಲ್ಲಿ ಚಿನ್ನವನ್ನು ತೋರಿಸಬೇಕಿದ್ದರೆ ಸಾಮಾನ್ಯವಾಗಿ ನಕಲಿ ಚಿನ್ನ ಬಳಕೆ ಮಾಡಲಾಗುತ್ತದೆ. ಅಸಲಿ ಚಿನ್ನ ಬಳಕೆ ಮಾಡಿದರೆ ಸಿನಿಮಾದ ಬಜೆಟ್ ಹೆಚ್ಚಲಿದೆ. ಆದರೆ, ‘ರಾಮಾಯಣ’ ಸಿನಿಮಾ ನಿರ್ಮಾಪಕರು ಬಜೆಟ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತಿಲ್ಲ. ಈ ಸಿನಿಮಾದ ಬಜೆಟ್ 850 ಕೋಟಿ ರೂಪಾಯಿ ಮೀರಿದೆ ಎಂದು ಈಗಾಗಲೇ ವರದಿ ಆಗಿದೆ. ಅಸಲಿ ಚಿನ್ನ ಬಳಕೆ ಮಾಡುತ್ತಿರುವುದು ಕೂಡ ಚಿತ್ರಕ್ಕೆ ದುಬಾರಿ ಆಗಿದೆ.

ಯಶ್​ ಅವರು ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರಿಗೆ ನಿಜವಾದ ಚಿನ್ನದ ಜ್ಯುವೆಲರಿ ಬಳಕೆ ಮಾಡಲಾಗುತ್ತಿದೆ. ಚಿನ್ನದ ಕಿರೀಟ ಕೂಡ ಇರಲಿದೆ. ‘ಕೆಜಿಎಫ್​’ನಲ್ಲಿ ನಕಲಿ ಗೋಲ್ಡ್ ಬಿಸ್ಕತ್ ಬಳಕೆ ಮಾಡಲಾಗಿತ್ತು. ಈಗ ‘ರಾಮಾಯಣ’ಕ್ಕಾಗಿ ಯಶ್ ನಿಜವಾದ ಗೋಲ್ಡ್​ಗಳ ಜೊತೆ ಡೀಲ್ ಮಾಡಬೇಕಿದೆ. ಯಶ್ ಜೊತೆ ರಾಮನ ಪಾತ್ರ ಮಾಡುತ್ತಿರುವ ರಣಬೀರ್ ಕಪೂರ್, ಸೀತೆ ಪಾತ್ರ ಮಾಡುತ್ತಿರುವ ಸಾಯಿ ಪಲ್ಲವಿಗೂ ಅಸಲಿ ಚಿನ್ನ ಬಳಕೆ ಆಗಲಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

ಇದನ್ನೂ ಓದಿ: ‘ರಾಮಾಯಣ’ ಸಿನಿಮಾ ಲಾಭದಲ್ಲಿ ಯಶ್​ಗೆ ಸಿಗೋ ಪಾಲೆಷ್ಟು? ಇಲ್ಲಿದೆ ವಿವರ

ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಗೀತು ಮೋಹನ್​ದಾಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ಮುಂದಿನ ಏಪ್ರಿಲ್​ನಲ್ಲಿ ರಿಲೀಸ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.