AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಷತಾ ಪಾಂಡವಪುರ ನಟನೆಯ ಹೊಸ ಸಿನಿಮಾ ‘ಕೌಮುದಿ’; ಸರಳವಾಗಿ ನಡೆಯಿತು ಮುಹೂರ್ತ

‘ಪಿಂಕಿ ಎಲ್ಲಿ’, ‘ಕೋಳಿ ಎಸ್ರು’ ಮುಂತಾದ ಸಿನಿಮಾಗಳ ಮೂಲಕ ನಟಿ ಅಕ್ಷತಾ ಪಾಂಡವಪುರ ಅವರು ಸಿನಿಪ್ರಿಯರ ಗಮನ ಸೆಳೆದಿದ್ದಾರೆ. ಈಗ ಅವರ ಹೊಸ ಸಿನಿಮಾ ‘ಕೌಮುದಿ’ ಸೆಟ್ಟೇರಿದೆ. ಸರಳವಾಗಿ ಈ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಗಿದೆ. ಯಶೋದಾ ಪ್ರಕಾಶ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಬಗ್ಗೆ ಇಲ್ಲಿದೆ ಮಾಹಿತಿ..

ಅಕ್ಷತಾ ಪಾಂಡವಪುರ ನಟನೆಯ ಹೊಸ ಸಿನಿಮಾ ‘ಕೌಮುದಿ’; ಸರಳವಾಗಿ ನಡೆಯಿತು ಮುಹೂರ್ತ
‘ಕೌಮುದಿ’ ಸಿನಿಮಾ ಮುಹೂರ್ತ
ಮದನ್​ ಕುಮಾರ್​
|

Updated on: May 21, 2024 | 11:37 AM

Share

ಕನ್ನಡದ ‘ಕಂದೀಲು’ ಸಿನಿಮಾಗೆ (Kannada Cinema) ಈಗಾಗಲೇ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿದ್ದು ಶೀಘ್ರದಲ್ಲೇ ರಿಲೀಸ್​ ಆಗಲಿದೆ. ಈಗ ಇದೇ ಚಿತ್ರತಂಡದಿಂದ ನಾಗೇಶ್ ಎನ್. ಅವರ ಕಥೆಯನ್ನು ಆಧರಿಸಿ ಹೊಸ ಸಿನಿಮಾ ಸೆಟ್ಟೇರಿದೆ. ‘ಕೌಮುದಿ’ (Kaumudi) ಎಂಬುದು ಈ ಸಿನಿಮಾದ ಶೀರ್ಷಿಕೆ. ಹಾರೋಹಳ್ಳಿ ತಾಲ್ಲೋಕಿನ ದಿಂಬದಹಳ್ಳಿಯಲ್ಲಿ ಇರುವ ಬಿಸಲಮ್ಮ ದೇವಾಲಯದಲ್ಲಿ ಸಿಂಪಲ್​ ಆಗಿ ಈ ಸಿನಿಮಾದ ಮುಹೂರ್ತ ಮಾಡಲಾಗಿದೆ. ಆ ಮೂಲಕ ಸಿನಿಮಾದ ಕೆಲಸಗಳಿಗೆ ಚಾಲನೆ ನೀಡಲಾಗಿದೆ. ನಟಿ ಅಕ್ಷತಾ ಪಾಂಡವಪುರ (Akshatha Pandavapura) ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

ದೊಡ್ಡ ಮುದುವಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ದಿವ್ಯಾ ಎಸ್. ಅವರು ‘ಕೌಮುದಿ’ ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದ್ದಾರೆ. ಆ ಮೂಲಕ ಅವರು ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ‘ಬ್ಲೈಂಡ್ ಬಿಲೀಫ್’ ಎನ್ನುವ ಅಡಿಬರಹವು ಈ ಸಿನಿಮಾಗಿದೆ. ‘ಸ್ವಸ್ಕಿಕ್ ಎಂಟರ್‌ಟೈನ್‌ಮೆಂಟ್’ ಬ್ಯಾನರ್​ ಮೂಲಕ ಯಶೋದಾ ಪ್ರಕಾಶ್ ಕೊಟ್ಟುಕತ್ತೀರ ಅವರು ಬಂಡವಾಳ ಹೂಡುತ್ತಿದ್ದಾರೆ. ಅಲ್ಲದೇ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಇದು ಅವರ ಮೂರನೇ ಸಿನಿಮಾ.

‘ಕೌಮುದಿ’ ಸಿನಿಮಾದ ನಿರ್ಮಾಣ ನಿರ್ವಹಣೆ ಹಾಗೂ ಛಾಯಾಗ್ರಹಣದ ಜವಾಬ್ದಾರಿಯನ್ನು ಪಿ.ವಿ.ಆರ್. ಸ್ವಾಮಿ ಅವರು ವಹಿಸಿಕೊಂಡಿದ್ದಾರೆ. ಶ್ರೀಸುರೇಶ್ ಅವರು ಸಂಗೀತ ನಿರ್ದೇಶನ ಮಾಡುತ್ತಿದದ್ದಾರೆ. ಸಂಭಾಷಣೆ ಹಾಗೂ ಸಂಕಲನ ನಾಗೇಶ್ ಎನ್. ಅವರದ್ದು. ನಾಗೇಶ್ ಎನ್., ಹರೀಶ್ ಎಸ್. ಅವರು ಚಿತ್ರಕಥೆ ಬರೆದಿದ್ದಾರೆ. ದಿಂಬಹಳ್ಳಿ, ಬಾಚಹಳ್ಳಿ ದೊಡ್ಡಿ ಮತ್ತು ಕನಕಪುರದ ಸುತ್ತಮುತ್ತ ಒಂದೇ ಹಂತದಲ್ಲಿ ಶೂಟಿಂಗ್​ ಮಾಡಲಾಗುವುದು. ಸಿಂಕ್ ಸೌಂಡ್‌ನಲ್ಲಿ ಸಿನಿಮಾ ಮೂಡಿಬರಲಿದೆ.

ಇದನ್ನೂ ಓದಿ: Pinki Elli Review: ನಾಟಕೀಯ ತಂತ್ರಗಳಿಲ್ಲದೆ ಮಂತ್ರಮುಗ್ಧ ಆಗಿಸುವ ನೈಜ ಸಿನಿಮಾ

ಈ ಸಿನಿಮಾದ ವಸ್ತುವಿಷಯ ವಿಶೇಷವಾಗಿದೆ. ಶಿಕ್ಷಣ ಮತ್ತು ವೈಜ್ಞಾನಿಕ ಆಲೋಚನೆಯ ಕೊರತೆಯಿಂದಾಗಿ ಮೂಲನಂಬಿಕೆ ಮತ್ತು ಮೂಢನಂಬಿಕೆ ನಡುವಿನ ವ್ಯತ್ಯಾಸ ತಿಳಿಯದೇ ಜೀವನದಲ್ಲಿ ಅಪಾಯವನ್ನು ತಂದೊಡ್ಡುವ ಆಚರಣೆ, ಸಂಪ್ರದಾಯಗಳ ಬಗ್ಗೆ ಈ ಸಿನಿಮಾ ಇರಲಿದೆ. ಸತ್ಯ ಹಾಗೂ ವಾಸ್ತವಗಳ ಕುರಿತು ‘ಕೌಮುದಿ’ ಸಿನಿಮಾ ಬೆಳಕು ಚೆಲ್ಲಲಿದೆ.

ಇದನ್ನೂ ಓದಿ: ರೋಹಿಣಿ ಸಿಂಧೂರಿ ಬಯೋಪಿಕ್​ ಬಗ್ಗೆ ಚರ್ಚೆ; ಅಕ್ಷತಾ ಪಾಂಡವಪುರ ಹೆಸರನ್ನು ಸೂಚಿಸಿದ ಹಿರಿಯ ಬರಹಗಾರ್ತಿ

ಹಳೇ ಕಾಲದಿಂದ ಇಂದಿನವರೆಗೂ ಗ್ರಾಮೀಣ ಪ್ರದೇಶದಲ್ಲಿ ಇಂಥ ಪದ್ದತಿಗಳನ್ನು ಅನುಸರಿಸುತ್ತಿದ್ದಾರೆ. ಈ ಚಿತ್ರದ ಕಥಾನಾಯಕಿ ಅವುಗಳ ವಿರುದ್ಧ ಧ್ವನಿ ಎತ್ತುತ್ತಾಳೆ. ಆಕೆ ಯಾವ ರೀತಿ ಹೋರಾಟ ಮಾಡುತ್ತಾಳೆ ಎಂಬುದನ್ನು ‘ಕೌಮುದಿ’ ಸಿನಿಮಾದಲ್ಲಿ ತೋರಿಸಲಾಗುವುದು. ‘ಪಿಂಕಿ ಎಲ್ಲಿ’ ಹಾಗೂ ‘ಕೋಳಿಎಸ್ರು’ ಸಿನಿಮಾಗಳ ಮೂಲಕ ಮೆಚ್ಚುಗೆ ಪಡೆದಿರುವ ನಟಿ ಅಕ್ಷತಾ ಪಾಂಡವಪುರ ಅವರ ಜೊತೆ ಕುಮಾರಿ ದೀಪಿಕಾ, ಪ್ರತೀಕ, ಅಂಕಿತಾ ಮೂರ್ತಿ, ಕಾವೇರಿ ಶ್ರೀಧರ್, ನೀನಾಸಂ ನಟರಾಜ್, ರೋಹಿಣಿ, ಪಿ.ಬಿ. ರಾಜು ನಾಯಕ, ಬಂಗಾರ ಶೆಟ್ಟಿ, ತಾರಾ ರಘು ಮುಂತಾದ ಕಲಾವಿದರು ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ