ರೇವ್ ಪಾರ್ಟಿ ಪ್ರಕರಣ: ತೆಲುಗು ನಟಿ ಹೇಮಾ ಅಸಲಿ ಮುಖ ತೆರೆದಿಟ್ಟ ಪೊಲೀಸರು
ಪಾರ್ಟಿ ವೇಳೆ ಎಂಡಿಎಂಎ ಪಿಲ್ಸ್, ಹೈಡ್ರೋ ಗಾಂಜಾ, ಕೊಕೇನ್ ಸೇರಿ ಅನೇಕ ಮಾದಕವಸ್ತುಗಳ ಮಾರಾಟ ಮಾಡಲಾಗಿದೆ. ಪಾರ್ಟಿಯಲ್ಲಿ ಸಿದ್ದಿಕ್, ರಣ್ ದೀರ್, ರಾಜ್ ಭಾವ ಡ್ರಗ್ಸ್ ಮಾರಾಟ ಮಾಡಿದ್ದರು ಎನ್ನಲಾಗಿದೆ. ಮೇ 20ರ ಮುಂಜಾನೆ 3 ಗಂಟೆಗೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ಪಾರ್ಟಿಯಲ್ಲಿ ಹೇಮಾ ಕೂಡ ಇದ್ದರು.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಜಿಆರ್ ಫಾರ್ಮ್ಹೌಸ್ನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ಹಲವು ಸೆಲೆಬ್ರಿಟಿಗಳ ಹೆಸರು ಕೂಡ ಕೇಳಿ ಬರುತ್ತಿದೆ. ಇದರಲ್ಲಿ ಪ್ರಮುಖವಾಗಿರುವುದು ತೆಲುಗು ನಟಿ ಹೇಮಾ (Hema) ಅವರು. ಮೊದಲಿಗೆ ಅವರ ಹೇಮಾ ಕೇಳಿ ಬಂದಾಗ ಇದು ಸುಳ್ಳು ಎಂದಿದ್ದ ಅವರು, ತಾವು ಹೈದರಾಬಾದ್ನ ಫಾರ್ಮ್ಹೌಸ್ನಲ್ಲಿ ಇರೋದಾಗಿ ಸುಳ್ಳು ವಿಡಿಯೋ ಮಾಡಿದ್ದರು. ಅವರು ಕೂಡ ಪಾರ್ಟಿಯಲ್ಲಿ ಇದ್ದರು ಎನ್ನುವ ವಿವಾರವನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಅವರ ಅಸಲಿ ಮುಖ ಬಯಲಿಗೆ ಎಳೆದಿದ್ದಾರೆ.
‘ಸನ್ ಸೆಟ್ ಟು ಸನ್ ರೈಸ್ ವಿಕ್ಟರಿ’ ಎಂದು ಈ ರೇವ್ ಪಾರ್ಟಿಗೆ ಹೆಸರಿಡಲಾಗಿತ್ತು ಎನ್ನಲಾಗಿದೆ. ಅಂದರೆ, ಸಂಜೆಯಿಂದ ಮುಂಜಾನೆವರೆಗೆ ಪಾರ್ಟಿ ಮಾಡೋ ಆಲೋಚನೆ ಇತ್ತು. ಪಾರ್ಟಿ ವೇಳೆ ಎಂಡಿಎಂಎ ಪಿಲ್ಸ್, ಹೈಡ್ರೋ ಗಾಂಜಾ, ಕೊಕೇನ್ ಸೇರಿ ಅನೇಕ ಮಾದಕವಸ್ತುಗಳ ಮಾರಾಟ ಮಾಡಲಾಗಿದೆ. ಪಾರ್ಟಿಯಲ್ಲಿ ಸಿದ್ದಿಕ್, ರಣ್ ದೀರ್, ರಾಜ್ ಭಾವ ಡ್ರಗ್ಸ್ ಮಾರಾಟ ಮಾಡಿದ್ದರು ಎನ್ನಲಾಗಿದೆ. ಮೇ 20ರ ಮುಂಜಾನೆ 3 ಗಂಟೆಗೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ಪಾರ್ಟಿಯಲ್ಲಿ ಹೇಮಾ ಕೂಡ ಇದ್ದರು.
‘ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಭಾಗಿಯಾಗಿದ್ದು ಸತ್ಯ’ ಎಂದಿದ್ದಾರೆ ದಯಾನಂದ್. ಇದೇ ವೇಳೆ ಫಾರ್ಮ್ಹೌಸ್ನಲ್ಲೇ ನಟಿ ವಿಡಿಯೋ ಮಾಡಿ ಹೇಳಿಕೆ ಬಿಡುಗಡೆ ಮಾಡಿರುವ ಪ್ರಕರಣದ ಕುರಿತು ದಯಾನಂದ್ ಮಾತನಾಡಿದ್ದಾರೆ. ‘ಯಾವ ಸಂದರ್ಭದಲ್ಲಿ ವಿಡಿಯೋ ಮಾಡಿದ್ದಾರೆಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ’ ಎಂದು ದಯಾನಂದ್ ಹೇಳಿದ್ದಾರೆ. ಸದ್ಯ ಹೇಮಾ ಅವರ ರಕ್ತದ ಮಾದರಿ ತೆಗೆದುಕೊಂಡು ಅವರನ್ನು ಕಳುಹಿಸಲಾಗಿದೆ.
ಇದನ್ನೂ ಓದಿ: ರೇವ್ ಪಾರ್ಟಿ ಸ್ಥಳದಲ್ಲೇ ವಿಡಿಯೋ ಮಾಡಿ ‘ಹೈದರಾಬಾದ್ನಲ್ಲಿ ಇದೀನಿ’ ಅಂತ ಸುಳ್ಳು ಹೇಳಿದ ನಟಿ ಹೇಮಾ
ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದವರಿಗೆ ಶೀಘ್ರವೇ ಸಿಸಿಬಿ ನೋಟಿಸ್ ನೀಡಲಿದೆ. ಆ ಬಳಿಕ ನಿಗದಿ ಪಡಿಸಿದ ದಿನಾಂಕದಂದು ಪಾರ್ಟಿಯಲ್ಲಿ ಭಾಗಿಯಾಗಿದ್ದ ಮಂದಿ ಅಧಿಕಾರಿಗಳ ಮುಂದೆ ಹಾಜರಾಗಲಿದ್ದಾರೆ. ಪಾರ್ಟಿಯಲ್ಲಿ ಭಾಗಿದ್ದ ಪ್ರತಿಯೊಬ್ಬರ ವಿಚಾರಣೆ ಮಾಡಿ ಸಿಸಿಬಿ ಹೇಳಿಕೆ ದಾಖಲು ಮಾಡಿಕೊಳ್ಳಲಿದೆ. ಈ ವೇಳೆ ಹೇಮಾ ಅವರಿಗೂ ನೋಟಿಸ್ ಜಾರಿ ಆಗಲಿದೆ.
ಸುಳ್ಳು ಹೇಳಿದ್ದ ಹೇಮಾ
ರೇವ್ ಪಾರ್ಟಿಯಲ್ಲಿ ಭಾಗಿಯಾದವರ ಹೆಸರಲ್ಲಿ ಹೇಮಾ ಹೆಸರು ಕೇಳಿ ಬರುತ್ತಿದ್ದಂತೆ ಒಂದು ಐಡಿಯಾ ಮಾಡಿದ್ದರು. ಅದೇ ಫಾರ್ಮ್ಹೌಸ್ನ ಖಾಲಿ ಜಾಗಕ್ಕೆ ತೆರಳಿದ್ದ ಅವರು, ‘ನಾನು ರೇವ್ ಪಾರ್ಟಿ ನಡೆದ ಫಾರ್ಮ್ಹೌಸ್ನಲ್ಲಿ ಇಲ್ಲ. ನಾನು ಇರೋದು ಹೈದರಾಬಾದ್ನ ಫಾರ್ಮ್ಹೌಸ್ನಲ್ಲಿ’ ಎಂದು ಸುಳ್ಳು ಹೇಳಿದ್ದರು. ಈಗ ಅದು ಸುಳ್ಳು ಅನ್ನೋದು ಗೊತ್ತಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.