AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೂ. ಎನ್​ಟಿಆರ್ ಬರ್ತ್​ಡೇನ ಸೆಲೆಬ್ರೇಟ್ ಮಾಡಿದ ಜಪಾನ್ ಫ್ಯಾನ್ಸ್

JR NTR Birthday: ತಾರಕ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ jr NTR ಹ್ಯಾಶ್​ಟ್ಯಾಗ್​ನ ಟ್ರೆಂಡ್ ಮಾಡುತ್ತಿದ್ದಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಜಪಾನ್ ಅಭಿಮಾನಿಗಳು ತಾರಕ್ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ಜೂ. ಎನ್​ಟಿಆರ್ ಬರ್ತ್​ಡೇನ ಸೆಲೆಬ್ರೇಟ್ ಮಾಡಿದ ಜಪಾನ್ ಫ್ಯಾನ್ಸ್
ಜೂನಿಯರ್ ಎನ್​ಟಿಆರ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:May 20, 2024 | 1:21 PM

Share

ಜೂನಿಯರ್​ ಎನ್​ಟಿಆರ್​ (JR NTR) ಅವರು ಇಲ್ಲಿಯವರೆಗೂ ಟಾಲಿವುಡ್ ಹೀರೋ ಆಗಿದ್ದರು. ಆದರೆ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅವರಿಗೆ ಪ್ರಪಂಚದಾದ್ಯಂತ ಅಭಿಮಾನಿಗಳಿದ್ದಾರೆ. ಇಂದು (ಮೇ 20) ಅವರ ಜನ್ಮದಿನ. ವಿಶ್ವದಾದ್ಯಂತ ತಾರಕ್ ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ‘ಆರ್‌ಆರ್‌ಆರ್‌’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಿಟ್ ಆದ ನಂತರ ಎನ್‌ಟಿಆರ್‌ನ ಕ್ರೇಜ್ ಪ್ರಪಂಚದಾದ್ಯಂತ ಹೆಚ್ಚಾಯಿತು. ಅದಕ್ಕೂ ಮೊದಲೂ ಎನ್​ಟಿಆರ್ ಅವರಿಗೆ ಇತರ ದೇಶಗಳಲ್ಲಿಯೂ ಅಭಿಮಾನಿಗಳು ಇದ್ದರು. ಅದರಲ್ಲೂ ಜಪಾನ್‌ನಲ್ಲಿ ಜೂನಿಯರ್​ ಎನ್​ಟಿಆರ್​ಗೆ ಹಲವು ಅಭಿಮಾನಿಗಳಿದ್ದಾರೆ. ಜಪಾನ್ ಅಭಿಮಾನಿಗಳು ತಾರಕ್ ಅವರ ಹಾಡುಗಳಿಗೆ ಡ್ಯಾನ್ಸ್ ಮಾಡುತ್ತಿದ್ದಾರೆ. ತಾರಕ್ ಅವರ ಡೈಲಾಗ್‌ಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಅಭಿಮಾನಿಗಳು ಮತ್ತು ಸಿನಿಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ಜೂ. ಎನ್​ಟಿಆರ್​ಗೆ ಶುಭಾಶಯ ಕೋರುತ್ತಿದ್ದಾರೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರು ತಾರಕ್ ಅವರಿಗೆ ವಿಶೇಷ ಶುಭಾಶಯಗಳನ್ನು ತಿಳಿಸಿದ್ದಾರೆ. ಅವರು ಟ್ವಿಟ್ಟರ್ನಲ್ಲಿ ಜನ್ಮದಿನದ ಶುಭಾಶಯ ಕೋರಿದ್ದಾರೆ. ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೊತೆಗೆ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಕೂಡ ತಾರಕ್​ಗೆ ವಿಶ್ ಮಾಡಿದ್ದಾರೆ. ‘ಜನ್ಮದಿನದ ಶುಭಾಶಯಗಳು ನನ್ನ ಪ್ರೀತಿಯ ತಾರಕ್’ ಎಂದು ಚರಣ್ ಬರೆದಿದ್ದಾರೆ.

ಈ ನಡುವೆ ತಾರಕ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ jr NTR ಹ್ಯಾಶ್​ಟ್ಯಾಗ್​ನ ಟ್ರೆಂಡ್ ಮಾಡುತ್ತಿದ್ದಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಜಪಾನ್ ಅಭಿಮಾನಿಗಳು ತಾರಕ್ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಎನ್​ಟಿಆರ್ ಅವರ ಕಟೌಟ್ ಅನ್ನು ನಿಲ್ಲಿಸಿ, ಹೂವುಗಳನ್ನು ಸೋಕಲಾಗಿದೆ. ಈ ಸಂದರ್ಭದಲ್ಲಿ ತಾರಕ್ ಅವರ ಡ್ಯಾನ್ಸ್ ಮಾಡಲಾಗಿದೆ. ‘ಬೃಂದಾವನಂ’ ಚಿತ್ರದ ‘ಚಿನ್ನದೋ ಪಾಶ ಪೆದ್ದೋ ನಾಶ..’ ಹಾಡಿಗೆ ಡ್ಯಾನ್ಸ್ ಮಾಡುತ್ತಾ ಅವರ ಹುಟ್ಟುಹಬ್ಬದ ವಿಶ್ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಜೂ. ಎನ್​ಟಿಆರ್ ಅಭಿಮಾನಿಗಳು ಶೇರ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಕನ್ನಡದ ಮೇಲೆ ಇದೆ ಜೂನಿಯರ್​ ಎನ್​ಟಿಆರ್​ಗೆ ವಿಶೇಷ ಪ್ರೀತಿ; ಈ ಘಟನೆಗಳೇ ಸಾಕ್ಷಿ

ಜೂನಿಯರ್​ ಎನ್​ಟಿಆರ್ ಬರ್ತ್​ಡೇ ಪ್ರಯುಕ್ತ ಅವರ ಮುಂದಿನ ಸಿನಿಮಾ ‘ದೇವರ’ ಕಡೆಯಿಂದ ಹೊಸ ಸಾಂಗ್ ರಿಲೀಸ್ ಆಗಿದೆ. ಈ ಸಾಂಗ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಅವರಿಗೆ ಎಲ್ಲರೂ ವಿಶ್ ತಿಳಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:21 pm, Mon, 20 May 24