ಪ್ರಶಾಂತ್ ನೀಲ್, ಜೂ. ಎನ್ಟಿಆರ್ಗೆ ‘ಡ್ರ್ಯಾಗನ್’ ಟೈಟಲ್ ಕೊಟ್ಟಿದ್ದು ಕರಣ್ ಜೋಹರ್?
‘ಡ್ರ್ಯಾಗನ್’ ಶೀರ್ಷಿಕೆ ಕರಣ್ ಜೋಹರ್ ಬಳಿ ಇತ್ತು. ಅದನ್ನು ಅವರು ಪ್ರಶಾಂತ್ ನೀಲ್ ಹಾಗೂ ಕರಣ್ ಜೋಹರ್ಗೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಶೀರ್ಷಿಕೆ ನೀಡಲು ಕರಣ್ ಜೋಹರ್ ಹಣ ಪಡೆದಿಲ್ಲ. ಸ್ನೇಹದ ಕಾರಣಕ್ಕೆ ಅವರು ತಮ್ಮ ಬಳಿ ಇದ್ದ ಟೈಟಲ್ ನೀಡಿದ್ದಾರೆ ಎಂದು ವರದಿ ಆಗಿದೆ. ಚಿತ್ರತಂಡದವರು ಈ ಬಗ್ಗೆ ಇನ್ನೂ ಹೇಳಿಕೆ ನೀಡಿಲ್ಲ.
ನಟ ಜೂನಿಯರ್ ಎನ್ಟಿಆರ್ (Jr NTR) ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗಾಗಲೇ ಅವರು ‘ದೇವರ’ ಮತ್ತು ‘ವಾರ್ 2’ ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಬಳಿಕ ಅವರು ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡಲಿದ್ದಾರೆ. ಆ ಚಿತ್ರಕ್ಕೆ ‘ಡ್ರ್ಯಾಗನ್’ (Dragon) ಎಂದು ಶೀರ್ಷಿಕೆ ಇಡಲಾಗಿದೆ ಎಂಬ ಸುದ್ದಿ ಹಬ್ಬಿದೆ. ಅಚ್ಚರಿ ಏನೆಂದರೆ ಅವರಿಗೆ ಈ ಟೈಟಲ್ ನೀಡಿದ್ದ ಕರಣ್ ಜೋಹರ್ (Karan Johar) ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ..
ಕರಣ್ ಜೋಹರ್ ಅವರು ಹಿಂದಿ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ದಕ್ಷಿಣ ಭಾರತದ ಸ್ಟಾರ್ ಕಲಾವಿದರು ಮತ್ತು ತಂತ್ರಜ್ಞರ ಜೊತೆ ಅವರು ಒಡನಾಟ ಹೊಂದಿದ್ದಾರೆ. ಜೂನಿಯರ್ ಎನ್ಟಿಆರ್ ಜೊತೆ ಅವರಿಗೆ ಸ್ನೇಹ ಇದೆ. ‘ದೇವರ’ ಸಿನಿಮಾವನ್ನು ಕರಣ್ ಜೋಹರ್ ಅವರು ಹಿಂದಿಯಲ್ಲಿ ಪ್ರೆಸೆಂಟ್ ಮಾಡುತ್ತಿದ್ದಾರೆ. ಇದರ ಜೊತೆಗೆ ಜೂನಿಯರ್ ಎನ್ಟಿಆರ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ನ ಸಿನಿಮಾಗೆ ಹೊಸ ಶೀರ್ಷಿಕೆಯನ್ನು ಸಹ ಕರಣ್ ಜೋಹರ್ ನೀಡಿದ್ದಾರೆ ಎನ್ನಲಾಗಿದೆ.
ಇದು ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡ, ತೆಲುಗು, ಮಲಯಾಳ ಹಾಗೂ ತಮಿಳಿನಲ್ಲಿ ‘ಡ್ರ್ಯಾಗನ್’ ಎಂಬ ಶೀರ್ಷಿಕೆ ಈ ಚಿತ್ರತಂಡಕ್ಕೆ ಸಿಕ್ಕಿತು. ಆದರೆ ಹಿಂದಿಯಲ್ಲಿ ಆ ಟೈಟಲ್ ಅನ್ನು ಈಗಾಗಲೇ ಕರಣ್ ಜೋಹರ್ ಅವರು ನೋಂದಣಿ ಮಾಡಿಸಿಕೊಂಡಿದ್ದರು. ಕರಣ್ ಜೋಹರ್ ಜೊತೆ ಜೂನಿಯರ್ ಎನ್ಟಿಆರ್ ಅವರು ಮಾತನಾಡಿ ಈ ಟೈಟಲ್ ಪಡೆದುಕೊಂಡಿದ್ದಾರೆ ಎಂದು ಸುದ್ದಿ ಆಗಿದೆ.
ಇದನ್ನೂ ಓದಿ: ಜೂ. ಎನ್ಟಿಆರ್ ಜತೆ ಕೈ ಜೋಡಿಸಿದ ಕರಣ್ ಜೋಹರ್; ‘ದೇವರ’ ದೊಡ್ಡ ಪ್ಲ್ಯಾನ್
‘ಬ್ರಹ್ಮಾಸ್ತ್ರ’ ಸಿನಿಮಾಗೆ ‘ಡ್ರ್ಯಾಗನ್’ ಎಂದು ಶೀರ್ಷಿಕೆ ಇಡಲು ಪ್ಲ್ಯಾನ್ ಮಾಡಲಾಗಿತ್ತು. ಆದರೆ ನಂತರ ‘ಬ್ರಹ್ಮಾಸ್ತ್ರ’ ಶೀರ್ಷಿಕೆ ಅಂತಿಮವಾಯಿತು. ಹಾಗಾಗಿ ‘ಡ್ರ್ಯಾಗನ್’ ಟೈಟಲ್ ಕರಣ್ ಜೋಹರ್ ಬಳಿ ಉಳಿದುಕೊಂಡಿತ್ತು. ಇದು ಕೋಟ್ಯಂತರ ರೂಪಾಯಿ ಬೆಲೆ ಬಾಳುವಂತಹ ಟೈಟಲ್. ಹಾಗಿದ್ದರೂ ಕೂಡ ಕರಣ್ ಜೋಹರ್ ಅವರು ಯಾವುದೇ ಹಣ ಪಡೆಯದೇ ಇದನ್ನು ಜೂನಿಯರ್ ಎನ್ಟಿಆರ್ ಹಾಗೂ ಪ್ರಶಾಂತ್ ನೀಲ್ ಅವರಿಗೆ ಬಿಟ್ಟುಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಯಾವ ಅಂಶಗಳ ಬಗ್ಗೆಯೂ ಚಿತ್ರತಂಡದವರಿಂದ ಹೇಳಿಕೆ ಹೊರಬಿದ್ದಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.