Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೂ. ಎನ್​ಟಿಆರ್​ ಜತೆ ಕೈ ಜೋಡಿಸಿದ ಕರಣ್​ ಜೋಹರ್​; ‘ದೇವರ’ ದೊಡ್ಡ ಪ್ಲ್ಯಾನ್​

ಶೂಟಿಂಗ್​ ಮುಗಿಯುವುದಕ್ಕೂ ಮುನ್ನವೇ ‘ದೇವರ’ ಸಿನಿಮಾದ ಹೈಪ್​ ಹೆಚ್ಚಾಗಿದೆ. ಈ ಸಿನಿಮಾಗೆ ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದು, ಜೂನಿಯರ್​ ಎನ್​ಟಿಆರ್​ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಉತ್ತರ ಭಾರತದಲ್ಲಿ ಈ ಸಿನಿಮಾದ ವಿತರಣೆ ಹಕ್ಕನ್ನು ಕರಣ್​ ಜೋಹರ್​ ಪಡೆದುಕೊಂಡಿದ್ದಾರೆ. ಈ ಡೀಲ್​ ಬಗ್ಗೆ ಅವರಿಗೆ ತುಂಬ ಖುಷಿ ಇದೆ.

ಜೂ. ಎನ್​ಟಿಆರ್​ ಜತೆ ಕೈ ಜೋಡಿಸಿದ ಕರಣ್​ ಜೋಹರ್​; ‘ದೇವರ’ ದೊಡ್ಡ ಪ್ಲ್ಯಾನ್​
‘ದೇವರ’ ಸಿನಿಮಾ ತಂಡದ ಜೊತೆ ಕರಣ್​ ಜೋಹರ್​
Follow us
ಮದನ್​ ಕುಮಾರ್​
|

Updated on: Apr 10, 2024 | 6:06 PM

ನಿರ್ಮಾಪಕ, ನಿರ್ದೇಶಕ ಕರಣ್​ ಜೋಹರ್​ (Karan Johar) ಅವರು ಕೇವಲ ಬಾಲಿವುಡ್​ನಲ್ಲಿ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೂ ಸ್ನೇಹಿತರನ್ನು ಹೊಂದಿದ್ದಾರೆ. ಈಗ ಅವರು ಜೂನಿಯರ್​ ಎನ್​ಟಿಆರ್​ (Jr NTR) ಜೊತೆ ಕೈ ಜೋಡಿಸಿದ್ದಾರೆ. ಅಂದರೆ, ಜೂನಿಯರ್​ ಎನ್​ಟಿಆರ್​ ನಟನೆಯ ‘ದೇವರ’ (Devara) ಸಿನಿಮಾವನ್ನು ಉತ್ತರ ಭಾರತದಲ್ಲಿ ಬಿಡುಗಡೆ ಮಾಡಲು ಕರಣ್​ ಜೋಹರ್​ ಮುಂದೆ ಬಂದಿದ್ದಾರೆ. ಉತ್ತರ ಭಾರತದ ವಿತರಣೆ ಹಕ್ಕನ್ನು ಅವರು ಖರೀದಿಸಿದ್ದಾರೆ. ಆ ಮೂಲಕ ಅದ್ದೂರಿಯಾಗಿ ಸಿನಿಮಾ ರಿಲೀಸ್​ ಮಾಡಲು ಪ್ಲ್ಯಾನ್​ ರೂಪಿಸಲಾಗಿದೆ. ಈ ಸಿನಿಮಾ ಮೇಲೆ ಜೂನಿಯರ್​ ಎನ್​ಟಿಆರ್​ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ.

‘ಯುವಸುಧಾ ಆರ್ಟ್ಸ್​’ ಮತ್ತು ‘ಎನ್​ಟಿಆರ್​ ಆರ್ಟ್ಸ್​’ ಸಂಸ್ಥೆಗಳ ಮೂಲಕ ‘ದೇವರ’ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಸಂಸ್ಥೆಗಳ ಜೊತೆ ಕರಣ್​ ಜೋಹರ್​ ಅವರು ವ್ಯವಹಾರ ಕುದುರಿಸಿದ್ದಾರೆ. ಈ ವಿಚಾರವನ್ನು ಅವರು ಸೋಶಿಯಲ್​ ಮೀಡಿಯಾ ಮೂಲಕ ಖಚಿತಪಡಿಸಿದ್ದಾರೆ. ‘ಜೂನಿಯರ್​ ಎನ್​ಟಿಆರ್​ ಅಭಿನಯದ ‘ದೇವರ’ ಸಿನಿಮಾದ ಭಾಗವಾಗಲು ಸಂತೋಷವಾಗುತ್ತಿದೆ’ ಎಂದು ಅವರು ಪೋಸ್ಟ್​ ಮಾಡಿದ್ದಾರೆ.

View this post on Instagram

A post shared by Karan Johar (@karanjohar)

ಕರಣ್​ ಜೋಹರ್​ ಅವರು ತಮ್ಮ ಒಡೆತನದ ‘ಧರ್ಮ ಪ್ರೊಡಕ್ಷನ್ಸ್​’ ಮೂಲಕ ಈ ಮೊದಲು ‘ಬಾಹುಬಲಿ 1’ ಸಿನಿಮಾವನ್ನು ಉತ್ತರ ಭಾರತದಲ್ಲಿ ಬಿಡುಗಡೆ ಮಾಡಿದ್ದರು. ನಿರ್ಮಾಪಕನಾಗಿ ಹಾಗೂ ನಿರ್ದೇಶಕನಾಗಿ ಮಾತ್ರವಲ್ಲದೇ ವಿತರಕನಾಗಿಯೂ ಅವರು ಅನುಭವ ಹೊಂದಿದ್ದಾರೆ. ‘ದೇವರ’ ಸಿನಿಮಾದಿಂದ ಅವರು ದೊಡ್ಡ ಮಟ್ಟದ ಲಾಭ ಕಾಣುವ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: ಅವಾರ್ಡ್ ಫಂಕ್ಷನ್​ನಲ್ಲಿ ಕರಣ್​ ಜೋಹರ್ ವಿರುದ್ಧ ಕೂಗಾಡಿದ ರಣಬೀರ್ ಕಪೂರ್; ವಿಡಿಯೋ ವೈರಲ್

ಕೊರಟಾಲ ಶಿವ ಅವರು ‘ದೇವರ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಟೀಸರ್​ ಗಮನ ಸೆಳೆದಿದೆ. ಜೂನಿಯರ್​ ಎನ್​ಟಿಆರ್​ ಅವರು ಈ ಸಿನಿಮಾ ಮೇಲೆ ಭಾರಿ ಭರವಸೆ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ವೇದಿಕೆಯೊಂದರಲ್ಲಿ ಮಾತನಾಡಿದ್ದ ಅವರು, ‘ಇದು ನಿಮ್ಮೆಲ್ಲರಿಗೂ ಹೆಮ್ಮೆ ತರುವ ಸಿನಿಮಾ’ ಎಂದು ಅಭಿಮಾನಿಗಳಿಗೆ ಹೇಳಿದ್ದರು. ಈ ಎಲ್ಲ ಕಾರಣಗಳಿಂದಾಗಿ ‘ದೇವರ’ ಚಿತ್ರದ ಮೇಲೆ ಹೈಪ್​ ಹೆಚ್ಚಾಗಿದೆ. ಅಕ್ಟೋಬರ್​ 10ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್