ಕನ್ನಡ ನಿರ್ಮಾಪಕನ ಜೊತೆ ಅನುಷ್ಕಾ ಶೆಟ್ಟಿ ಮದುವೆ? ಟಾಲಿವುಡ್​ ಅಂಗಳದಲ್ಲಿ ಹಲ್​ಚಲ್​ ಎಬ್ಬಿಸಿದ ಗಾಸಿಪ್

ಅನುಷ್ಕಾ ಶೆಟ್ಟಿಗೆ ಈಗ 42 ವರ್ಷ. ಈವರೆಗೆ ಅವರು ಮದುವೆ ಬಗ್ಗೆ ನಿರ್ಧಾರ ಮಾಡಿಲ್ಲ. ಈ ಮೊದಲು ಅವರು ಪ್ರಭಾಸ್​ನ ಮದುವೆ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಆ ವಿಚಾರ ನಿಜವಾಗಿಲ್ಲ. ಈಗ ಅನುಷ್ಕಾ ಹೆಸರು ಸ್ಯಾಂಡಲ್​ವುಡ್ ನಿರ್ಮಾಪಕನ ಜೊತೆ ತಳುಕು ಹಾಕಿಕೊಂಡಿದೆ. 

ಕನ್ನಡ ನಿರ್ಮಾಪಕನ ಜೊತೆ ಅನುಷ್ಕಾ ಶೆಟ್ಟಿ ಮದುವೆ? ಟಾಲಿವುಡ್​ ಅಂಗಳದಲ್ಲಿ ಹಲ್​ಚಲ್​ ಎಬ್ಬಿಸಿದ ಗಾಸಿಪ್
ಅನುಷ್ಕಾ
Follow us
Malatesh Jaggin
| Updated By: ರಾಜೇಶ್ ದುಗ್ಗುಮನೆ

Updated on: May 18, 2024 | 7:02 AM

ನಟಿ ಅನುಷ್ಕಾ ಶೆಟ್ಟಿ (Anushka Shetty) ಅವರು ಮದುವೆ ವಿಚಾರಕ್ಕೆ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಅವರ ಮದುವೆ ಯಾವಾಗ ಅನ್ನೋದು ಅಭಿಮಾನಿಗಳ ಪಾಲಿಗೆ ಯಕ್ಷ ಪ್ರಶ್ನೆಯಾಗಿ ಉಳಿದುಕೊಂಡಿದೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಅನುಷ್ಕಾ ಶೆಟ್ಟಿ ಬಗ್ಗೆ ಹೊಸ ಗಾಸಿಪ್ ಹುಟ್ಟಿಕೊಂಡಿದೆ. ಅವರು ಸ್ಯಾಂಡಲ್​ವುಡ್ ನಿರ್ಮಾಪಕರೊಬ್ಬನನ್ನು ವರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಭಿಮಾನಿಗಳಿಗೆ ಈ ವಿಚಾರವನ್ನು ನಂಬಬೇಕೋ ಅಥವಾ ಬೇಡವೋ ಎಂಬುದು ತಿಳಿಯುತ್ತಿಲ್ಲ.

ಅನುಷ್ಕಾ ಶೆಟ್ಟಿಗೆ ಈಗ 42 ವರ್ಷ. ಈವರೆಗೆ ಅವರು ಮದುವೆ ಬಗ್ಗೆ ನಿರ್ಧಾರ ಮಾಡಿಲ್ಲ. ಈ ಮೊದಲು ಅವರು ಪ್ರಭಾಸ್​ನ ಮದುವೆ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಆ ವಿಚಾರ ನಿಜವಾಗಿಲ್ಲ. ಇಬ್ಬರೂ ಮದುವೆ ಆಗೋ ನಿರ್ಧಾರದಿಂದ ಹಿಂದೆ ಸರಿದರು. ಈಗ ಅನುಷ್ಕಾ ಹೆಸರು ಸ್ಯಾಂಡಲ್​ವುಡ್ ನಿರ್ಮಾಪಕನ ಜೊತೆ ತಳುಕು ಹಾಕಿಕೊಂಡಿದೆ.

ಸದ್ಯ ನಿರ್ಮಾಪಕ ಯಾರು ಎನ್ನುವ ಬಗ್ಗೆ ಚರ್ಚೆ ಜೋರಾಗಿದೆ. ಆ ನಿರ್ಮಾಪಕ ಯಾರು ಅನ್ನೋದಕ್ಕೆ ಸದ್ಯ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಈ ಮೊದಲು ಅನುಷ್ಕಾ ಶೆಟ್ಟಿ ಬಗ್ಗೆ ಈ ರೀತಿಯ ಹಲವು ಸುದ್ದಿಗಳು ಹುಟ್ಟಿಕೊಂಡಿದ್ದು ಇದೆ. ಹೀಗಾಗಿ, ಈಗ ಹೊಸದಾಗಿ ಹುಟ್ಟಿಕೊಂಡಿರೋ ಸುದ್ದಿಯನ್ನು ನಂಬೋಕೆ ಫ್ಯಾನ್ಸ್ ರೆಡಿ ಇಲ್ಲ.

ಇದನ್ನೂ ಓದಿ: Chandu Death: ಶಾಕಿಂಗ್​; ಪವಿತ್ರಾ ಜಯರಾಮ್ ಜೊತೆಗಿದ್ದ ಗೆಳೆಯ ಚಂದು ಆತ್ಮಹತ್ಯೆ

2005ರಲ್ಲಿ ರಿಲೀಸ್ ಆದ ತೆಲುಗಿನ ‘ಸೂಪರ್’ ಸಿನಿಮಾ ಮೂಲಕ ಅನುಷ್ಕಾ ಬಣ್ಣದ ಬದುಕು ಆರಂಭಿಸಿದರು. ‘ಬಾಹುಬಲಿ’, ‘ಮಿರ್ಚಿ’, ‘ಅರುಂಧತಿ’ ಅಂಥ ಸೂಪರ್ ಹಿಟ್ ಸಿನಿಮಾಗಳಲ್ಲಿ ಅವರು ನಟಿಸಿದರು. ಸದ್ಯ ಅವರು ಒಂದು ತೆಲುಗು ಹಾಗೂ ಮಲಯಾಳಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅನುಷ್ಕಾ ಶೆಟ್ಟಿ ಅವರು ಯಾವುದೇ ಕನ್ನಡ ಸಿನಿಮಾಗಳಲ್ಲಿ ನಟಿಸಿಲ್ಲ. ಆದಾಗ್ಯೂ ಕನ್ನಡದ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇದೆ. ಇದನ್ನು ಅವರು ಆಗಾಗ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಅವರ ತಾಯಿ ಮಂಗಳೂರು ಮೂಲದವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್