ಪ್ರಿಯಾಂಕಾ ಗಾಂಧಿ ಬಂದು ಹೋದರೂ ಡಿಕೆ ಶಿವಕುಮಾರ ಮತ್ತು ಸಿದ್ದರಾಮಯ್ಯ ಮಾತ್ರ ‘ನಾನೊಂದು ತೀರ ನೀನೊಂದು ತೀರ!’
ರಂದೀಪ್ ಸಿಂಗ್ ಸುರ್ಜೆವಾಲಾ ಮತ್ತು ಸಿದ್ದರಾಮಯ್ಯ ನಡುವೆ ಕೂತಿರುವ ಶಿವಕುಮಾರ ಮೊಬೈಲ್ ನಲ್ಲಿ ಏನ್ನನ್ನೋ ನೋಡುತ್ತಾ ಅದರಲ್ಲಿ ಮಗ್ನರಾಗಿಬಿಟ್ಟಿದ್ದಾರೆ. ಸಿದ್ದರಾಮಯ್ಯ ಒಮ್ಮೆ ಅವರೆಡೆ ನೋಡಿ ಸುಮ್ಮನಾಗುತ್ತಾರೆ.
ವಿಜಯನಗರ: ಮಂಗಳವಾರ ಹೊಸಪೇಟೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆಯ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದ ವಿಡಿಯೋ ಇದು. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ (Priyanka Gandhi) ಮೊದಲಾದವರೆಲ್ಲ ಬುದ್ಧಿವಾದ ಹೇಳಿದರೂ ಡಿಕೆ ಶಿವಕುಮಾರ (DK Shivakumar) ಮತ್ತು ಸಿದ್ದರಾಮಯ್ಯ (Siddaramaiah) ನಡುವಿನ ಬಿರುಕು ಕಡಿಮೆಯಾಗುತ್ತಿಲ್ಲ. ಸಾರ್ವಜನಿಕ ಸಭೆಗಳಲ್ಲಿ ಅವರಿಬ್ಬರು ಬೇರೆ ಬೇರೆ ದಿಕ್ಕುಗಳತ್ತ ನೋಡುತ್ತಾ ಕೂತಿರುತ್ತಾರೆ. ಅದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗಿತ್ತಿದೆ ಅನ್ನೋದು ಅವರ ಗಮನಕ್ಕೆ ಬರುತ್ತಿಲ್ಲ. ಇಲ್ನೋಡಿ, ರಂದೀಪ್ ಸಿಂಗ್ ಸುರ್ಜೆವಾಲಾ ಮತ್ತು ಸಿದ್ದರಾಮಯ್ಯ ನಡುವೆ ಕೂತಿರುವ ಶಿವಕುಮಾರ ಮೊಬೈಲ್ ನಲ್ಲಿ ಏನ್ನನ್ನೋ ನೋಡುತ್ತಾ ಅದರಲ್ಲಿ ಮಗ್ನರಾಗಿಬಿಟ್ಟಿದ್ದಾರೆ. ಸಿದ್ದರಾಮಯ್ಯ ಒಮ್ಮೆ ಅವರೆಡೆ ನೋಡಿ ಸುಮ್ಮನಾಗುತ್ತಾರೆ. ಸುರ್ಜೆವಾಲಾ ಎಂದಿನಂತೆ ಮೂಕ ಪ್ರೇಕ್ಷಕ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ