Santro Ravi: ಸೆರೆಸಿಕ್ಕ ನಂತರವೇ ಹೆಚ್ಚು ಸುರಕ್ಷಿತವಾಗಿದ್ದಾನೆಯೇ? ಅವನ ಕಸ್ಟಡಿ ಪಡೆಯಲು ವಿಫಲರಾದ ಪೊಲೀಸರೇ ಉತ್ತರಿಸಬೇಕು!

Santro Ravi: ಸೆರೆಸಿಕ್ಕ ನಂತರವೇ ಹೆಚ್ಚು ಸುರಕ್ಷಿತವಾಗಿದ್ದಾನೆಯೇ? ಅವನ ಕಸ್ಟಡಿ ಪಡೆಯಲು ವಿಫಲರಾದ ಪೊಲೀಸರೇ ಉತ್ತರಿಸಬೇಕು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 17, 2023 | 10:58 AM

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಪೊಲೀಸರ ಕ್ರಮವನ್ನು ಪ್ರಶ್ನಿಸಿ ಏನೋ ಕಳ್ಳಾಟ ನಡೆಯುತ್ತಿದೆ ಅಂದಿದ್ದಾರೆ. ಖಡಕ್ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರ ಮೇಲೂ ಒತ್ತಡ ಹೇರಲಾಗಿದೆಯಾ?

ಬೆಂಗಳೂರು: ಸ್ಯಾಂಟ್ರೋ ರವಿಯನ್ನು (Santro Ravi) ರಾಜ್ಯದ ಪೊಲೀಸರು ಎಡೆಬಿಡದೆ ಹುಡುಕಾಡಿ ಗುಜರಾತಿನಲ್ಲಿ ಬಂಧಿಸಿ ಮೈಸೂರಿಗೆ (Mysuru) ಎಳೆತಂದಾಗ ಕನ್ನಡಿಗರು ಅವರ ಬೆನ್ನುತಟ್ಟಿ ಭೇಷ್ ಅಂದಿದ್ದರು. ಪೊಲೀಸರು ರವಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಕಸ್ಟಡಿ ಪಡೆದುಕೊಂಡು ಅವನು ನಡೆಸಿದ ಎಲ್ಲ ಅಕ್ರಮಗಳನ್ನು, ಯಾವ್ಯಾವ ರಾಜಕಾರಣಿ, ಅಧಿಕಾರಿ ಬಳಿ ಯುವತಿಯರನ್ನು ಕಳಿಸಿದ್ದ, ಯಾರನ್ನೆಲ್ಲ ಬ್ಲ್ಯಾಕ್ ಮೇಲ್ ಮಾಡಿದ್ದ ಮೊದಲಾದ ಸಂಗತಿಗಳನ್ನು ಬಯಲಿಗೆಳೆಯುತ್ತಾರೆ ಅಂತ ಜನ ಜನ ನಿರೀಕ್ಷಿಸಿದ್ದರು. ಆದರೆ ಆಗಿರೋದೇ ಬೇರೆ. ಪೊಲೀಸರು ರವಿಯನ್ನು ತಮ್ಮ ಕಸ್ಟಡಿಗೆ ಪಡೆದುಕೊಳ್ಳಲು ವಿಫಲವಾಗಿರುವುದು ನೂರೆಂಟು ಅನುಮಾನಗಳಿಗೆ ಎಡೆಮಾಡಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು (Siddaramaiah) ಪೊಲೀಸರ ಕ್ರಮವನ್ನು ಪ್ರಶ್ನಿಸಿ ಏನೋ ಕಳ್ಳಾಟ ನಡೆಯುತ್ತಿದೆ ಅಂದಿದ್ದಾರೆ. ಖಡಕ್ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರ ಮೇಲೂ ಒತ್ತಡ ಹೇರಲಾಗಿದೆಯಾ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ