Who would be CM? ಮುಖ್ಯಮಂತ್ರಿ ಆಯ್ಕೆ ಗೊಂದಲ ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ, ಕಾಮೆಂಟ್ ಮಾಡಲಾರೆ: ಬಸವರಾಜ ಬೊಮ್ಮಾಯಿ, ಹಂಗಾಮಿ ಸಿಎಂ

Who would be CM? ಮುಖ್ಯಮಂತ್ರಿ ಆಯ್ಕೆ ಗೊಂದಲ ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ, ಕಾಮೆಂಟ್ ಮಾಡಲಾರೆ: ಬಸವರಾಜ ಬೊಮ್ಮಾಯಿ, ಹಂಗಾಮಿ ಸಿಎಂ

ಅರುಣ್​ ಕುಮಾರ್​ ಬೆಳ್ಳಿ
|

Updated on: May 16, 2023 | 1:00 PM

ಅದು ಅವರ ಆಂತರಿಕ ವಿಚಾರ, ತಾವೇನೂ ಕಾಮೆಂಟ್ ಮಾಡುವುದಿಲ್ಲ, ಜನರೆಲ್ಲ ಕಾಯುತ್ತಿದ್ದಾರೆ, ನಾವು ಸಹ ಕಾಯೋಣ ಅಂತ ಬೊಮ್ಮಾಯಿ ಹೇಳಿದರು.

ಬೆಂಗಳೂರು: ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ (outgoing CM) ಮುಂದವರೆದಿರುವ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ (Krishna) ಹಿರಿಯ ಅಧಿಕಾರಿಗಳೊಂದಿಗೆ (senior officials) ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ಮುಖ್ಯಮಂತ್ರಿ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದಲ್ಲಿ ನಡೆದಿರುವ ಕಸರತ್ತಿನ ಬಗ್ಗೆ ಪ್ರಶ್ನೆಸಿದಾಗ ಅವರು ಟೀಕಿಸುವ ಗೋಜಿಗೆ ಹೋಗಲಿಲ್ಲ. ಕ್ಷೀಣ ಸ್ವರದಲ್ಲಿ ಬೊಮ್ಮಾಯಿ, ಅದು ಅವರ ಆಂತರಿಕ ವಿಚಾರ, ತಾವೇನೂ ಕಾಮೆಂಟ್ ಮಾಡುವುದಿಲ್ಲ ಎಂದರು. ಜನರೆಲ್ಲ ಕಾಯುತ್ತಿದ್ದಾರೆ, ನಾವು ಸಹ ಕಾಯೋಣ ಅಂತ ಬೊಮ್ಮಾಯಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ