ಜೈಲಿನಲ್ಲಿರುವ ದರ್ಶನ್ ನೋಡಲು ಅತ್ತಿಗೆ ಜೊತೆ ಬಂದ ದಿನಕರ್ ತೂಗುದೀಪ
ನಟ ದರ್ಶನ್ ಅವರ ತಮ್ಮ ದಿನಕರ್ ತೂಗುದೀಪ, ಪತ್ನಿ ವಿಜಯಲಕ್ಷ್ಮಿ ಅವರು ಇಂದು (ಜು.15) ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ. ದರ್ಶನ್ಗೆ ಜಾಮೀನು ಕೊಡಿಸುವ ಬಗ್ಗೆ ಕುಟುಂಬದವರು ಮಾತುಕತೆ ನಡೆಸುತ್ತಿದ್ದಾರೆ. ಎ2 ಆಗಿರುವ ಪವಿತ್ರಾ ಗೌಡ ಅವರ ತಾಯಿ ಹಾಗೂ ಸಹೋದರ ಕೂಡ ಇಂದು ಕಾರಾಗೃಹಕ್ಕೆ ಭೇಟಿ ನೀಡಿದ್ದಾರೆ.
ನ್ಯಾಯಾಂಗ ಬಂಧನದಲ್ಲಿ ಇರುವ ನಟ ದರ್ಶನ್ ಅವರ ಪರವಾಗಿ ಕುಟುಂಬದವರು ಕಾನೂನಿನ ಹೋರಾಟ ನಡೆಸುತ್ತಿದ್ದಾರೆ. ರೇಣುಕಾ ಸ್ವಾಮಿ ಮರ್ಡರ್ ಕೇಸ್ನಲ್ಲಿ ಪ್ರಮುಖ ಆರೋಪಿ ಆಗಿರುವ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಕಾಲ ಕಳೆಯುತ್ತಿದ್ದಾರೆ. ಆರಂಭದಲ್ಲಿ ಅವರು ಅರೆಸ್ಟ್ ಆದಾಗ ಕುಟುಂಬದವರು ಕೂಡಲೇ ಬಂದಿರಲಿಲ್ಲ. ನಂತರ ಪತ್ನಿ ವಿಜಯಲಕ್ಷ್ಮಿ, ತಮ್ಮ ದಿನಕರ್ ತೂಗುದೀಪ, ತಾಯಿ ಮೀನಾ ಮುಂತಾದವರು ಬಂದು ದರ್ಶನ್ಗೆ ಧೈರ್ಯ ತುಂಬಿದರು. ಆರೋಪಿಯ ಭೇಟಿ ಮಾಡಲು ಕುಟುಂಬದವರಿಗೆ ಹಾಗೂ ಆಪ್ತರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇಂದು (ಜುಲೈ 15) ದಿನಕರ್ ತೂಗುದೀಪ ಹಾಗೂ ವಿಜಯಲಕ್ಷ್ಮಿ ಅವರು ಪರಪ್ಪನ ಅಗ್ರಹಾರಕ್ಕೆ ಬಂದು ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ. ಆದಷ್ಟು ಬೇಗ ಅವರಿಗೆ ಜಾಮೀನು ಸಿಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಪವಿತ್ರಾ ಗೌಡ ಹಾಗೂ ಅವರ ಸಹಚರರು ಕೂಡ ಜೈಲಿನಲ್ಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.