ಯಾವುದೇ ಪ್ರಶ್ನೆ ಕೇಳಿ ಉತ್ತರಿಸಲು ನಾವು ರೆಡಿ, ಚರ್ಚೆ ಇವತ್ತೇ ಕೊನೆಗೊಳ್ಳಲಿ ಎಂದ ಸಿದ್ದರಾಮಯ್ಯ, ಶಿವಕುಮಾರ್

ಯಾವುದೇ ಪ್ರಶ್ನೆ ಕೇಳಿ ಉತ್ತರಿಸಲು ನಾವು ರೆಡಿ, ಚರ್ಚೆ ಇವತ್ತೇ ಕೊನೆಗೊಳ್ಳಲಿ ಎಂದ ಸಿದ್ದರಾಮಯ್ಯ, ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 15, 2024 | 8:08 PM

ವಿಷಾದಕರ ಸಂಗತಿಯೆಂದರೆ, ಸದನದಲ್ಲಿ ಯಾವ ವಿಷಯದ ಬಗ್ಗೆಯೂ ಸರಿಯಾಗಿ ಚರ್ಚೆ ನಡೆಯುತ್ತಿಲ್ಲ. ವಿರೋಧ ಪಕ್ಷದ ನಾಯಕರು ಪ್ರಶ್ನೆ ಕೇಳುವಾಗ ಆಡಳಿತ ಪಕ್ಷದವರು ಅಡ್ಡಿಪಡಿಸುತ್ತಾರೆ ಮತ್ತು ಇವರು ಉತ್ತರ ಹೇಳುವಾಗ ಅವರು ನಡುವೆ ಬ್ರೇಕ್ ಹಾಕಿಸುತ್ತಾರೆ. ಹಾಗಾತ್ತಿರುವುದಕ್ಕೆ ಸದನದಲ್ಲಿ ಬರೀ ಗಲಾಟೆ, ದೊಂಬಿಯಂಥ ಸನ್ನಿವೇಶ.

ಬೆಂಗಳೂರು: ವಿಧಾನಮಂಡಲ ಮುಂಗಾರು ಅಧಿವೇಶನ ಮೊದಲ ದಿನವಾಗಿದ್ದ ಇಂದು ಸದನ ರಣಾಂಗಣವಾಗಿತ್ತು. ಮುಡಾ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅವ್ಯವಹಾರ ಇಂದು ಭಾರೀ ಸುದ್ದಿ ಮಾಡಿದವು. ವಿರೋಧ ಪಕ್ಷದ ನಾಯಕರ ದಾಳಿಗೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಎದೆ ಸೆಟೆಸಿ ನಿಂತರಾದರೂ ಚರ್ಚೆ ಆರೋಗ್ಯಕರವಾಗಿ ನಡೆಯಲಿಲ್ಲ, ಚರ್ಚೆಗಿಂತ ಅರೋಪ ಮತ್ತು ಪ್ರತ್ಯಾರೋಪಗಳಲ್ಲೇ ಸಮಯ ವ್ಯರ್ಥವಾಯಿತು. ಸುನೀಲ ಕುಮರ್ ಮತ್ತು ಸಿದ್ದರಾಮಯ್ಯ ನಡುವೆ ನಡೆದ ವಾಗ್ವಾದ ಅಸ್ಪಷ್ಟವಾಗಿ ಕೇಳಿಸುತ್ತದೆ. ಈ ಹಂತದಲ್ಲಿ ವಿರೋಧ ಪಕ್ಷದ ನಾಯಕ ಅಶೋಕ, ತಾನು ಇಂದು ಸಾಯಂಕಾಲ ಶಾಸಕಾಂಗ ಸಭೆ ಕರೆದಿದ್ದು ನಾಳೆ ಚರ್ಚೆ ಮುಂದುವರಿಸಲು ಅವಕಾಶ ಮಾಡಿಕೊಡಬೇಕೆಂದು ಸ್ಪೀಕರ್ ಯುಟಿ ಖಾದರ್ ಅವರಿಗೆ ಮನವಿ ಮಾಡುತ್ತಾರೆ. ಆಗ ಶಿವಕುಮಾರ್ ಎದ್ದು ನಿಂತು ನಾಳೆ ಯಾಕೆ? ಏನೇ ಪ್ರಶ್ನೆ ಕೇಳಿದರು ಉತ್ತರಿಸಲು ರೆಡಿಯಿದ್ದೇವೆ, ಚರ್ಚೆಯನ್ನು ಇವತ್ತೇ ಮುಗಿಸಿಬಿಡಿ ಅನ್ನುತ್ತಾರೆ. ಆದರೆ ಸ್ಪೀಕರ್ ಮಧ್ಯೆ ಪ್ರವೇಶಿಸಿ ನಾಳೆ ನಿಮಗೆ ಎಷ್ಟು ಕಾಲಾವಕಾಶ ಬೇಕು ಅಂತ ಕೇಳಿದಾಗ ಅಶೋಕ ಅರ್ಧ ಗಂಟೆ ಸಾಕೆನ್ನುತ್ತಾರೆ. ಸ್ಪೀಕರ್ ಅವಕಾಶ ನೀಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮುಡಾ ಹಗರಣ: ಗೋಲ್ಮಾಲ್ ಸಿಎಂ 4000 ಕೋಟಿ ಗುಳುಂ, ಆರ್ ಅಶೋಕ ವಾಗ್ದಾಳಿ