ರನೌಟ್​ನೊಂದಿಗೆ ವಿದೇಶಿ ಲೀಗ್ ಆರಂಭಿಸಿದ ದಿನೇಶ್ ಕಾರ್ತಿಕ್

ರನೌಟ್​ನೊಂದಿಗೆ ವಿದೇಶಿ ಲೀಗ್ ಆರಂಭಿಸಿದ ದಿನೇಶ್ ಕಾರ್ತಿಕ್

ಝಾಹಿರ್ ಯೂಸುಫ್
|

Updated on: Jan 14, 2025 | 9:57 AM

SA20 2025: ಸೌತ್ ಆಫ್ರಿಕಾ ಟಿ20 ಲೀಗ್​ನ 6ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮಾಲೀಕತ್ವದ ಎಂಐ ಕೇಪ್​ಟೌನ್ ತಂಡವು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಒಡೆತನದ ಪಾರ್ಲ್ ರಾಯಲ್ಸ್ ತಂಡವನ್ನು ಸೋಲಿಸಿದೆ. ಈ ಪಂದ್ಯದಲ್ಲಿ ಕರಾರುವಾಕ್ ದಾಳಿ ಸಂಘಟಿಸುವ ಮೂಲಕ ಕಗಿಸೊ ರಬಾಡ ಭರ್ಜರಿ ದಾಖಲೆಯೊಂದನ್ನು ಸಹ ಬರೆದಿದ್ದಾರೆ.

ಸೌತ್ ಆಫ್ರಿಕಾ ಟಿ20 ಲೀಗ್ ಆಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ದಿನೇಶ್ ಕಾರ್ತಿಕ್ ಪಾಲಾಗಿದೆ. ಆದರೆ ಈ ಹೆಗ್ಗಳಿಕೆಯು ರನೌಟ್​ನೊಂದಿಗೆ ಶುರುವಾಗಿದ್ದು ಮಾತ್ರ ವಿಪರ್ಯಾಸ. ಏಕೆಂದರೆ ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಚೊಚ್ಚಲ ಬಾರಿ ಬ್ಯಾಟಿಂಗ್​ಗೆ ಇಳಿದ ಡಿಕೆ ರನೌಟ್ ಆಗುವ ಮೂಲಕ ನಿರಾಸೆ ಮೂಡಿಸಿದ್ದಾರೆ.

ಕೇಪ್​ಟೌನ್​ನ ನ್ಯೂಲ್ಯಾಂಡ್ಸ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಎಂಐ ಕೇಪ್​ಟೌನ್ ಹಾಗೂ ಪಾರ್ಲ್​ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಎಂಐ ಕೇಪ್​ಟೌನ್ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 172 ರನ್​ ಕಲೆಹಾಕಿತು.

ಈ 173 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಪಾರ್ಲ್ ರಾಯಲ್ಸ್ ತಂಡವು ಕೇವಲ 78 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕಣಕ್ಕಿಳಿದ ದಿನೇಶ್ ಕಾರ್ತಿಕ್ (2) ರನ್ ಕದಿಯುವ ಯತ್ನದಲ್ಲಿ ರನೌಟ್ ಆದರು.

ಈ ರನೌಟ್ ಪಾರ್ಲ್​ ರಾಯಲ್ಸ್ ತಂಡದ ಪಾಲಿಗೂ ದುಬಾರಿಯಾಯಿತು. ಏಕೆಂದರೆ ಈ ಪಂದ್ಯದಲ್ಲಿ 20 ಓವರ್​ಗಳನ್ನು ಆಡಿದ ಪಾರ್ಲ್​ ರಾಯಲ್ಸ್ 9 ವಿಕೆಟ್ ಕಳೆದುಕೊಂಡು 139 ರನ್​ಗಳಿಸಲಷ್ಟೇ ಶಕ್ತರಾದರು. ಅತ್ತ 172 ರನ್​ಗಳಿಸಿದ್ದ ಎಂಐ ಕೇಪ್​ಟೌನ್ ತಂಡವು 33 ರನ್​ಗಳ ಭರ್ಜರಿ ಜಯ ಸಾಧಿಸಿತು.