ಮಕರ ಸಂಕ್ರಾಂತಿ ಮತ್ತು ಮಕರ ಜ್ಯೋತಿ ಮಹತ್ವ ತಿಳಿಯಿರಿ

ಮಕರ ಸಂಕ್ರಾಂತಿ ಮತ್ತು ಮಕರ ಜ್ಯೋತಿ ಮಹತ್ವ ತಿಳಿಯಿರಿ

ವಿವೇಕ ಬಿರಾದಾರ
|

Updated on: Jan 14, 2025 | 6:52 AM

ಮಕರ ಸಂಕ್ರಾಂತಿಯು ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಸಮಯವಾಗಿದೆ. ಇದು ಪ್ರಕೃತಿಯಲ್ಲಿನ ಬದಲಾವಣೆಗಳನ್ನು ಸೂಚಿಸುತ್ತದೆ. ಜ್ಯೋತಿಷಿ ಬಸವರಾಜ ಗುರೂಜಿ ಅವರು ಈ ಹಬ್ಬದ ವಿಶೇಷತೆಗಳು, ಮಕರ ಜ್ಯೋತಿಯ ಮಹತ್ವ ಮತ್ತು ಸರಿಯಾದ ಆಚರಣಾ ವಿಧಾನಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಲೇಖನದಲ್ಲಿ ಅವರ ಅನಿಸಿಕೆಗಳನ್ನು ತಿಳಿದುಕೊಳ್ಳೋಣ.

ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಮಕರ ಸಂಕ್ರಾಂತಿಯ ವಿಶೇಷಗಳು, ಮಕರ ಜ್ಯೋತಿಯ ವಿಶೇಷಗಳು, ಹಾಗೇ ಮಕರ ಸಂಕ್ರಾಂತಿಯ ದಿವಸ ನಾವು ನಮ್ಮ ಯಾವ ರೀತಿಯ ನಮ್ಮ ನಡೆ-ನುಡಿಗಳಿರಬೇಕು? ಯಾವ ರೀತಿ ಆಚರಣೆ ಮಾಡಬೇಕು? ಎಂಬುವುದಕ್ಕೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಉತ್ತರ ನೀಡಿದ್ದಾರೆ.

ಮಕರ ಸಂಕ್ರಾಂತಿ ಅಂದರೆ ಇದು ಅಪೂರ್ವವಾದ ಪರ್ವ ವಿಶೇಷವಾದ ಕಾಲ. ಪ್ರಕೃತಿಯಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ. ಯುಗಾದಿಗೆ ಬದಲಾವಣೆ ಆಗುತ್ತೆ, ಅದೇ ರೀತಿ ನಭೋಮಂಡಲದಲ್ಲೂ ಕೂಡ ಬದಲಾವಣೆ ಆಗುವಂತಹ ಪರ್ವಕಾಲ ಇದಾಗಿದೆ. ಮಕರ ಸಂಕ್ರಾಂತಿಯನ್ನು ದೇಶಾದ್ಯಂತ ವಿಶೇಷವಾಗಿ ಆಚರಣೆ ಮಾಡುತ್ತಾರೆ. ತಿಥಿಗಳ ಆಧಾರದ ಮೇಲೆ ಕೆಲವು ಹಬ್ಬಗಳನ್ನ ಮಾಡಲಾಗುತ್ತದೆ. ಆದರೆ ಈ ಒಂದು ಹಬ್ಬ ಮಾತ್ರ ಸಾಕ್ಷಾತ್ ಜಗದ ಚಕ್ರ ಸೂರ್ಯನ ಪದ ಬದಲಾವಣೆ ಮೂಲಕ ಆಚರಣೆ ಮಾಡುತ್ತೇವೆ.