DK Shivakumar Press Meet Live: ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್ ಜಾರಕಿಹೊಳಿ, ಪರಮೇಶ್ವರ್ ಜಂಟಿ ಸುದ್ದಿಗೋಷ್ಠಿ ನೇರಪ್ರಸಾರ

|

Updated on: Jan 08, 2025 | 4:58 PM

DK Shivakumar Press Conference Live: ಕಾಂಗ್ರೆಸ್ ಮನೆಯಲ್ಲಿ ಡಿನ್ನರ್ ಪಾಲಿಟಿಕ್ಸ್ ಕಿಡಿ ಹೊತ್ತಿಸಿದೆ. ಮುಂದಿನ ಸಿಎಂ, ಕೆಪಿಸಿಸಿ ಸಾರಥಿ ಬಗ್ಗೆ ಗುಸುಗುಸು ಕೇಳಿ ಬರ್ತಿದೆ. ಮೊನ್ನೆ ನ್ಯೂ ಇಯರ್ ನೆಪದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ಸಿಎಂ ಆಪ್ತರು ಸಭೆ ಸೇರಿದ್ರು. ಇದೀಗ ಪರಮೇಶ್ವರ್ ಮನೆಯಲ್ಲಿ ಫಿಕ್ಸ್ ಆಗಿದ್ದ ಪಾರ್ಟಿಗೆ ಹೈ ಕಮಾಂಡ್ ಬಿಸಿ ಮುಟ್ಟಿಸಿದೆ. ಇನ್ನು ಡಿನ್ನರ್ ಮೀಟಿಂಗ್ ಬೆಳವಣಿಗೆ ಮಧ್ಯ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದ್ದು, ಅದರ ಲೈವ್​ ಇಲ್ಲಿದೆ.

ಬೆಂಗಳೂರು, (ಜನವರಿ 08): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿದೇಶ ಪ್ರವಾಸಕ್ಕೆ ಹೋಗಿದ್ದ ಹೊತ್ತಲ್ಲೇ ಸಿಎಂ ಸಿದ್ದರಾಮಯ್ಯ ಆಪ್ತ ಬಣ ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ಸಭೆ ಸೇರಿತ್ತು. ನ್ಯೂ ಇಯರ್ ಡಿನ್ನರ್ ನೆಪದಲ್ಲಿ ಎಲ್ರೂ ಒಂದಾಗಿದ್ರು. ಡಿಕೆಶಿ ಅನುಪಸ್ಥಿತಿಯಲ್ಲಿ ಪಕ್ಷದ ಆಂತರಿಕ ಬೆಳವಣಿಗೆಗಳ ಬಗ್ಗೆಯೂ ಬಿಸಿಬಿಸಿ ಚರ್ಚೆ ಮಾಡಿದ್ರು. ಇದೀಗ ದಲಿತ ನಾಯಕ ಗೃಹ ಸಚಿವ ಪರಮೇಶ್ವರ್, ನಾಳೆ ಸಂಜೆ ಡಿನ್ನರ್ ಮೀಟಿಂಗ್ ಕರೆದಿದ್ರು. ಆದ್ರೆ ಕೊನೆ ಕ್ಷಣದಲ್ಲಿ ರದ್ದಾಗಿದೆ. ಡಿನ್ನರ್ ಮೀಟಿಂಗ್ ಕರೆದಿದ್ದ ಪರಮೇಶ್ವರ್, ಇದು ಡಿನ್ನರ್ ಪಾರ್ಟಿ ಅಲ್ಲ.. ಬರೀ ಡಿನ್ನರ್. Sc/St ಸಮಾವೇಶ ನಡೆಸುವ ಉದ್ದೇಶ ಇದೆ. ನಾಳೆ ಸಂಜೆ ಸಮಾವೇಶದ ಪೂರ್ವಭಾವಿ ಸಭೆ ನಡೆಯಲಿದೆ ಅಂತ ಹೇಳಿದ್ರು. ಆದ್ರೆ ದೆಹಲಿಯಿಂದ ಹೈಕಮಾಂಡ್ ಕೆಂಗಣ್ಣು ಬೀರುತ್ತಿದ್ದಂತೆ ಪರಮೇಶ್ವರ್ ಕರೆದಿದ್ದ ಡಿನ್ನರ್ ಪಾಲಿಟಿಕ್ಸ್​ಗೆ ರೆಡ್ ಸಿಗ್ನಲ್ ಬಿದ್ದಿದೆ. ಸತೀಶ್ ಜಾರಕಿಹೊಳಿ ಮನೆಯಲ್ಲಿ ನಡೆದ ಸಭೆಗೆ ಡಿಸಿಎಂ ಡಿಕೆ ಬೇಸರ ಹೊರ ಹಾಕಿದ ಬೆನ್ನಲ್ಲೇ ಪರಮೇಶ್ವರ್ ಕರೆದಿದ್ದ ಸಭೆಯನ್ನೇ ಕಾಂಗ್ರೆಸ್ ಹೈಕಮಾಂಡ್ ರದ್ದು ಮಾಡಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿದ್ದು, ಅದರ ನೇರಪ್ರಸಾರ ಇಲ್ಲಿದೆ.