‘ದೇವರ’ ಬಿಡುಗಡೆ ಟೈಮ್​ನಲ್ಲೇ ‘ಮಾರ್ಟಿನ್​’ ರಿಲೀಸ್​; ಏನಂದ್ರು ನಿರ್ದೇಶಕರು?

Updated on: May 24, 2024 | 10:36 PM

ಎರಡು ಪ್ಯಾನ್​ ಇಂಡಿಯಾ ಸಿನಿಮಾಗಳು ಒಟ್ಟಿಗೆ ಬರುತ್ತಿವೆ. ಅಕ್ಟೋಬರ್​ 11ಕ್ಕೆ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಬಿಡುಗಡೆ ಆಗಲಿದೆ. ಜೂ.​ ಎನ್​ಟಿಆರ್​ ಅವರ ‘ದೇವರ’ ಚಿತ್ರ ಅಕ್ಟೋಬರ್​ 10ರಂದು ತೆರೆಕಾಣಲಿದೆ. ಇದರಿಂದ ಕ್ಲ್ಯಾಶ್​ ಆಗಲ್ವಾ ಎಂಬ ಪ್ರಶ್ನೆಗೆ ‘ಮಾರ್ಟಿನ್’ ಸಿನಿಮಾದ ನಿರ್ದೇಶನ ಎ.ಪಿ. ಅರ್ಜುನ್​ ಉತ್ತರ ನೀಡಿದ್ದಾರೆ.

ಇಷ್ಟು ದಿನ ಲೋಕಸಭಾ ಎಲೆಕ್ಷನ್​ ಮತ್ತು ಐಪಿಎಲ್​ ಅಬ್ಬರ ಜಾಸ್ತಿ ಇದ್ದಿದ್ದರಿಂದ ಕನ್ನಡದಲ್ಲಿ ಯಾವುದೇ ದೊಡ್ಡ ಸಿನಿಮಾಗಳು ಬಿಡುಗಡೆ ಆಗಿರಲಿಲ್ಲ. ಈಗ ‘ಮಾರ್ಟಿನ್​’ (Martin) ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸಲಾಗಿದೆ. ಅಕ್ಟೋಬರ್​ 11ರಂದು ‘ಮಾರ್ಟಿನ್’ ತೆರೆಕಾಣಲಿದೆ. ಜೂನಿಯರ್​ ಎನ್​ಟಿಆರ್​ ನಟನೆಯ ‘ದೇವರ’ ಸಿನಿಮಾ (Devara Movie) ಅಕ್ಟೋಬರ್​ 10ರಂದು ಬಿಡುಗಡೆ ಆಗಲಿದೆ. ಇದರಿಂದ ಡೇಟ್​ ಕ್ಲ್ಯಾಶ್​ ಆಗುವುದಿಲ್ಲವೇ ಎಂಬ ಪ್ರಶ್ನೆಗೆ ನಿರ್ದೇಶನ ಎ.ಪಿ. ಅರ್ಜುನ್​ (AP Arjun) ಅವರು ಉತ್ತರ ನೀಡಿದ್ದಾರೆ. ‘ವಿಜಯದಶಮಿ ಎಂಬುದು ಕನ್ನಡ ನಾಡಿನ ಅದ್ಭುತವಾದ ಹಬ್ಬ. ಈ ಹಬ್ಬಕ್ಕೆ ನಾವು ಏನಾದರೂ ಕೊಡಲೇಬೇಕು. ಆಗೆಲ್ಲ ಕನ್ನಡದಲ್ಲೇ ಮೂರು-ನಾಲ್ಕು ಸಿನಿಮಾ ರಿಲೀಸ್​ ಆಗುತ್ತಿತ್ತು. ಈಗ ನಮ್ಮ ವಿಜಯದಶಮಿಗೆ ನಮ್ಮದೊಂದು ಸಿನಿಮಾ ರಿಲೀಸ್​ ಮಾಡದಿದ್ದರೆ ಹೇಗೆ? ಕ್ಲ್ಯಾಶ್​ ಎನ್ನೋದಕ್ಕಿಂತಲೂ ನಮ್ಮ ತಂಡದಿಂದ ನಮ್ಮ ಸಿನಿಮಾ ಬರುತ್ತಿದೆ, ಅವರ ತಂಡದಿಂದ ಅವರ ಸಿನಿಮಾ ಬರುತ್ತಿದೆ. ಎರಡು ಸಿನಿಮಾಗಳನ್ನು ತಡೆದುಕೊಳ್ಳುವಂತಹ ಸಾಮರ್ಥ್ಯ ಇರುವ ಚಿತ್ರಮಂದಿರಗಳು ಭಾರತದಲ್ಲಿ ಇವೆ. ಎರಡೂ ಸಿನಿಮಾವನ್ನು ವಿಜಯದಶಮಿ ಸಮಯದಲ್ಲಿ ನೋಡುವಂತಹ ಜನರು ಕೂಡ ನಮ್ಮ ದೇಶದಲ್ಲಿ ಇದ್ದಾರೆ’ ಎಂದು ಎ.ಪಿ. ಅರ್ಜುನ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More