‘ಟ್ರೇಡ್​ಮಾರ್ಕ್​..’ ಸಾಂಗ್​ಅನ್ನು ಪುನೀತ್​ ಬಹಳ ಇಷ್ಟಪಟ್ಟಿದ್ದರು; ಚೇತನ್​ ಕುಮಾರ್

‘ಟ್ರೇಡ್​ಮಾರ್ಕ್​..’ ಸಾಂಗ್​ಅನ್ನು ಪುನೀತ್​ ಬಹಳ ಇಷ್ಟಪಟ್ಟಿದ್ದರು; ಚೇತನ್​ ಕುಮಾರ್

TV9 Web
| Updated By: ರಾಜೇಶ್ ದುಗ್ಗುಮನೆ

Updated on: Mar 02, 2022 | 6:00 AM

ಪುನೀತ್​ ಜನ್ಮದಿನದ ಪ್ರಯುಕ್ತ ಫೆಬ್ರವರಿ 17ರಂದು ‘ಜೇಮ್ಸ್​’ ತೆರೆಗೆ ಬರುತ್ತಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಸಿನಿಮಾದ ಟೀಸರ್​ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಈಗ ಈ ಸಿನಿಮಾದ ‘ಟ್ರೇಡ್​ಮಾರ್ಕ್​..’ ಸಾಂಗ್​ ರಿಲೀಸ್​ ಆಗಿದೆ.

ಪುನೀತ್​ ರಾಜ್​ಕುಮಾರ್ (Puneeth Rajkumar) ನಟನೆಯ ‘ಜೇಮ್ಸ್​’ ಸಿನಿಮಾ (James Movie) ಬಗ್ಗೆ ಇರುವ ಕುತೂಹಲ ದಿನಕಳೆದಂತೆ ಹೆಚ್ಚುತ್ತಲೇ ಇದೆ. ಇನ್ನೇನು ಎರಡು ವಾರಗಳಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ. ಪುನೀತ್​ ಜನ್ಮದಿನದ ಪ್ರಯುಕ್ತ ಫೆಬ್ರವರಿ 17ರಂದು ‘ಜೇಮ್ಸ್​’ ತೆರೆಗೆ ಬರುತ್ತಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಸಿನಿಮಾದ ಟೀಸರ್​ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಈಗ ಈ ಸಿನಿಮಾದ ‘ಟ್ರೇಡ್​ಮಾರ್ಕ್​..’ ಸಾಂಗ್​ (Trademark Song) ರಿಲೀಸ್​ ಆಗಿದೆ. ಈ ಹಾಡಿನಲ್ಲಿ ರಚಿತಾ ರಾಮ್​, ಶ್ರೀಲೀಲಾ, ಆಶಿಕಾ ರಂಗನಾಥ್, ಚಂದನ್​ ಶೆಟ್ಟಿ ಮೊದಲಾದವರು ಕಾಣಿಸಿಕೊಂಡಿದ್ದಾರೆ. ಹಾಡಿನಲ್ಲಿ ‘ಜೇಮ್ಸ್​’ ಚಿತ್ರದ ಮೇಕಿಂಗ್​ ವಿಡಿಯೋ ಕೂಡ ಸೇರಿಸಲಾಗಿದೆ. ಈ ಹಾಡನ್ನು ಪುನೀತ್​ ರಾಜ್​ಕುಮಾರ್ ಅವರು ತುಂಬಾನೇ ಇಷ್ಟಪಟ್ಟಿದ್ದರು. ಈ ಬಗ್ಗೆ ನಿರ್ದೇಶಕ ಚೇತನ್​ ಕುಮಾರ್ ಮಾತನಾಡಿದ್ದಾರೆ.

ಇದನ್ನೂ ಓದಿ: ‘ಜೇಮ್ಸ್​’ ಚಿತ್ರದಲ್ಲಿ ಪುನೀತ್​ಗೆ ಡಬ್​ ಮಾಡುವಾಗ ಶಿವಣ್ಣ ಎಮೋಷನಲ್​ ಆಗಿದ್ದರು: ನಿರ್ದೇಶಕ ಚೇತನ್​

ಪುನೀತ್​ ರಾಜ್​ಕುಮಾರ್​ ಹೆಸರಲ್ಲಿ ಉಡಾವಣೆ ಆಗಲಿದೆ ಉಪಗ್ರಹ; ಇದಕ್ಕೆ ತಗಲುತ್ತಿರುವ ವೆಚ್ಚ ಎಷ್ಟು?