ಕಬ್ಜ ಸಿನಿಮಾ ಆಗಲು ಮುಖ್ಯ ಕಾರಣ ಯಾರು? ಬಹಿರಂಗಪಡಿಸಿದ ನಿರ್ದೇಶಕ ಆರ್.ಚಂದ್ರು
ಕಬ್ಜ ಸಿನಿಮಾ ಇನ್ನೆರಡು ದಿನಗಳಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾ ನಿರ್ಮಾಣದ ಹಿಂದೆ ಇರುವ ಶಕ್ತಿಯನ್ನು ನಿರ್ದೇಶಕ ಆರ್ ಚಂದ್ರು ಪರಿಚಯಿಸಿದ್ದಾರೆ.
ಆರ್.ಚಂದ್ರು(R Chandr) ನಿರ್ದೇಶನದ ಕಬ್ಜ (Kabzaa) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಉಪೇಂದ್ರ (Upendra), ಸುದೀಪ್, ಶಿವರಾಜ್ ಕುಮಾರ್ ನಟಿಸಿರುವ ಈ ಸಿನಿಮಾದ ಬಗ್ಗೆ ದೊಡ್ಡ ನಿರೀಕ್ಷೆ ಇದೆ. ಕೆಜಿಎಫ್ ಮಾದರಿಯಲ್ಲಿಯೇ ಅದ್ಧೂರಿಯಾಗಿ ಈ ಸಿನಿಮಾವನ್ನು ತೆರೆಗೆ ತಂದಿದ್ದಾರೆ ಆರ್.ಚಂದ್ರು. ಭಾರಿ ಬಜೆಟ್ನ ಈ ಸಿನಿಮಾ ಆಗಲು ನಟರಾದ ಸುದೀಪ್, ಉಪೇಂದ್ರ, ಶಿವರಾಜ್ ಕುಮಾರ್ ಜೊತೆಗೆ ಮತ್ತೊಬ್ಬರು ಬಹಳ ಮುಖ್ಯಪಾತ್ರವಹಿಸಿದ್ದಾರೆ ಎಂದ ಚಂದ್ರು, ನಾನು ಕಷ್ಟದಲ್ಲಿದ್ದಾಗ ನನಗೆ ಮೈಲಾರಿ ಸಿನಿಮಾ ಕೊಟ್ಟ ಕೆ.ಪಿ.ಶ್ರೀಕಾಂತ್ ಅವರೇ ಈಗ ಕಬ್ಜ ಸಿನಿಮಾ ಆಗಲು ಕಾರಣ ಎಂದಿದ್ದಾರೆ.
Latest Videos