ಕಡಿಮೆ ಸಂಭಾವನೆಗೆ ನಟಿಸಲು ಪವಿತ್ರಾ ಗೌಡ ಒಪ್ಪಿಕೊಂಡಿದ್ರು; ಕಾರಣ ತಿಳಿಸಿದ ನಿರ್ದೇಶಕ

ಕಡಿಮೆ ಸಂಭಾವನೆಗೆ ನಟಿಸಲು ಪವಿತ್ರಾ ಗೌಡ ಒಪ್ಪಿಕೊಂಡಿದ್ರು; ಕಾರಣ ತಿಳಿಸಿದ ನಿರ್ದೇಶಕ

Mangala RR
| Updated By: ಮದನ್​ ಕುಮಾರ್​

Updated on: Jul 10, 2024 | 7:01 PM

ದರ್ಶನ್​ ಸ್ನೇಹಿತೆ ಪವಿತ್ರಾ ಗೌಡ ಬಗ್ಗೆ ಈಗ ಕೇಳಿಬರುತ್ತಿರುವ ವಿಷಯಗಳೇ ಬೇರೆ, ಆರಂಭದ ದಿನಗಳಲ್ಲಿ ಅವರು ಇದ್ದಂತಹ ರೀತಿಯೇ ಬೇರೆ. ಹಲವು ವರ್ಷಗಳ ಹಿಂದೆ ಪವಿತ್ರಾ ಗೌಡ ಅವರು ಆಗತಾನೇ ಗುರುತಿಸಿಕೊಳ್ಳುತ್ತಿದ್ದರು. ಆ ಸಂದರ್ಭದಲ್ಲಿ ಅವರು ಕಡಿಮೆ ಸಂಭಾವನೆಗೆ ನಟಿಸಲು ಒಪ್ಪಿಕೊಂಡಿದ್ದರು. ಆ ಬಗ್ಗೆ ‘ಸಾಗುವ ದಾರಿಯಲ್ಲಿ’ ಚಿತ್ರದ ನಿರ್ದೇಶಕ ಶಿವಕುಮಾರ್​ ಗೌಡ ಅವರು ಮಾತನಾಡಿದ್ದಾರೆ.

ನಟಿ ಪವಿತ್ರಾ ಗೌಡ ಅವರು ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಅವರು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿ ಜೈಲು ಸೇರಿದ್ದಾರೆ. ಪವಿತ್ರಾ ಗೌಡ ಕೊನೆಯದಾಗಿ ನಟಿಸಿದ್ದು ‘ಸಾಗುವ ದಾರಿಯಲ್ಲಿ’ ಸಿನಿಮಾದಲ್ಲಿ. ಆ ಚಿತ್ರದ ನಿರ್ದೇಶಕ ಶಿವಕುಮಾರ್​ ಗೌಡ ಅವರು ಕೆಲವು ಇಂಟರೆಸ್ಟಿಂಗ್​ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ಸಾಗುವ ದಾರಿಯಲ್ಲಿ’ ಚಿತ್ರದಲ್ಲಿ ನಟಿಸಲು ಪವಿತ್ರಾ ಗೌಡ ಹೆಚ್ಚು ಸಂಭಾವನೆ ಪಡೆದಿರಲಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ನಿರ್ದೇಶಕರು ವಿವರಿಸಿದ್ದಾರೆ. ‘ನಮ್ಮ ಸಿನಿಮಾದಲ್ಲಿ ದೊಡ್ಡ ತಾರಾಗಣ ಇತ್ತು. ದೇವರಾಜ್​, ಜೈ ಜಗದೀಶ್​, ರಂಗಾಯಣ ರಘು, ಶರತ್​ ಲೋಹಿತಾಶ್ವ, ಸಾಧು ಕೋಕಿಲ, ಬುಲೆಟ್​ ಪ್ರಕಾಶ್ ಮುಂತಾದ ಕಲಾವಿದರು ಇದ್ದರು. ಪವಿತ್ರಾ ಗೌಡ ಇನ್ನೂ ಹೊಸಬರಾಗಿದ್ದರು. ಈ ಚಿತ್ರದಿಂದ ತಾವು ಬೆಳಕಿಗೆ ಬರಬಹುದು ಎಂಬ ಆಲೋಚನೆ ಅವರಿಗೆ ಇತ್ತು. ಹಾಗಾಗಿ ನಾವು ಅವರಿಗೆ ಹೆಚ್ಚು ಸಂಭಾವನೆ ಕೊಟ್ಟಿಲ್ಲ ಎನಿಸುತ್ತದೆ’ ಎಂದು ಶಿವಕುಮಾರ್​ ಗೌಡ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.