Karnataka Assembly Polls: ಟಿಕೆಟ್ ಸಿಗದೆ ಕಣ್ಣೀರು ಹಾಕಿದ ಬಿಜೆಪಿಯ ಎನ್ ಆರ್ ಸಂತೋಷ್ ಅರಸೀಕೆರೆಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ

|

Updated on: Apr 13, 2023 | 5:09 PM

ಸಂತೋಷ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದು 50,000 ಬೆಂಬಲಿಗರೊಂದಿಗೆ ಹೋಗಿ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ

ಹಾಸನ: ಬಿಎಸ್ ಯಡಿಯೂರಪ್ಪನವರ (BS Yediyurappa) ಅಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಬಿಜೆಪಿ ಧುರೀಣ ಎನ್ ಆರ್ ಸಂತೋಷ್ (NR Santosh) ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿಲ್ಲ. ಸಂತೋಷ್ ಅರಸೀಕೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆಎಂ ಶಿವಲಿಂಗೇಗೌಡ (KM Shivalinge Gowda) ವಿರುದ್ಧ ಸೆಣಸುವ ಉತ್ಸುಕತೆಯಲ್ಲಿದ್ದರು. ಟಿಕೆಟ್ ಸಿಗದ ಕಾರಣ ಬೆಂಬಲಿಗರೊಂದಿಗೆ ನಡೆಸಿದ ಸಭೆಯಲ್ಲಿ ಚಿಕ್ಕ ಮಗುವಿನಂತೆ ಅತ್ತ ಸಂತೋಷ್ ಪಕ್ಷದ ವಿರುದ್ಧ ಬಂಡೆದಿದ್ದಾರೆ. ಅವರೀಗ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದು 50,000 ಬೆಂಬಲಿಗರೊಂದಿಗೆ ಹೋಗಿ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ. ಅಸಂತುಷ್ಟ ಸಂತೋಷ್ ಬೇರೆ ಪಕ್ಷ ಸೇರಿದರೂ ಆಶ್ಚರ್ಯವಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 13, 2023 05:09 PM